Karnataka Times
Trending Stories, Viral News, Gossips & Everything in Kannada

HSRP Number Plate: ಹೊಸದಾಗಿ ಬೈಕು ಕಾರು ಖರೀದಿಸುವವರಿಗೆ HSRP ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

advertisement

ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯಮಾಡಲಾಗುತ್ತಿದ್ದು ಇಂದು ದೇಶಾದ್ಯಂತ ಈ ಸುದ್ದಿ ಬಹಳ ಪ್ರಚಲಿತದಲ್ಲಿದೆ ಎನ್ನಬಹುದು. ವಾಹನಗಳಿಗೆ HSRP ನಂಬರ್ ಪ್ಲೇಟ್ (HSRP Number Plate) ಬಹಳ ಮುಖ್ಯವಾಗಿದ್ದ ಕಾರಣಕ್ಕೆ ಹಳೆ ನೋಂದಾಯಿತ ವಾಹನಕ್ಕೆ ಈ ಹೊಸ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿತ್ತು. ಈ ಒಂದು ವಿಧಾನ ಕಡ್ಡಾಯ ಎಂದು ಸರಕಾರ ಅನೇಕ ಬಾರಿ ಹೇಳಿದರೂ ಪೂರ್ತಿ ಪ್ರಮಾಣದಲ್ಲಿ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲಿಲ್ಲವಾಗಿದೆ.

2019ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಬಹುತೇಕ ಎಲ್ಲ ವಾಹನಕ್ಕೆ High security registration plate ಅಗತ್ಯವಾಗಿದ್ದು ಈ ನಂಬರ್ ಪ್ಲೇಟ್ ನಲ್ಲಿ ನೂತನ ವ್ಯವಸ್ಥೆ ಇರಲಿದೆ. ಹಳೆ ವಾಹನಗಳಿಗೆ ಇದನ್ನು ಅಳವಡಿಕೆ ಮಾಡಿಕೊಳ್ಳುವಂತೆ ಹೊಸ ವಾಹನಕ್ಕೆ ಕೂಡ ಅಳವಡಿಕೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸರಕಾರವು ಹೊಸ ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ (HSRP Number Plate) ಕಡ್ಡಾಯ ಮಾಡಲು ಸೂಚನೆ ನೀಡುತ್ತಿದ್ದಂತೆ ಈ ಬಗ್ಗೆ ಸುಪ್ರೀಂ ಕೋರ್ಟ್ ಮೂಲಕ ಈ ಬಗ್ಗೆ ನೂತನ ಆದೇಶ ಒಂದನ್ನು ಹೊರಡಿಸಲಾಗಿದೆ.

ಯಾರು ನೀಡಿದ ಆದೇಶ?

ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಅಳವಡಿಸುವಂತೆ ಸುಪ್ರೀಂ ಕೋರ್ಟ್ ಈ ಬಗ್ಗೆ ವಿಶೇಷ ಆದೇಶವನ್ನು ಹೊರಡಿಸಿದೆ. ಹಳೆ ವಾಹನಕ್ಕೆ ವಾಹನದ ಮಾಲಕರು ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಿ ಡೀಲರ್ ಅಥವಾ ಹೋಂ ಡೆಲಿವರಿ ಮಾಡಿಕೊಳ್ಳಬಹುದು. ಅದೇ ರೀತಿ ಹೊಸ ವಾಹನಗಳಿಗೆ HSRP ನಂಬರ್ ಪ್ಲೇಟ್ (HSRP Number Plate) ಕಡ್ಡಾಯವಾಗಿದ್ದು ಅದನ್ನು ಆಯಾ ಕಂಪೆನಿ ಶೋ ರೂಂ ನವರು ಮಾಡಿಸಬೇಕು ಎಂದು ಆದೇಶ ನೀಡಲಾಗಿದೆ.

advertisement

Image Source: India TV News

ಸೂಕ್ತ ಕ್ರಮ ಜಾರಿ

ಈ ಬಗ್ಗೆ ಪರಿಶೀಲನೆ ಮಾಡಲು ಕೂಡ ವಿಶೇಷ ತಂಡ ಸಿದ್ಧವಾಗಿದೆ. ಮೋಟಾರ್ ವಾಹನ ತಪಾಸಣೆ ಅಧಿಕಾರಿಗಳನ್ನು ಬಳಸಿಕೊಂಡು ಎಲ್ಲೆಲ್ಲ ನಿಯಮ ಉಲ್ಲಂಘನೆ ಆಗುತ್ತದೆ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ‌. ಹೊಸ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸದೇ ಇರುವ ಶೋರೂಂ ಮಾಲಕರು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಧ್ಯಮಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ದಂಡ ವಿಧಿಸಲಾಗುವುದು

ಇತ್ತೀಚೆಗಷ್ಟೇ ಹೊಸ ವಾಹನ ಖರೀದಿ ಮಾಡಿದ್ದವರಿಗೆ ಖರೀದಿ ಮಾಡಿದ್ದ ಶೋ ರೂಂ ನವರೆ ನಂಬರ್ ಪ್ಲೇಟ್ ಹಾಕಿಸಿಕೊಡಬೇಕು. ಅದೇ ರೀತಿ ಹಳೆ ವಾಹನ ಮತ್ತು ವಾಹನ ಖರೀದಿ ಮಾಡಿ ಒಂದೆರೆಡು ವರ್ಷವಾಗಿದ್ದರೆ ಅಂತವರು ವಾಹನಕ್ಕೆ HSRP ಅಳವಡಿಸಿಕೊಳ್ಳಬೇಕು ಇಲ್ಲವಾದರೆ ಅವರು ದಂಡಕಟ್ಟಬೇಕಾಗುತ್ತದೆ.

advertisement

Leave A Reply

Your email address will not be published.