Karnataka Times
Trending Stories, Viral News, Gossips & Everything in Kannada

ICICI Bank: ICICI ಬ್ಯಾಂಕ್ ನಲ್ಲಿ ಹಣ ಇತ್ತ ಎಲ್ಲರಿಗೂ ಹೊಸ ಸೂಚನೆ! ಬ್ಯಾಂಕ್ ಕಡೆಯಿಂದ ಸುತ್ತೋಲೆ

advertisement

ಇಂದು ಆನ್ ಲೈನ್ ವಹಿವಾಟುಗಳು ಆರಂಭ ವಾದ ನಂತರ ಮೋಸದ ಜಾಲ ಹೆಚ್ಚಾಗಿದೆ. ಜನರು ಎಷ್ಟೇ ಶಿಕ್ಷಣ ವಂತರಾಗಿದ್ದರೂ ಈ ಮೋಸದ ಜಾಲಕ್ಕೆ ಬೀಳುವ ಪ್ರಮಾಣ ಕಡಿಮೆ ಯಾಗಿಲ್ಲ. ದಿನ ನಿತ್ಯ ವರ್ಕ್ ಫರ್ಮ್ ಹೋಮ್, ಗಿಫ್ಟ್ ವೋಚರ್, ಗೇಮಿಂಗ್ ಇತ್ಯಾದಿ ಗಳ ವಹಿವಾಟಿನಿಂದ ಮೋಸಕ್ಕೆ ಬಿದ್ದು ಹಣ ಕಳೆದು ಕೊಂಡಿರುವ ಘಟನೆಗಳು ಬಹಳಷ್ಟು ನಡೆದು ಹೋಗಿವೆ. ಈಗಾಗಲೇ ಓಟಿಪಿ ಹೇಳಿ, ಆಧಾರ್ ನಂಬರ್ ಹೇಳಿ ಎಂದು ವಂಚನೆ ಗೊಳಿಸುವ ಸಾಕಷ್ಟು ಮಂದಿ ಇದ್ದಾರೆ‌. ಇದಕ್ಕಾಗಿ ಬ್ಯಾಂಕುಗಳು ಕೂಡ ಎಚ್ಚರಿಕೆಯನ್ನು ನೀಡುತ್ತ ಖಾತೆದಾರರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿದೆ‌.

ICICI Bank ನಿಂದ ಸೂಚನೆ:

ಐಸಿಐಸಿಐ ಬ್ಯಾಂಕ್ (ICICI Bank) ಇದೀಗ ಗ್ರಾಹಕರಿಗೆ ಸಲಹೆ ಸೂಚನೆಯನ್ನು ನೀಡಿದ್ದು ಯಾವುದೇ ನಕಲಿ ಲಿಂಕ್‌ಗಳು ಬಂದರೆ ಅದನ್ನು ತೆರೆಯದಿರಿ ಮತ್ತು ಪ್ರತಿಕ್ರಿಯೆ ನೀಡಬೇಡಿ ಎಂದಿದೆ.‌ ಇದು ಸೈಬರ್ ಕ್ರಿಮಿನಲ್‌ಗಳ ಮೋಸ ವಾಗಿರುವುದರಿಂದ ಬಳಕೆದಾರರು ಎಚ್ಚರದಿಂದಿರಬೇಕು ಎಂದು ತಿಳಿಸಿದೆ.

Image Source: Moneycontrol

ಅನ್ ಲೈನ್ ವಂಚನೆ ತಪ್ಪಿಸಿ:

ಅದೇ ರೀತಿ ಆನ್‌ಲೈನ್ ವಂಚನೆಯನ್ನು ತಪ್ಪಿಸಲು ಕೂಡ ಕೆಲವೊಂದು ಸಲಹೆ ನೀಡಿದೆ.‌ ಅನ್ ಲೈನ್ ವಹಿವಾಟು ಮಾಡುವಾಗ ಜಾಗರೂಕತೆಯಿಂದ ಇರಬೇಕಿದ್ದು ನಿಮ್ಮ ಪಿನ್ ಸಂಖ್ಯೆ ಯನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಮೋಸ ಗೊಂಡರೆ ಬಳಕೆದಾರರು ಭಾರಿ ನಷ್ಟವನ್ನು ಅನುಭವಿಸಿಬೇಕಾಗುತ್ತದೆ ಎಂದಿದೆ.

