Karnataka Times
Trending Stories, Viral News, Gossips & Everything in Kannada

HSRP: HSRP ಗೂ ಮುನ್ನ ಈ ತಪ್ಪು ಮಾಡುವವರ ಮೇಲೆ ಕಣ್ಣಿಟ್ಟ ಪೋಲೀಸರು! RTO ಹೊಸ ಆದೇಶ

advertisement

ಸಾರಿಗೆ ಇಲಾಖೆ ರೋಡುಗಳಲ್ಲಿ ಓಡಾಡುವಂತಹ ವಾಹನಗಳು ಸರಿಯಾದ ರೀತಿಯಲ್ಲಿ ಓಡಾಡಬೇಕು ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸಬಾರದು ಎನ್ನುವ ಕಾರಣಕ್ಕಾಗಿ ಸಮಯಕ್ಕೆ ತಕ್ಕಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡುತ್ತವೆ. ಇನ್ನು ಸದ್ಯಕ್ಕೆ ರಾಜಧಾನಿ ದೆಹಲಿಗೆ ಬಗ್ಗೆ ಮಾತನಾಡೋದಾದ್ರೆ ಅಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆಗಳನ್ನು ಕಾಣಬಹುದಾಗಿದೆ. ಇದೇ ಕಾರಣಕ್ಕಾಗಿ ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ.

ಈ ರೀತಿಯ ವಾಹನಗಳಿಗೆ ಬೀಳಲಿದೆ 10,000 ರೂಪಾಯಿ ಫೈನ್

ಒಂದು ವೇಳೆ ವಾಹನವನ್ನು ನೀವು ಚಲಾಯಿಸುತ್ತಿದ್ದೀರಿ ಎಂದಾದಲ್ಲಿ ಪ್ರಮುಖವಾಗಿ ನಿಮ್ಮ ಬಳಿ ಪಿಯುಸಿ ಪ್ರಮಾಣ ಪತ್ರ ಅಂದರೆ ಎಮಿಷನ್ ಟೆಸ್ಟ್ ಮಾಡಿರುವಂತಹ ಪ್ರಮಾಣ ಪತ್ರ ಇರಲೇಬೇಕು ಎಂಬುದಾಗಿ ಸಾರಿಗೆ ಸಂಸ್ಥೆ ಹೇಳುತ್ತದೆ. ಇದು ಇಲ್ಲದೆ ಹೋದಲ್ಲಿ ಟ್ರಾಫಿಕ್ ಪೊಲೀಸರು 10000 ವರೆಗೆ ಫೈನ್ ವಿಧಿಸಬಹುದಾದಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಪೆಟ್ರೋಲ್ ಪಂಪ್ ನಿಂದ ಹಿಡಿದು ಪ್ರತಿಯೊಂದು ಸಿಗ್ನಲ್ಗಳಲ್ಲಿ ಕೂಡ ಸಿಸಿಟಿವಿ ಕ್ಯಾಮೆರಾ ವನ್ನು ಅಳವಡಿಸಲಾಗಿದ್ದು ನಿಮಗೆ ತಿಳಿಯದೆ ನಿಮ್ಮ ಕಾರ್ ಹೆಸರಿನಲ್ಲಿ ಆನ್ಲೈನ್ ಫೈನ್ ಕೂಡ ಬೀಳಬಹುದು. ಹೀಗಾಗಿ ನೀವು ಯಾವುದೇ ರೀತಿಯ ಟ್ರಾಫಿಕ್ ನಿಯಮ (Traffic Rule) ಅಥವಾ ಸಾರಿಗೆ ನಿಯಮವನ್ನ ಉಲ್ಲಂಘನೆ ಮಾಡಿದ್ರು ಕೂಡ ನಿಮ್ಮ ವಾಹನದ ಮೇಲೆ ದಂಡವನ್ನು ವಿಧಿಸಲಾಗುತ್ತದೆ ಅನ್ನೋದನ್ನ ತಿಳಿದುಕೊಳ್ಳಿ.

