Karnataka Times
Trending Stories, Viral News, Gossips & Everything in Kannada

Farm Loan Waiver: ಕೃಷಿ ಸಾಲ ಮನ್ನದ ಬಗ್ಗೆ ಹೊಸ ಅಪ್ಡೇಟ್! ಡೈರೆಕ್ಟ್ ಲಿಂಕ್ ಇಲ್ಲಿದೆ ಸ್ಟೇಟಸ್ ಕೂಡಲೇ ತಿಳಿದುಕೊಳ್ಳಿ

advertisement

ರೈತರು ಈ ದೇಶದ ಪ್ರಮುಖ ಅಂಗವಾಗಿದ್ದು ರೈತರನ್ನು ಅಭಿವೃದ್ಧಿ ಮಾಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ‌. ಇಂದು ಕೃಷಿಯಲ್ಲಿ ಯುವಕರು ಕೂಡ ತೊಡಗಿ ಕೊಂಡಿದ್ದಾರೆ. ಹಾಗಾಗಿ ಸರಕಾರ ಕೂಡ ಕೃಷಿಕರ ಅಭಿವೃದ್ಧಿ ಗಾಗಿ ಹೆಚ್ಚು ಹೆಚ್ಚು ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೃಷಿಯಲ್ಲಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರವು ಶೂನ್ಯ ಬಡ್ಡಿದರದ ಸಾಲ ಸೌಲಭ್ಯ,ಬೆಳೆ ವಿಮೆ ಪರಿಹಾರ, ಕಿಸಾನ್ ಯೋಜನೆ (Kisan Yojana), ರೈತ ಯೋಜನೆ ಇತ್ಯಾದಿಗಳನ್ನು ಜಾರಿಗೆ ತಂದಿದ್ದು ಕೃಷಿ ಸಲಕರಣೆ, ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಸರಕಾರ ಕಲ್ಪಿಸುತ್ತಿದೆ. ಅದೇ ರೀತಿಯಲ್ಲಿ ಇದೀಗ ರೈತರ ಸಾಲ ಮನ್ನಾ (Farm Loan Waiver) ವಿಚಾರವಾಗಿಯು ಗುಡ್ ನ್ಯೂಸ್ ನೀಡಿದ್ದು ಯಾವೆಲ್ಲ ರೈತರ ಸಾಲ ಮನ್ನಾ ಆಗಲಿದೆ. ಸಾಲ ಮನ್ನಾ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಕ್ರೆಡಿಟ್ ಕಾರ್ಡ್ ಸಾಲ ವಿನಾಯಿತಿ:

 

Image Source: Kisan Tak

 

ಅದರಲ್ಲೂ ರಾಜ್ಯ ಸರ್ಕಾರವು ಕೃಷಿಕರ ಅಭಿವೃದ್ಧಿ ಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರ್ತಾ ಇದ್ದು ಇದೀಗ ಕ್ರೆಡಿಟ್ ಕಾರ್ಡ್ ಯೋಜನೆ (Credit Card Yojana) ಯಡಿಯಲ್ಲಿ ಸಾಲ ಪಡೆದಿದ್ದ ರೈತರಿಗೆ ಗುಡ್ ನ್ಯೂಸ್ ವಿಚಾರವೊಂದನ್ನು ನೀಡಿದೆ. ಈ ಯೋಜನೆಯಡಿ ಕೃಷಿ ಸಾಲ ಮಾಡಿದ್ದ ರೈತರಿಗೆ ಒಂದು ಲಕ್ಷದವರೆಗಿನ ಕೃಷಿ ಸಾಲದ ವಿನಾಯಿತಿ ನೀಡುವುದಾಗಿ ತಿಳಿಸಿದೆ.

ವಿನಾಯಿತಿ ‌ನೀಡಲಿದೆ:

 

advertisement

Image Source: Tribune India

 

ಈ ಭಾರಿಯಲ್ಲಿ ಮಳೆ ಬಾರದೇ ನೀರಿಲ್ಲದೆ ರೈತರು ಬಹಳಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಈಗಾಗಲೇ ಸಾಲ (Loan) ಮಾಡಿದ್ದ ರೈತರಿಗೆ ಸಾಲ ಮರುಪಾವತಿ ಮಾಡಲು ಕೂಡ ಕಷ್ಟ ಸಾಧ್ಯವಾಗಿದೆ. ಹಾಗಾಗಿ ಈಗಾಗಲೇ ಕ್ರೆಡಿಟ್ ಕಾರ್ಡ್ (Credit Card) ಅಡಿಯಲ್ಲಿ ಹಲವು ಖಾಸಗಿ ಬ್ಯಾಂಕುಗಳಲ್ಲಿ ಸಾಲ ಪಡೆದಿರುವಂತಹ ರೈತರ ಬೆಳೆ ನಷ್ಟವಾಗಿದ್ದರೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಇದ್ದಲ್ಲಿ‌ ಒಂದು ಲಕ್ಷದವರೆಗಿನ ವಿನಾಯಿತಿಯನ್ನು ರೈತರಿಗೆ ಸರ್ಕಾರ ನೀಡಿದೆ.

ಯಾರು ಅರ್ಹರು:

ಸಾಲ ಮನ್ನಾ ಯೋಜನೆಗೆ ಅರ್ಜಿ ಹಾಕಿದ್ದ ರೈತರಿಗೆ ಮತ್ತು ಈ ಪಟ್ಟಿಯಲ್ಲಿ ರೈತರ ಹೆಸರು ಇದ್ದರೆ ಮಾತ್ರ ಈ ಸೌಲಭ್ಯ ಪಡೆಯಬಹುದು‌.ಇನ್ನು ಅರ್ಜಿ ಸಲ್ಲಿಕೆ ಮಾಡಿದ್ದ ರೈತರ ಸಾಲದ ಅವಧಿಯು ಅವರ ಪಾವತಿ ಸ್ಥಿತಿಯ ನಿಗದಿತ ದಿನಾಂಕಕ್ಕಿಂತ ಹೆಚ್ಚಾಗಿರಬೇಕು.ಅರ್ಜಿ ಅಲ್ಲಿಕೆ ಮಾಡಿರುವ ರೈತನ ಬಳಿ ಎರಡು ಎಕರೆ ಜಮೀನು ಮತ್ತು ಕೃಷಿ ಹೊಂದಿರಬೇಕು.

ನಿಮ್ಮ ಹೆಸರು ಇದೆಯಾ?

ಕೃಷಿ ಸಾಲ ಮನ್ನಾ ಯೋಜನೆಯ ಪಟ್ಟಿ ಬಿಡುಗಡೆ ಮಾಡಿದ್ದು ರೈತರು ತಮ್ಮ ಕೃಷಿ ಸಾಲ ಮನ್ನಾದಲ್ಲಿ (Farm Loan Waiver) ತಮ್ಮ ಹೆಸರು ಇದೆಯಾ ಎಂದು ತಿಳಿದು ಕೊಳ್ಳಬಹುದು. ಮೊದಲಿಗೆ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ raitamitra.karnataka.gov.in ಭೇಟಿ ನೀಡಿ, ಲೋನ್ ಸ್ಟೇಟಸ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಅದರಲ್ಲಿ ನಿಮ್ಮಖಾತೆಯನ್ನು ತೆರೆದ ನಂತರ ಆ ಪಟ್ಟಿಯಲ್ಲಿ ಹೆಸರು ಇದ್ದರೆ‌ ಇದಕ್ಕೆ ನೀವು ಅರ್ಹರು.

advertisement

Leave A Reply

Your email address will not be published.