advertisement

ಪ್ರತಿಕ್ರಿಯೆ ನೀಡಬೇಡಿ:

ಅದೇ ರೀತಿ ವಂಚಕರು ನೀಡಿದ ಲಿಂಕ್ ಗಳಿಗೆ ಪ್ರತಿಕ್ರಿಯೆ ನೀಡಬೇಡಿ, ಪ್ರತಿಕ್ರಿಯೆ ನೀಡಿದ್ದಲ್ಲಿ ನಿಮ್ಮ ಮೊಬೈಲ್‌ ನಿಂದ OTP ಅನ್ನು ಪಡೆದು ನಿಮ್ಮ ವೈಯಕ್ತಿಕ ಮಾಹಿತಿ ಗಳನ್ನು ಪಡೆದುಕೊಳ್ಳುತ್ತಾರೆ. ಈ ರೀತಿಯಾಗಿ, ಸ್ಕ್ಯಾಮರ್‌ಗಳು ಡೇಟಾವನ್ನು ಪಡೆದು ನಿಮ್ಮ ಖಾತೆಯಲ್ಲಿದ್ದ ಹಣವನ್ನು ಪಡೆದು ಮೋಸ ಮಾಡಬಹುದು ‌ಎನ್ನುವ ಎಚ್ಚರಿಕೆ ನೀಡಿದೆ.

ಬ್ಯಾಂಕ್ ಈ ಕೆಲಸ ಮಾಡಲ್ಲ:

ICICI ಬ್ಯಾಂಕ್  (ICICI Bank) ತನ್ನ ಗ್ರಾಹಕರಿಗೆ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಅಥವಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಎಂದಿಗೂ ತಿಳಿಸುವುದಿಲ್ಲ‌ ಎನ್ನುವ ಸಲಹೆಯನ್ನು ಕೂಡ ನೀಡಿದೆ. ಹಾಗಾಗಿ ಬ್ಯಾಂಕ್ ಮ್ಯನೇಜರ್, ಬ್ಯಾಂಕ್ ಸಿಬ್ಬಂದಿ ಎಂದು ಕರೆ ಬಂದರೆ ಅದಕ್ಕೆ ಪ್ರತಿಕ್ರಿಯೆ ನೀಡದಿರಿ ಎಂದಿದೆ.

Image Source: ICICI

ಈ ಸಲಹೆ ಅನುಸರಿಸಿ:

  • ನಿಮ್ಮ ಮೊಬೈಲ್ ಅನ್ನು ಅಪ್ಡೇಟ್ ಮಾಡುವ ಮೂಲಕ ನವೀಕರಣ ಮಾಡಿ. ನೀವು ಯಾವುದೇ ಅಪ್ಲಿಕೇಶನ್ ತೆರೆಯುದಾದ್ರೂ ಅದನ್ನು Google Play Store ಅಥವಾ Apple Play Store ನಿಂದ ಡೌನ್ ಲೋಡ್ ಮಾಡುವುದು ಸೂಕ್ತ.
  • ಅದೇ ರೀತಿ ಆಂಟಿ ವೈರಸ್ ಅಥವಾ ಭದ್ರತಾ ಸಾಫ್ಟ್‌ವೇರ್ ಅನ್ನು ಇಟ್ಟುಕೊಳ್ಳಿ
  • ಯಾವುದೇ ಇತರ ಸಂದೇಶಗಳು ಅಥವಾ ಇಮೇಲ್‌ಗಳಲ್ಲಿ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ
  • ಇನ್ನೂ ಯಾರೊಂದಿಗೂ ನಿಮ್ಮ ಒಟಿಪಿ, ಪಾಸ್‌ವರ್ಡ್, ಪಿನ್ ಅಥವಾ ಕಾರ್ಡ್ ಸಂಖ್ಯೆಯನ್ನು ಇತರ ರೊಂದಿಗೆ ಹೇಳಬೇಡಿ. ಯಾವುದೇ ವಂಚನೆ ಮೋಸ ಆದಲ್ಲಿ ಅದನ್ನು ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ಗೆ ವರದಿ ಮಾಡಬೇಕು ಎನ್ನುವ ಸಲಹೆ ನೀಡಿದೆ.

advertisement

Leave A Reply

Your email address will not be published.