Karnataka Times
Trending Stories, Viral News, Gossips & Everything in Kannada

Arecanut: ಅಡಿಕೆ ಕೃಷಿಗೆ ಎಷ್ಟು ದಿನಕ್ಕೊಮ್ಮೆ ನೀರು ಬಿಟ್ಟರೆ ಉತ್ತಮ ಗೊತ್ತಾ?

advertisement

ಕಂಗಿನ ಬೆಳೆ ಅಧಿಕ ಲಾಭದಾಯಕ ಎಂದು ತಿಳಿದಿದ್ದರೂ ಕೂಡ ಅದನ್ನು ಮಾಡುವುದು ಹೇಗೆ ನಿರ್ವಹಣೆ ಹೇಗೆ ಎಂಬ ಬಗ್ಗೆ ಸಂಪೂರ್ಣ ತಿಳಿದಿರಲಾರದು. ಬಹುತೇಕ ಕೃಷಿ ಕೇಂದ್ರದಲ್ಲಿ ಹಾಗೂ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗುತ್ತಿದ್ದರೂ ಇದನ್ನು ಪ್ರತ್ಯೇಕವಾಗಿ ಓದುವವರ ಸಂಖ್ಯೆ ಕೂಡ ಕಡಿಮೆ ಇದೆ. ಕೃಷಿಯಲ್ಲಿ ಕಂಗಿನ ಬೆಳೆ ಅಧಿಕ ಬರಬೇಕು, ಉತ್ತಮ ಇಳುವರಿಯಿಂದ ಉತ್ತಮ ಲಾಭ ಪಡೆಯಬೇಕು ಎಂದು ಅಂದುಕೊಳ್ಳುವವರಿಗೆ ಈ ಮಾಹಿತಿ ಬಹಳ ಉಪಯೋಗ ಆಗಲಿದೆ.

ಸಮಗ್ರ ಕೃಷಿ ಅಳವಡಿಸಿ:

ಯಾವಾಗಲೂ ಏಕ ಬೆಳೆ ಪದ್ಧತಿ ಅನುಸರಣೆ ಮಾಡುವುದು ಅಪಾಯಕಾರಿ ಆಗಿದೆ. ಹಾಗಾಗಿ ನೀವು ಎರಡು ಮೂರು ಕೃಷಿಯನ್ನು ಒಟ್ಟಿಗೆ ನಿಮ್ಮ ತೋಟದಲ್ಲಿ ಅಳವಡಿಸಿದರೆ ಅಧಿಕ ಲಾಭ ಸಿಗಲಿದೆ. ಏಲಕ್ಕಿ, ಕಾಳು ಮೆಣಸು, ಲಿಂಬೆ, ಶುಂಠಿ, ಜೇನು ಸಾಕಾಣಿಕೆ ಮಾಡಿದರೆ ಅಧಿಕ ಲಾಭ ನಿಮಗೆ ಸಿಗಲಿದೆ. ಒಂದು ಬೆಳೆಯಿಂದ ಲಾಭ ಸಿಗದಿದ್ದರೆ ಉಳಿದ ಬೆಳೆ ಲಾಭವು ನಿಮ್ಮ ನಷ್ಟ ಸರಿದೂಗಿಸಲು ಸಹಕಾರವಾಗಲಿದೆ.

Image Source: Mgnrega Success

ನೀರು ಎಷ್ಟು ನೀಡಬೇಕು?

advertisement

ಅಡಿಕೆ (Arecanut) ಕೃಷಿಗೆ ನೀವು ನೀರಿನ ಧಾರಣೆ ಮಾಡುವಾಗ ಅಗತ್ಯ ಸಲಹೆ ಪಡೆಯುವುದು ತುಂಬಾ ಮುಖ್ಯ. ನೀರನ್ನು ಬುಡಕ್ಕೆ ಬಿಟ್ಟರೆ ಮಾತ್ರ ನೀರು ಹೀರಿಕೆ ಆಗುತ್ತದೆ ಎಂಬುದು ಅನೇಕರ ನಿಲುವಾಗಿದೆ. ಆದರೆ ಕಂಗಿನ ಕೃಷಿಯಲ್ಲಿ ಅಡಿಕೆ ಮರದ ಸುತ್ತ ಮುತ್ತ ನೀರು ಚೆಲ್ಲಿದರು ಅದನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ನೀವೇನಾದರೂ ಸಮಗ್ರ ಕೃಷಿ ಮಾಡಿ ಎರಡು ಅಡಿಕೆ ನಡುವೆ ಏಲಕ್ಕಿ ಗಿಡ ಬೆಳೆದಿದ್ದರೆ ಆ ಏಲಕ್ಕಿ ಬೆಳೆಗೆ ನೀವು ನೀಡುವ ಪೋಷಣೆ ಅಡಿಕೆಗೂ ಕೂಡ ಸಾಕಾಗಲಿದೆ.

