Karnataka Times
Trending Stories, Viral News, Gossips & Everything in Kannada

Loan: ಬ್ಯಾಂಕ್ ಹಾಗೂ ಯಾವುದೇ ಸಹಕಾರಿ ಸಂಘದಲ್ಲಿ ಸಾಲ ಮಾಡಿರುವ ರೈತರಿಗೆ ಗುಡ್ ನ್ಯೂಸ್! ಕೂಡಲೇ ತಿಳಿದುಕೊಳ್ಳಿ

advertisement

ಲೋಕಸಭಾ ಚುನಾವಣೆ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 26ರಂದು ಮತ್ತು ಮೇ 7ರಂದು 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮತದಾನ ಪ್ರಚಾರ ಕೂಡ ಜೊರಾಗಿಯೇ ನಡೆಯುತ್ತಿದೆ.

ತಮ್ಮ ತಮ್ಮ ಪಕ್ಷದ ನಾಯಕರು ಜನರ ಮುಂದೆ ತಮ್ಮ ಪ್ರಣಾಳಿಕೆ ಯ ಭರವಸೆಗಳನ್ನು ನೀಡುತ್ತಿದ್ದಾರೆ.‌ ಆದೇ ರೀತಿ ಕಾಂಗ್ರೆಸ್ ಸರಕಾರವು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕ ಮತ ಗಳಿಸಿತ್ತು. ಇದೀಗ ಲೋಕ ಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಜಾರಿಗೆ ಬಂದರೆ ರೈತರ ಸಾಲ ಮನ್ನಾ (Loan Waiver) ಮಾಡುವುದಾಗಿ ತಿಳಿಸಿದೆ.

ಸಿದ್ದರಾಮಯ್ಯ ಹೇಳಿಕೆ

 

Image Source: Mint

 

ದೇಶದ ಭವಿಷ್ಯ ರೂಪಿಸಲು ಜನರ ಸಹಕಾರ ಕೂಡ ಬಹಳ ಮುಖ್ಯವಾಗುತ್ತದೆ. ಜನರೇ ಯಾವ ಪಕ್ಷಕ್ಕೆ ಅಧಿಕಾರ ಕೊಟ್ಟರೆ ದೇಶದ ಹಿತ ಕಾಪಾಡುತ್ತಾರೆ ಎಂದು ತೀರ್ಮಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ. ಸಿದ್ದರಾಮಯ್ಯ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶ್ರೀ ರಾಮ ಮಾರ್ಕೆಟ್ ಮೈದಾನದಲ್ಲಿ ಆಯೋಜನೆ ಮಾಡಿದ್ದಂತಹ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಬೆಂಬಲವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಬಡವರಿಗೆ ಬೆಂಬಲ ನೀಡುತ್ತಿದೆ

advertisement

ಈ ದೇಶದಲ್ಲಿ ಬಡ ಜನತೆಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಸರಕಾರವೇ ಆಗಿದೆ. ಬಡವರಿಗೆ ,‌ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಈ ವರ್ಗದ ಪರವಾಗಿ ಮೋದಿ ಸರಕಾರ ಯಾವತ್ತೂ ಕೆಲಸ ಮಾಡಿಲ್ಲ. ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.‌

ದೇಶದ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಬಿಜೆಪಿ ತಿಳಿಸಿದೆ. ಆದರೆ ನಿರುದ್ಯೋಗದ ಸಮಸ್ಯೆ ಹೆಚ್ಚಾಗಿದೆ. ರೈತರ ಅಭಿವೃದ್ಧಿ ಸಹ ಮಾಡಿಲ್ಲ ಎಂದರು. ಕಾಂಗ್ರೆಸ್ ಸರಕಾರ 5 ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದೆ. ಬಡವರ ಪಾಲಿಗೆ ಈ ಯೋಜನೆಗಳು ವರದಾನ ವಾಗಿದೆ ಎಂದು ಗ್ಯಾರಂಟಿ ಯೋಜನೆಯ ಬಗ್ಗೆ ತಿಳಿಸಿದರು.

ರೈತರ ಸಾಲ ಮನ್ನಾ:

 

Image Source: Ruralvoice

 

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರೈತರಿಗೆ ಹೆಚ್ಚಿನ ಅಭಿವೃದ್ದಿ ಪರ ಕೈಗೊಳ್ಳುತ್ತೇವೆ. ರೈತರನ್ನು ಕೃಷಿಯಲ್ಲಿ ಬೆಂಬಲಿಸುವ ನಿಟ್ಟಿನಲ್ಲಿ‌ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತೇವೆ. ಅದೇ ರೀತಿ ಸಾಲವನ್ನು (Loan) ಸಂಪೂರ್ಣವಾಗಿ ಮನ್ನಾ ಮಾಡ ಲಾಗುವುದು ಎಂಬ ಭರವಸೆ ನೀಡಿದ್ದಾರೆ. ರೈತರ ಇಳುವರಿ ಹೆಚ್ಚಿಸಲು ಮಾರುಕಟ್ಟೆ ಯಲ್ಲಿ ಸರಿಯಾದ ಬೆಲೆ ಸಿಗಲು ನ್ಯಾಯಯುತ ಬೆಲೆ ನೀಡಲು ಎಂ.ಎಸ್.ಪಿ ಯನ್ನು ಕಾನೂನಿನ ಚೌಕಟ್ಟಿಗೆ ತರಲಾಗುವುದು‌ ಎಂದು ಹೇಳಿದರು.

ಕಾಂಗ್ರೆಸ್ ಅವಧಿಯಲ್ಲಿ ರಾಜ್ಯ ಸರ್ಕಾರ 50,000 ರೂ.ಗಳ ವರೆಗೆ ಸೊಸೈಟಿಗಳಲ್ಲಿ ಪಡೆದ ಬೆಳೆ ಸಾಲವನ್ನು 27 ಲಕ್ಷ ರೈತರ ಸಾಲ ಮನ್ನ ಮಾಡಿದೆ. ಆದರೆ ನರೇಂದ್ರ ಮೋದಿ ಸರಕಾರ ರೈತರಿಗಾಗಿ ಬೇಡಿಕೆ ಇದ್ದರೂ ಸಾಲ ಮಾಡಿಲ್ಲ ಎಂದರು.

advertisement

Leave A Reply

Your email address will not be published.