Karnataka Times
Trending Stories, Viral News, Gossips & Everything in Kannada

ಶ್ರೀಮಂತರ ಹಾಗೆ ಮನೆ ಕಟ್ಟಬೇಕು ಅಂದುಕೊಂಡಿರುವ ಬಡವರಿಗೆ ಬಿಗ್ ಬಿಗ್ ಅಪ್ಡೇಟ್! ಕೇಂದ್ರದ ಘೋಷಣೆ

advertisement

ಇಂದು ಪ್ರತಿಯೊಬ್ಬರಿಗೂ ‌ಕೂಡ ಸ್ವಂತ ಮನೆ ಅನ್ನೋದು ಬಹಳ ಮುಖ್ಯವಾಗುತ್ತದೆ.ಆದ್ರೆ ಬಡವರ್ಗದ ಜನತೆಗೆ ಸ್ವಂತ ಮನೆ ನಿರ್ಮಾಣ ಮಾಡುವುದು ಕಷ್ಟವೇ ಆಗಿದೆ.‌ಮನೆ ನಿರ್ಮಾಣ, ನಿವೇಶನ ,ನಿರ್ಮಾಣದ ಕಚ್ಚಾವಸ್ತುಗಳು ಬಹಳಷ್ಟು ಹೆಚ್ಚಾಗಿದ್ದು ಹೆಚ್ಚಿನ ಹಣವನ್ನು ಹೊಂದಿಸಬೇಕಾಗುತ್ತದೆ.ಇದಕ್ಕಾಗಿ ಬಡವರ್ಗದ ಜನರಿಗೆ ಮನೆ ನಿರ್ಮಾಣ ಮಾಡುವ ಕನಸನ್ನು ನನಸು ಮಾಡಲು ಕೇಂದ್ರ ಸರಕಾರ ಪಿಎಂ ಆವಾಸ್ ಯೋಜನೆ (PM Awas Yojana) ಜಾರಿಗೆ ತಂದಿದ್ದು ಇದೀಗ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೆ ಗೆದ್ದರೆ ಇದರ ಸಬ್ಸಿಡಿ ಮೊತ್ತ ಹೆಚ್ಚಳ ಮಾಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

PM Awas Yojana:

 

Image Source: MagicBricks

 

ಈ ಪಿಎಂ ಆವಾಸ್ ಯೋಜನೆ (PM Awas Yojana) ಯನ್ನು ಕೇಂದ್ರ ಸರಕಾರ ಆರಂಭ ಮಾಡಿದ್ದು ಈ ಯೋಜನೆಯನ್ನು 2015ರ ಜೂನ್‌ 1ರಂದು ಮೊದಲ ಬಾರಿಗೆ ಪರಿಚಯಿಸಲಾಯಿತು. ಈ ಯೋಜನೆಯಡಿ ವಾರ್ಷಿಕ ಶೇ.6.50ರ ಬಡ್ಡಿದರದಲ್ಲಿ ಸಾಲ ಲಭ್ಯವಾಗುತ್ತಿತ್ತು.ಹಾಗಾಗಿ ಹೆಚ್ಚಿನ ಬಡವರ್ಗದ ಜನರು ಈ ಯೋಜನೆಯ ಫಲಾನು ಭವಿಗಳು ಆಗಿದ್ದರು. ಅದೇ ರೀತಿ ಈ ವರ್ಷದ 2024-25ನೇ ಸಾಲಿನ ಮಧ್ಯಂತರ ಬಜೆಟ್ ನಲ್ಲಿ ಈ ವಸತಿ ಯೋಜನೆಗೆ 80,671 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

advertisement

ಸಬ್ಸಿಡಿ ಮೊತ್ತ ಹೆಚ್ಚಳ:

 

Image Source: Newstrack

 

ಪಿಎಂ ಆವಾಸ್ ಯೋಜನೆ (PM Awas Yojana) ಯ ಮೂಲಕ ಬಡವರ್ಗದ ಜನತೆಗೆ ಮನೆ ನಿರ್ಮಾಣ ಮಾಡುವ ಸೌಲಭ್ಯ ವನ್ನು ಕೇಂದ್ರ ಸರಕಾರ ವಿತರಣೆ ಮಾಡುತ್ತಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ನಗರ ಹಾಗೂ ಹಳ್ಳಿಯ ಬಡವರಿಗೆ ವಸತಿ ಸಬ್ಸಿಡಿ ಯೋಜನೆಯನ್ನು ನಿಗಧಿ ಪಡಿಸಿದ್ದು ಇದೀಗ ಈ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ತಿರ್ಮಾನ ಮಾಡಿದೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ಲಭ್ಯವಾಗಿದೆ. ಈ ಸಬ್ಸಿಡಿ ಸಾಲವನ್ನ ಮನೆಯ ನಿರ್ಮಾಣದ ಬೆಲೆಯ ಮತ್ತು ಗಾತ್ರಕ್ಕೆ ಅನುಗುಣವಾಗಿ ನಿಗಧಿ ಮಾಡಲಾಗುತ್ತದೆ.

ಎಷ್ಟು ಹೆಚ್ಚಳ:

ವಿವಿಧ ಮಾಹಿತಿ ಪ್ರಕಾರ 35 ಲಕ್ಷ ರೂ.ಗಳ ವೆಚ್ಚದ ಮನೆಗೆ, ಸಬ್ಸಿಡಿ ಸಾಲವನ್ನ 30 ಲಕ್ಷ ರೂ.ಗೆ ಹೆಚ್ಚಿಸಲಾಗುತ್ತದೆ ಎನ್ನಲಾಗಿದೆ. ಹೌದು ಬಳಕೆದಾರರು 30 ಲಕ್ಷ ರೂ. ತನಕ ಗೃಹಸಾಲದ ಮೇಲೆ ಸಬ್ಸಿಡಿ ಪಡೆಯಬಹುದು.ಈ ವಸತಿ ಯೋಜನೆಯನ್ನು ವಿಸ್ತಾರ ಮಾಡಿದರೆ ಸ್ವಯಂ ಉದ್ಯೋಗ ಇರುವ‌ ಉದ್ಯೋಗಿಗಳು,‌ ಮತ್ತು ಸಣ್ಣ ವ್ಯಾಪಾರಿಗಳು ಇತ್ಯಾದಿ ತಮ್ಮದೇ ಆದ ಮನೆಗಳನ್ನ ನಿರ್ಮಿಸಲು ಸರ್ಕಾರದಿಂದ ಸಹಾಯ ಪಡೆಯಬಹುದು. ಹಾಗಾಗಿ ಈ ಭಾರಿ ಲೋಕ ಸಭೆ ಚುನಾವಣೆ ಯಲ್ಲಿ ಮೋದಿ ಗೆದ್ದರೆ ಈಯೋಜನೆಯ ಸೌಲಭ್ಯ ಮತ್ತಷ್ಟು ಅಭಿವೃದ್ಧಿ ಯಾಗಬಹುದು ಎನ್ನಲಾಗಿದೆ.

advertisement

Leave A Reply

Your email address will not be published.