Karnataka Times
Trending Stories, Viral News, Gossips & Everything in Kannada

SSLC Result 2024: SSLC ಫಲಿತಾಂಶ ಯಾವಾಗ? ಈ ಬಗ್ಗೆ ಬಿಗ್ ಅಪ್ಡೇಟ್ ಘೋಷಣೆ

advertisement

ಇಂದು ಶಿಕ್ಷಣ ಎಂಬುದು ಪ್ರತಿಯೊಂದು ವ್ಯಕ್ತಿಗೂ ಅಗತ್ಯ ಎನಿಸಿದೆ. ಹಾಗಾಗಿ ಇಂದು ಎಷ್ಟೇ ಬಡತನ ಇದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲು ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ, ಆದರೆ ಇಂದು ಪ್ರತಿಯೊಂದು ಪೋಷಕರು ಎಷ್ಟೇ ಫೀಸ್ ಕಟ್ಟಲು ಇದ್ದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಉತ್ತಮ ಶಿಕ್ಷಣ ನೀಡುವ ಶಾಲೆಗಳಿಗೆ ಕಳುಹಿಸುತ್ತಾರೆ, ಕಲಿಕೆ ಅಂತ ಬಂದಾಗ ತರಗತಿ ವಾರು ಪರೀಕ್ಷೆ ಸಾಮಾನ್ಯ.

ಅದೇ ರೀತಿ ಕಲಿಕೆಯಲ್ಲಿ SSLC ಮತ್ತು PUC ಬಹಳ ಮುಖ್ಯವಾದ ಹಂತ ವಾಗಿದ್ದು ಈ ತರಗತಿಯ ಕಲಿಕೆಗೆ ಹೆಚ್ಚಿನ ಪ್ರಶಾಸ್ತ್ಯ ನೀಡಲಾಗುತ್ತದೆ‌. ಕಾರಣ ಈ ತರಗತಿಯ ಅಂಕಪಟ್ಟಿಗಳು ಎಲ್ಲೇ ಹೋದರು ಬಹಳ ಮುಖ್ಯವಾಗುತ್ತದೆ.

ವಿದ್ಯಾರ್ಥಿಗಳಿಗೆ ಕುತೂಹಲ:

ಈ ಭಾರಿಯ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ಮಾರ್ಚ್‌ 25 ರಿಂದ ಏಪ್ರಿಲ್ 6, 2024 ರವರೆಗೆ ನಡೆಸಲಾಗಿದ್ದು ಪರೀಕ್ಷೆ ಮುಗಿದಿದೆ. ಈಗಾಗಲೇ ಏಪ್ರಿಲ್ 15 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಕೂಡ ಆರಂಭವಾಗಿದೆ. ಈ ನಡುವೆ SSLC Result 2024 ಯಾವಾಗ ಎಂದು ಪರೀಕ್ಷೆ ಬರೆದೆ ವಿದ್ಯಾರ್ಥಿಗಳು ಬಹಳಷ್ಟು ಕಾತುರರಾಗಿದ್ದಾರೆ.

ಯಾವಾಗ ರಿಸಲ್ಟ್?

advertisement

ವಿವಿಧ ಮೂಲಗಳ ಪ್ರಕಾರ ಎಸ್ಎಸ್ಎಲ್ ಸಿ ಫಲಿತಾಂಶ 2024 (SSLC Result 2024) ಈ ವಾರ ಅಥವಾ ಮೇ ಮೊದಲ ವಾರದಲ್ಲಿ ಪ್ರಕಟವಾಗಲಿದೆ ಎನ್ನುವ ಸುದ್ದಿ‌ವಿವಿಧ ಮೂಲಗಳಿಂದ ಲಭ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕವನ್ನು ಹಾಕಿ ರಿಸಲ್ಟ್ ‌ನೋಡಬಹುದು.

ಈ ಬಾರಿ ಪರೀಕ್ಷೆ ಮೂರು ಬಾರಿ:

 

Image Source: IndiaToday

 

ಈ ಶೈಕ್ಷಣಿಕ ಸಾಲಿನಿಂದ SSLC Exam ಬರೆದವರು ಹೆಚ್ಚು ಭಯ ಪಡುವ ಅಗತ್ಯ ಇಲ್ಲ‌. ಈ ಭಾರಿ ವಿದ್ಯಾರ್ಥಿಗಳು ಪರೀಕ್ಷೆಯನ್ನು 3 ಬಾರಿ ಬರೆಯಬಹುದು. ಈ ಹಿಂದೆ ಅನುತ್ತೀರ್ಣರಾದವರು ಪೂರಕ ಪರೀಕ್ಷೆ ಆಟೆಂಡ್ ಮಾಡಬೇಕಿತ್ತು. ಆದರೆ ಈ ಸಾಲಿನಿಂದ ಫೇಲಾದರೂ 3 ಬಾರಿ ಪರೀಕ್ಷೆ ಬರೆಯುವ ಅವಕಾಶ ಇದೆ. ಇದರಲ್ಲಿ ಪೂರಕ ಪರೀಕ್ಷೆ ಆಗಿರುವುದಿಲ್ಲ‌ ಫ್ರೆಶ್ ಸ್ಟೂಡೆಂಟ್‌ ಎಂದೇ ದಾಖಲಾಗಿ ಇರುತ್ತದೆ.

ಹೀಗೆ ರಿಸಲ್ಟ್ ನೋಡಿ:

SSLC Result 2024 ನೋಡಲು ಈ‌ ಲಿಂಕ್ https://karresults.nic.in, kseab.karnataka.gov.in ಈ ಮೂಲಕ ವಿದ್ಯಾರ್ಥಿಗಳು ತಮ್ಮ ರಿಸಲ್ಟ್ ಅನ್ ಲೈನ್ ಮೂಲಕ ತಿಳಿಯಬಹುದು.

advertisement

Leave A Reply

Your email address will not be published.