ಬೇಸಿಗೆಯಲ್ಲೂ ನೀರಿನ ಸುಲಭ ವಿಧಾನ:

ಬೇಸಿಗೆ ಕಾಲಕ್ಕೆ ನೀರಿನ ಸಮಸ್ಯೆ ಇರುವುದು ಕಾಣಬಹುದು ಆಗ ನೀವು 10- 13ದಿನಕ್ಕೆ ಒಮ್ಮೆ ನೀರು ಬಿಟ್ಟರು ಸಾಕಾಗಲಿದೆ ಆದರೆ ಅಡಿಕೆ ಮರದ ಪೋಷಣೆ ಮಾಡುವ ಸಲುವಾಗಿ ಜೀವಾಮೃತ, ಕಟಾವಿನ ಎಲೆ ಇತ್ಯಾದಿ ಬಳಕೆ ಮಾಡಬೇಕು. ಅಡಿಕೆ ಮರದ ಕಾಂಡ ಒಡೆಯದಂತೆ ರಕ್ಷಿಸುವುದು ಬಹಳ ಮುಖ್ಯ ಹಾಗಾಗಿ ಮರದ ಬುಡಕ್ಕೆ ಸುಣ್ಣ ಲೇಪನ ವಿಧಾನ ಅನುಸರಿಸಿದರೆ ಕಾಂಡ ಬೇರು ಎಲ್ಲ ತಂಪಾಗೆ ಇರಲಿದೆ ಜೊತೆಗೆ ನೀರು ಕೂಡ ಕಡಿಮೆ ಬಳಕೆಯಾಗಲಿದೆ. ನೀರು ಕಡಿಮೆ ಇದ್ದರು ಅಡಿಕೆ ಮರದ ಎಲೆ ಹಸಿರಾಗೆ ಇರುವುದನ್ನು ‌ನೀವು ಕಾಣಬಹುದು.

Image Source: Mathrubhumi English

ಕಟಾವಿನ ಎಲೆ:

ನಿಮಗೆಲ್ಲ ಸಮಗ್ರ ಕೃಷಿಯಲ್ಲಿ ಬಹುತೇಕ ರೈತರು ತಮ್ಮ ಗಿಡ, ಮರಗಳ ಪೋಷಣೆಗೆ ಏನನ್ನು ಮಾಡಬಹುದು ತಿಳಿದಿರಲಾರದು ಆ ಬಗ್ಗೆ ನೋಡುವುದಾದರೆ, ಸಾವಯವ ಗೊಬ್ಬರ ಬಳಕೆ ಸಾಮಾನ್ಯವಾಗಿದ್ದರು ಅಡಿಕೆ (Arecanut) ಅಥವಾ ತೆಂಗಿನ ಮರದ ಸುತ್ತ ಮುತ್ತಲು ಬೆಳೆದ ಕಾಟು ಗಿಡಗಳನ್ನು ಕಡಿದು ಅದನ್ನು ಅಡಿಕೆ, ತೆಂಗಿನ ಬುಡಕ್ಕೆ ಹಾಕಿದರೆ ನೆಲ ಒಣಗಲಾರದು ಮತ್ತು ಬೇರಿಗೂ ನೆರಳು ಸಿಕ್ಕು ನೀರು ಕಡಿಮೆ ಪ್ರಮಾಣ ಸಾಕಾಗುವುದು. ಹಾಗಾಗಿ ಬೇಸಿಗೆಯಲ್ಲಿ ನೀರಿಲ್ಲ ಇನ್ನು ಕೃಷಿ ಹೇಗೆ ಮಾಡೋದು ಎನ್ನುವವರು ಈ ಸರಳ ವಿಧಾನ ಅಳವಡಿಸಿದರೆ ಖರ್ಚಿನ ಜೊತೆ‌ ನೀರನ್ನು ಉಳಿಸಿಕೊಂಡು ಸಹ ಕೃಷಿ ಮಾಡಬಹುದು.

advertisement

Leave A Reply

Your email address will not be published.