Karnataka Times
Trending Stories, Viral News, Gossips & Everything in Kannada

HSRP Number Plate: ಇಂತಹವರು HSRP ನಂಬರ್ ಪ್ಲೇಟ್ ಬುಕ್ ಮಾಡುವ ಅಗತ್ಯ ಇಲ್ಲ! ಕೇಂದ್ರದ ಆದೇಶ

advertisement

ರಾಜ್ಯಾದ್ಯಂತ ವಾಹನ ಇರುವವರಿಗೆ ಸರಕಾರ ಇತ್ತೀಚೆಗಷ್ಟೇ  ಹೊಸ ಆದೇಶ ಒಂದನ್ನು ನೀಡಿತ್ತು. ಅದರ ಪ್ರಕಾರ  ಯಾರೆಲ್ಲ ವಾಹನ ಹೊಂದಿದ್ದಾರೆ ಅವರಿಗೆ HSRP Number Plate ಅನ್ನು ಅಳವಡಿಕೆ ಮಾಡಬೇಕು. ಮಾಡದೆ ಇದ್ದವರಿಗೆ ಕೂಡ ಪುನಃ ಪುನಃ ಅವಕಾಶ ನೀಡಲಾಗುತ್ತಿದೆ‌. ಹೀಗಾಗಿ ವಾಹನಗಳಿಗೆ HSRP ಅಳವಡಿಕೆ ಬಗ್ಗೆ ಜನರಿಗೂ ಕೂಡ ಮನದಟ್ಟು ಆಗುತ್ತಿದೆ ಎನ್ನಬಹುದು. ಅದರ ಜೊತೆಗೆ ಹೊಸದಾಗಿ ವಾಹನ ಖರೀದಿ ಮಾಡೋರಿಗೆ ಬಿಗ್ ರಿಲೀಫ್ ಸಿಗಲಿದೆ.

2019ಕ್ಕಿಂತ ಮೊದಲು ನೋಂದಣಿ ಆದ ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಕಡ್ಡಾಯ ಮಾಡಿದ್ದ ಬಳಿಕ ಆನ್ಲೈನ್ ಮೂಲಕ HSRP Number Plate ಗೆ ಬೇಡಿಕೆ ಇಟ್ಟವರ ಪ್ರಮಾಣ ಕೂಡ ಅಧಿಕವಾಗುತ್ತಿದೆ‌. ಅನೇಕ ತಾಂತ್ರಿಕ ಕಾರಣದಿಂದಾಗಿ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಆದರೂ ಕೂಡ ಅನೇಕರಿಗೆ ನಂಬರ್ ಪ್ಲೇಟ್ ಇನ್ನು ಕೂಡ ಬಂದಿಲ್ಲ ಈ ನಡುವೆ ಹೊಸದಾಗಿ ವಾಹನ ಖರೀದಿ ಮಾಡ್ತೇನೆ ಅನ್ನೋರಿಗೆ HSRP ಯಿಂದ ಮುಕ್ತತೆ ಸಿಗಲಿದೆ.

ಗಡುವು ವಿಸ್ತರಣೆ:

 

Image Source: Times of India

 

HSRP Number Plate ಅಳವಡಿಕೆ ಮಾಡಿಕೊಂಡಿದ್ದವರು ಈಗ ರಿಲೀಫ್ ಆಗಿದ್ದಾರೆ. ಅದೇ ರೀತಿ ಇನ್ನು ಕೂಡ ಮಾಡಿಸಿ ಕೊಂಡಿಲ್ಲ ಅನ್ನೋರಿಗೆ ಈಗಾಗಲೇ ಅನೇಕ ಸಲ ಅವಕಾಶ ನೀಡಲಾಗಿದೆ. ಮೊದಲು ಫೆಬ್ರವರಿ 17 ಕೊನೆಯ ದಿನಾಂಕ ಎಂದು ಹೇಳಲಾಗಿತ್ತು ಬಳಿಕ ಮತ್ತೆ ಸಮಯಾವಕಾಶ ನೀಡಲಾಗಿದೆ. ಅದೇ ರೀತಿ ಈಗ ಕೊನೆಯದಾಗಿ ಮೇ 31ರ ಒಳಗೆ ವಾಹನಕ್ಕೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಮುಂದುವರೆಸುವಂತೆ ತಿಳಿಸಲಾಗಿದೆ.

advertisement

ಹೊಸ ವಾಹನಕ್ಕೆ HSRP ಮಾಡಿಸಬೇಕಾಗಿಲ್ಲ:

 

Image Source: Spinny

 

ಹೊಸದಾಗಿ ವಾಹನ ಖರೀದಿ‌ ಮಾಡ್ತೇನೆ ಅನ್ನೋರು ಅಥವಾ ಈಗ ವಾಹನ ಖರೀದಿ ಮಾಡಿ ಒಂದು ವರ್ಷ ಕೂಡ ಆಗಿರದೇ ಇದ್ದರೆ ವಾಹನ ಖರೀದಿ ಮಾಡಿದ್ದ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು ಎಂಬ ನಿಯಮ ಇತ್ತೀಚೆಗಷ್ಟೇ ಜಾರಿಗೆ ಬಂದಿದೆ. ಹಾಗಾಗಿ‌ ನೀವು ಹೊಸ ವಾಹನ ಖರೀದಿ ಮಾಡುವಾಗ HSRP ರಿಜಿಸ್ಟ್ರೇಶನ್ ಆಗಿಯೇ ನಿಮ್ಮ ಕೈ ಸೇರಲಿದೆ ಎಂದು ಈ ಮೂಲಕ ಹೇಳಬಹುದು.

ನಿಯಮ ಮೀರಿದರೆ ಏನಾಗುತ್ತೆ?

HSRP Number Plate ಅನ್ನು ನಿಗಧಿತ ದಿನಾಂಕದ ಒಳಗೆ ಮಾಡಿಸದೇ ಇದ್ದರೆ ನಿಮಗೆ ಮೇ 31ರ ಬಳಿಕ ಫೈನ್ ಬೀಳುವ ಸಾಧ್ಯತೆ ಇದೆ. ನಿಮ್ಮ ಲೈಸೆನ್ಸ್ ರದ್ದು ಸಹ ಆಗಬಹುದು. ಹಾಗಾಗಿ ನೀವು ರಿಜಿಸ್ಟ್ರೇಶನ್ ಮಾಡಿಸಿದ್ದರೆ ಅದರ ಒಂದು ಕಾಪಿಯನ್ನು ಮತ್ತು ನೀವು ಬಿಲ್ ಕಟ್ಟಿದ್ದ ರಿಸಿಪ್ಟ್ ಅನ್ನು ಸದಾ ಜೊತೆಗೆ ಇಟ್ಟುಕೊಂಡು ಪ್ರಯಾಣ ಮಾಡಿದರೆ ನೀವು ದಂಡ ಪಾವತಿ ಮಾಡಬೇಕಿಲ್ಲ.

advertisement

Leave A Reply

Your email address will not be published.