Karnataka Times
Trending Stories, Viral News, Gossips & Everything in Kannada

Electric Car: ನಿಮ್ಮ ಹಳೆ ಕಾರನ್ನು ಎಲೆಕ್ಟ್ರಿಕ್ ಕಾರ್ ಆಗಿ ಪರಿವರ್ತಿಸಲು ಎಷ್ಟು ಖರ್ಚಾಗುತ್ತೆ ಗೊತ್ತಾ? ಮುಗಿಬಿದ್ದ ಜನ

advertisement

ಸದ್ಯದ ಮಟ್ಟಿಗೆ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರು ಕೂಡ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳನ್ನು ಬಯಸುತ್ತಿದ್ದಾರೆ. ಇದೈ ಕಾರಣಕ್ಕಾಗಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಇನ್ನು ಇದೇ ರೀತಿಯಲ್ಲಿ ಈಗ ಹಳೆಯ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ರೂಪಾಂತರ ಮಾಡುವಂತಹ ಕೆಲಸ ಕೂಡ ಜೋರಾಗಿ ನಡೆಯುತ್ತಿದೆ. ರಿವೋಲ್ಟ್ ಮೋಟಾರ್ಸ್ (Revolt Motors) ಕಂಪನಿಯ ರೀತಿಯಲ್ಲಿ ಟೆಕ್ನೋಲಜಿಗಳನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದನ್ನೇ ರೆಟ್ರೋ ಫಿಟ್ ಇವಿ ಕಿಟ್ (Retrofit EV Kit) ಎಂದು ಕರೆಯಲಾಗುತ್ತದೆ.

Retrofit EV Kits ಏನು ಅನ್ನೋದನ್ನ ಅರ್ಥ ಮಾಡಿಕೊಳ್ಳೋಣ:

 

Image Source: Team BHP

Retrofit EV Kits ಅಂದ್ರೆ ಪ್ರಮುಖವಾಗಿ ಇಂದಿನ ಅಂದರೆ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ಬಳಸಿಕೊಂಡು ಚಲಾವಣೆ ಆಗುತ್ತಿರುವ ವಾಹನವನ್ನು ನೇರವಾಗಿ ಎಲೆಕ್ಟ್ರಿಕ್ ವಾಹನವನ್ನಾಗಿ ಮಾಡುವ ಪರಿಕರ. ಈ ಕಿಟ್ ನಲ್ಲಿ ನಿಮಗೆ ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಪ್ಯಾಕ್, ಮೋಟಾರ್ ಕಂಟ್ರೋಲರ್ ಸೇರಿದಂತೆ ಬೇರೆ ಉಪಕರಣಗಳು ಸಿಗುತ್ತವೆ. ಎಲೆಕ್ಟ್ರಿಕ್ ಡ್ರೈವ್ ಟ್ರೈನ್ (Electric Drivetrain) ಅನ್ನು ಅಳವಡಿಸುವುದಕ್ಕಾಗಿ ಕಾರಿನಲ್ಲಿರುವ ಬೇರೆ ಕೆಲವೊಂದು ಪ್ರಮುಖ ವಸ್ತುಗಳನ್ನು ತೆಗೆದು ಹಾಕಲಾಗುತ್ತದೆ.

ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಅನ್ನಾಗಿ ಪರಿವರ್ತಿಸುವುದಕ್ಕೆ Retrofit EV Kits ನ RV400 ಮಾಡೆಲ್ ಒಂದೊಳ್ಳೆ ಆಯ್ಕೆ ಆಗಿದೆ ಎನ್ನ ಬಹುದು. 1.14 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಇದನ್ನು ಖರೀದಿಸಬಹುದಾಗಿದೆ.

ರೆಟ್ರೋ ಫಿಟ್ ಬೆಲೆ ರೂ.50,000 ಗಳಿಂದ ರೂ.1 ಲಕ್ಷಗಳವರೆಗೆ ಇರುತ್ತದೆ. ಬ್ಯಾಟರಿ ಕೆಪ್ಯಾಸಿಟಿ ಹಾಗೂ ಮೋಟರ್ ಮೇಲೆ ಇದರ ಬೆಲೆ ನಿರ್ಧರಿತವಾಗಿರುತ್ತದೆ. ಹತ್ತರಿಂದ ಇಪ್ಪತ್ತು ಸಾವಿರ ರೂಪಾಯಿಗಳವರೆಗೆ ಅದನ್ನು ಇನ್ಸ್ಟಾಲ್ ಮಾಡೋದಕ್ಕಾಗಿ ಕೆಲಸಗಾರರ ಖರ್ಚು ಆಗಿರುತ್ತದೆ. ಒಟ್ಟಾರೆಯಾಗಿ ಇದನ್ನು ನಿಮ್ಮ ಕಾರಿಗೆ ಅಳವಡಿಸುವುದಕ್ಕೆ 60 ಸಾವಿರದಿಂದ ಒಂದು ಪಾಯಿಂಟ್ 20 ಲಕ್ಷ ರೂಪಾಯಿಗಳವರೆಗೆ ಖರ್ಚಾಗುತ್ತದೆ.

advertisement

ಕಾನೂನು ನಿಯಮಗಳು:

