Karnataka Times
Trending Stories, Viral News, Gossips & Everything in Kannada

RTO: HSRP ನಂಬರ್ ಪ್ಲೇಟ್ ಹಾಗೂ ದಂಡಗಳ ಬಗ್ಗೆ ಅಧಿಕೃತ ಹೊಸ ಆದೇಶ ಬಿಡುಗಡೆ ಮಾಡಿದ RTO! ಎಲ್ಲರಿಗೂ ಸೂಚನೆ

advertisement

ಇಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಅಧಿಕವಾಗಿದೆ. ಸಾರಿಗೆ ಇಲಾಖೆಯು ವಾಹನ ಸವಾರರಿಗೆ ಕಟ್ಟು ನಿಟ್ಟಿನ ಕ್ರಮ ಜಾರಿಗೆ ತಂದರೂ ಕೂಡ ಪಾಲನೆ ಮಾಡುವ ಸಂಖ್ಯೆ ಕಡಿಮೆ ಯಾಗಿದೆ. ಅದರಲ್ಲೂ ಟ್ರಾಫಿಕ್ ನಿಯಮ ಪಾಲಿಸದೇ ಬೇಕಾಬಿಟ್ಟಿ ಯಾಗಿ ವಾಹನ ಚಲಾಯಿಸಿ, ರಸ್ತೆಯಲ್ಲಿ ನಡೆದುಕೊಂಡು ಹೋದವರು ಕೂಡ ಪ್ರಾಣ ಕಳೆದುಕೊಂಡ ಘಟನೆಗಳು ಕೂಡ ನಡೆದಿದೆ. ಹಾಗಾಗಿ ಸಾರಿಗೆ‌ ಇಲಾಖೆ (RTO) ಯು ಕೂಡ ಕೆಲವೊಂದು ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಲೆ ಇರುತ್ತದೆ.

ನಂಬರ್ ಪ್ಲೇಟ್ ಕಡ್ಡಾಯ:

 

Image Source: Times of India

 

ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್​ ಪ್ಲೇಟ್ (HSRP Number Plate) ಅಳವಡಿಕೆ ಮಾಡುವುದು ಕಡ್ಡಾಯ ಎಂದು ಸಾರಿಗೆ ‌ಇಲಾಖೆಯು ಮತ್ತೆ ಮತ್ತೆ ಸೂಚನೆಯನ್ನು ನೀಡುತ್ತಲೇ ಬಂದಿದೆ. ಆದರೂ ಹೆಚ್ಚಿನ ವಾಹನ ಸವಾರರು ಈ ಬಗ್ಗೆ ಜಾಗ್ರತೆ ಗೊಂಡಿಲ್ಲ. 2019 ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ (HSRP) ಫಲಕ‌ ಕಡ್ಡಾಯ ಮಾಡಿದ್ದು ಈ ಬಗ್ಗೆ ಸಾರಿಗೆ ಇಲಾಖೆ (RTO) ಕಳೆದ ವರ್ಷ ಆಗಸ್ಟ್‌ನಲ್ಲಿ ಅಧಿಸೂಚನೆ ಕೂಡ ನೀಡಿತ್ತು.

ಹಲವು ಭಾರಿ ಅವಕಾಶ ನೀಡಿದೆ:

advertisement

ಈಗಾಗಲೇ ಕೆಲವು ತಿಂಗಳಿನಿಂದ ಎಲ್ಲಾ ಮಾದರಿಯ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ (HSRP Number Plate) ಅಳವಡಿಸುವ ಪ್ರಕ್ರಿಯೆ ನಡೆದಿದೆ. ಅದೇ ರೀತಿ ಸಾರಿಗೆ ಇಲಾಖೆಯು ಸಮಯ ಕೂಡ ವಿಸ್ತರಣೆ ಮಾಡಿದೆ. ಇನ್ನೂ ಕೂಡ ನಂಬರ್ ಪ್ಲೇಟ್ ಅಳವಡಿಸದವರ ಸಂಖ್ಯೆ ಅಧಿಕವಾಗಿದ್ದು ಈಗ ಮೇ 31ರ ವರೆಗೆ ಸಾರಿಗೆ ಇಲಾಖೆಯು ಅವಕಾಶ ನೀಡಿದೆ. ಈ ಗಡುವಿನ ನಂತರ ಸಾರಿಗೆ ಇಲಾಖೆ ಮತ್ತೆ ಗಡುವು ವಿಸ್ತರಣೆ ಮಾಡುವುದು ಅನುಮಾನ ಎನ್ನಲಾಗಿದೆ.

ದಂಡ ವಿಧಿಸಲಾಗುತ್ತದೆ:

 

Images Source: Hindustan Times

 

ಇದೀಗ ಮೇ. 31ರವರೆಗೆ ಎಚ್ ಎಸ್ ಆರ್ ಪಿ (HSRP) ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಮತ್ತೆ ಅವಧಿ ವಿಸ್ತರಣೆ ಇಲ್ಲ. ಜೂ. 1 ರಿಂದ‌ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ಪೋಲಿಸ್ ಇಲಾಖೆ ತಯಾರು ಆಗಿದೆ.‌ ಈ ಸಮಯದ ಒಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ಹಾಕಲಾಗುತ್ತದೆ.

ಯಾಕಾಗಿ ಈ ನಿಯಮ?

ವಾಹನಗಳ ಸುರಕ್ಷತೆ ಕಾರಣದಿಂದ, ಅಪರಾಧ ತಡೆಯುವ ನಿಟ್ಟಿನಲ್ಲಿ ಈ ನಿಯಮ ಜಾರಿಗೆ ಬಂದಿದೆ. ಈ ಪ್ರಕ್ರಿಯೆ ಮಾಡದೇ ಇದ್ದಲ್ಲಿ‌ ಮುಂದಿನ ದಿನಗಳಲ್ಲಿ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ವಿಮೆ ಹಾಗೂ ಇನ್ನಿತರ ಕೆಲಸಗಳಿಗೆ ಸಮಸ್ಯೆ ಆಗಲಿದೆ. ಹಾಗಾಗಿ ವಾಹನ ಸವಾರರು ಈ ಬಗ್ಗೆ ಎಚ್ಚೆತ್ತುಕೊಂಡು ಮೊದಲು ಈ ಕೆಲಸ ಮಾಡಿದರೆ ದಂಡ ಪಾವತಿಯನ್ನು ತಡೆಯಬಹುದಾಗಿದೆ.

advertisement

Leave A Reply

Your email address will not be published.