advertisement

ದೇಶದ ರಾಜಧಾನಿಯಾಗಿರುವಂತಹ ದೆಹಲಿಯಲ್ಲಿ ಈ ವಿಚಾರದ ಬಗ್ಗೆ ಸಂಪೂರ್ಣ ಕಟ್ಟುನಿಟ್ಟಿನ ಕ್ರಮವನ್ನು ಕೈ ತೆಗೆದುಕೊಳ್ಳುವಂತಹ ಯೋಜನೆಗಳು ಜಾರಿಯಾಗಿವೆ. ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂತಹ ಕಟ್ಟುನಿಟ್ಟಿನ ನಿಯಮಗಳನ್ನು ಕೈ ತೆಗೆದುಕೊಳ್ಳುತ್ತಿವೆ. ಈಗಾಗಲೇ 500ಕ್ಕೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾ ಗಳನ್ನು ಎಲ್ಲಾ ಕಡೆಗಳಲ್ಲಿ ಅಳವಡಿಸಲಾಗಿದೆ.

Image Source: DriveSpark

PUC ಸರ್ಟಿಫಿಕೇಟ್ (PUC Certificate)  ಅನ್ನು ಮಾಡಿಸಿಕೊಳ್ಳದೆ ಹೋದಲ್ಲಿ ಅಥವಾ ಅದರ ನಿಗದಿತ ಸಮಯ ಮುಗಿದ ನಂತರ ಮತ್ತೆ ಅದನ್ನು ಮರು ನವೀಕರಣ ಮಾಡಿಸಿಕೊಳ್ಳದೆ ಹೋದಲ್ಲಿ ಅದರ ಮೇಲೆ ಕೂಡ ಫೈನ್ ಬೀಳುವ ಸಾಧ್ಯತೆ ಹೆಚ್ಚಾಗಿದ್ದು ಈ ಪ್ರಕ್ರಿಯೆಯನ್ನು ತಪ್ಪದೆ ಸರಿಯಾದ ಸಂದರ್ಭದಲ್ಲಿ ಮಾಡಿಸಿಕೊಳ್ಳಿ. ದೊಡ್ಡ ಮಟ್ಟದ ಫೈನ್ ನಿಂದ ತಪ್ಪಿಸಿಕೊಳ್ಳಿ.

ಕೇವಲ ದೇಶದ ರಾಜಧಾನಿ ಆಗಿರುವಂತಹ ದೆಹಲಿಯಲ್ಲಿ ಮಾತ್ರವಲ್ಲದೆ ನಮ್ಮ ಕರ್ನಾಟಕದ ಪ್ರಮುಖ ನಗರಗಳಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೂಡ ಈ ರೀತಿಯ ಕಾನೂನನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬರು ಕೂಡ ಬೇರೆ ಬೇರೆ ಡಾಕ್ಯೂಮೆಂಟ್ಸ್ ಗಳ ಜೊತೆಗೆ ನಿಮ್ಮ ವಾಹನ ಯಾವುದೇ ಪ್ರದೂಷಣೆ ಮಾಡುವಂತಹ ಹೊಗೆಯನ್ನು ಬಿಡುತ್ತಿಲ್ಲ ಅನ್ನುವಂತಹ ಈ ಸರ್ಟಿಫಿಕೇಟ್ ಅನ್ನು ಕೂಡ ಪ್ರಮುಖವಾಗಿ ಕಡ್ಡಾಯವಾಗಿ ನಿಮ್ಮ ವಾಹನದಲ್ಲಿ ಇಟ್ಟುಕೊಳ್ಳಬೇಕಾಗಿರುತ್ತದೆ. ಇಲ್ಲವಾದಲ್ಲಿ ಫೈನ್ ಕಟ್ಟೋದಿಕ್ಕೆ ಕಿಸೆಯನ್ನು ಖಾಲಿ ಮಾಡುವುದಕ್ಕೆ ಸಿದ್ಧವಾಗಿರಬೇಕು.

advertisement

Leave A Reply

Your email address will not be published.