ಸದ್ಯದ ಮಟ್ಟಿಗೆ ಈ ರೀತಿ ಹಳೆಯ ವಾಹನಗಳಿಗೆ ಎಲೆಕ್ಟ್ರಿಕ್ ಕಿಟ್ (Electric Kit) ಅನ್ನು ಅಳವಡಿಸುವಂತಹ ಯಾವುದು ಸರಿಯಾದ ನಿಯಮಗಳು ಭಾರತದ ಕಾನೂನಿನಲ್ಲಿ ಇಲ್ಲ. ಹೀಗಾಗಿ ರಸ್ತೆಯ ಮೇಲೆ ಇದರ ಚಲಾವಣೆ ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

Performance and Range:

ರೆಟ್ರೋ ಫಿಟ್ (Retrofit) ಆಗಿರುವಂತಹ ಎಲೆಕ್ಟ್ರಿಕ್ ವಾಹನಗಳು ನಿಜವಾಗಿಯೂ ಫ್ಯಾಕ್ಟರಿಯಲ್ಲಿ ನಿರ್ಮಿತವಾಗಿರುವಂತಹ ಎಲೆಕ್ಟ್ರಿಕ್ ವಾಹನಗಳಿಗೆ ಹೋಲಿಸಿದರೆ ಪರ್ಫಾರ್ಮೆನ್ಸ್ ಹಾಗು ರೇಂಜ್ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಪರಿಣಾಮ ಬೀರುವುದು ಕಂಡುಬರುತ್ತದೆ. ಇನ್ನು ವಾರಂಟಿಯ ವಿಚಾರಕ್ಕೆ ಬರುವುದಾದರೆ ಒರಿಜಿನಲ್ ವಾಹನವನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬದಲಾಯಿಸಿರುವ ಕಾರಣದಿಂದಾಗಿ ವಾರಂಟಿ ಇಲ್ಲಿ ಯಾವುದೇ ಕೆಲಸಕ್ಕೆ ಬರುವುದಿಲ್ಲ.

Retrofit EV Kit ಅನು ಭಾರತದಲ್ಲಿ ಪೂರೈಸುವ ಪೂರೈಕೆದಾರರು:

 

Image Source: The Westline School

 

  • Bahn Conversions ಕಂಪನಿಯವರು ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ಎಲೆಕ್ಟ್ರಿಕ್ ರೂಪಾಂತರವನ್ನು ಮಾಡಿಕೊಡಲಿದ್ದಾರೆ.
  • E-Ashwa ಸಂಸ್ಥೆಯವರು ಹಳೆಯ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾಡಿ ಪರಿವರ್ತನೆ ಮಾಡುವುದಕ್ಕೆ ಹೆಸರುವಾಸಿ.
  • ದ್ವಿಚಕ್ರ ಹಾಗು ತ್ರಿಚಕ್ರ ವಾಹನಗಳ ಎಲೆಕ್ಟ್ರಿಕ್ ರೂಪಾಂತರ ವನ್ನು Go Green BG ಸಂಸ್ಥೆ ಅವರು ಮಾಡಿಕೊಡುತ್ತಾರೆ.
  • ರೆಟ್ರೋ ಫಿಟ್ ಮಾಡೋದಕ್ಕಿಂತ ಮುಂಚೆ ಈ ವಿಚಾರಗಳನ್ನು ಪ್ರಮುಖವಾಗಿ ಗಮನಿಸಿ
  • ಈಗಾಗಲೇ ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಹೆಸರುವಾಸಿ ಆಗಿರುವಂತಹ ಕಂಪನಿಯವರ ಸರ್ಟಿಫಿಕೇಟ್ ಹಾಗೂ ಇತರ ವಿಚಾರಗಳನ್ನು ಗಮನಿಸಿ ನಿಮ್ಮ ವಾಹನವನ್ನು ಎಲೆಕ್ಟ್ರಿಕ್ ರೂಪಾಂತರ ಮಾಡೋದಕ್ಕೆ ಅವರ ಬಳಿ ಕೊಡಿ.
  • ಭಾರತದಲ್ಲಿ ಈ ರೀತಿಯ ಎಲೆಕ್ಟ್ರಿಕ್ ರೂಪಾಂತರದ ವಾಹನಗಳ ಮೇಲೆ ಇರುವಂತಹ ನಿಯಮಾವಳಿಗಳನ್ನು ಸರಿಯಾಗಿ ತಿಳಿದುಕೊಂಡ ನಂತರ ಇದರ ಬಗ್ಗೆ ಗಮನ ಕೊಡಿ.
  • ಎಲ್ಲಾ ಸ್ಕೂಟರ್ ಹಾಗೂ ವಾಹನಗಳು ಎಲೆಕ್ಟ್ರಿಕ್ ರೂಪಾಂತರಕ್ಕೆ ಸರಿಯಾಗಿ ಹೊಂದುವುದಿಲ್ಲ ಹೀಗಾಗಿ ಪ್ರತಿಯೊಂದು ವಿಚಾರಗಳನ್ನು ಸರಿಯಾಗಿ ಪರೀಕ್ಷಿಸಿ.
  • ಎಲ್ಲಾ ಕಡೆಗಳಿಗೆ ಹೋಗಿ ಇದನ್ನು ರಿಪ್ಲೇ ಮಾಡೋದಕ್ಕೆ ಇರುವಂತಹ ಖರ್ಚಿನ ಬಗ್ಗೆ ಸರಿಯಾದ ಮಾಹಿತಿಗಳನ್ನು ಪಡೆದುಕೊಳ್ಳಿ.

advertisement

Leave A Reply

Your email address will not be published.