Karnataka Times
Trending Stories, Viral News, Gossips & Everything in Kannada

PM Awas Yojana: ಆವಾಸ್ ಯೋಜನೆಯ ಉಚಿತ ಮನೆ ಹಣ ಯಾರಿಗೆಲ್ಲಾ ಸಿಕ್ಕಿದೆ ಲಿಸ್ಟ್ ಬಿಡುಗಡೆ! ಇಲ್ಲಿದೆ ಡೈರೆಕ್ಟ್ ಲಿಂಕ್

advertisement

ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಮೂಲಕ ಸರ್ಕಾರವು ದೇಶದ ಬಡ ನಾಗರಿಕರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಲು ಹಣಕಾಸಿನ ನೆರವು ನೀಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸ್ವತಃ ನೋಂದಾಯಿಸಿದವರ ಮಾಹಿತಿಗಾಗಿ, ಈಗ ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೋಂದಯಿಸಿಕೊಂಡ ವ್ಯಕ್ತಿಗಳು ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಬಹುದು.

ಪ್ರಧಾನಮಂತ್ರಿ ಆವಾಸ್ ಯೋಜನೆ (PM Awas Yojana) ಪಟ್ಟಿಯನ್ನು ಪರಿಶೀಲಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ:

ಈ ಯೋಜನೆಯ ಪಟ್ಟಿಯಲ್ಲಿ ಮೊದಲೇ ನೋಂದಾಯಿಸಿಕೊಂಡು ಇರುವಂತಹ ವ್ಯಕ್ತಿಗಳು ಅಥವಾ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಆರ್ಥಿಕ ನೆರವು ಸಿಗುತ್ತದೆ. ಇನ್ನು ಅವರ ಹೆಸರು ಪಟ್ಟಿಯಲ್ಲಿ ಇದ್ದರೆ ಮಾತ್ರ ಮನೆ ಕಟ್ಟಲು ಸರ್ಕಾರ ಹಣ ನೀಡುತ್ತದೆ. ಇನ್ನು ದೇಶದ ಎಲ್ಲಾ ನಿರ್ಗತಿಕರಿಗೆ ಮತ್ತು ಆರ್ಥಿಕವಾಗಿ ದುರ್ಬಲರಿಗೆ ಶಾಶ್ವತ ಮನೆಗಳನ್ನು ನಿರ್ಮಿಸಲು ಸರ್ಕಾರ ನೆರವು ನೀಡಲು ಬಯಸುತ್ತದೆ.

Image Source: Zee Business

advertisement

ಇದಕ್ಕೆ ಅರ್ಹರಾಗಿರುವ ವ್ಯಕ್ತಿಗಳ ಹೆಸರನ್ನು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಫಲಾನುಭವಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲು ಈ ಯೋಜನೆಯ ಅಧಿಕೃತ ವೆಬ್‌ಸೈಟ್‌ನ ಮುಖ್ಯ ಪುಟದಲ್ಲಿ ಡ್ರಾಪ್ ಡೌನ್ ಮೆನುವನ್ನು ಕ್ಲಿಕ್ ಮಾಡಿರಿ ನಂತರ AavasSoft ನ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ವರದಿ ಆಯ್ಕೆಯನ್ನು ಕಂಡುಕೊಳ್ಳಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. ನೀವು ಆಯ್ಕೆಯನ್ನು ಒತ್ತಿದ ತಕ್ಷಣ, ಮತ್ತೊಂದು ಹೊಸ ಪುಟವು ಕಾಣಿಸುತ್ತದೆ ನಂತರ ಇದರ ಕೆಳಭಾಗದಲ್ಲಿ H ವಿಭಾಗವನ್ನು ಕಂಡುಕೊಳ್ಳಿ ಅಲ್ಲಿ ಪರಿಶೀಲನೆಗಾಗಿ ಫಲಾನುಭವಿ ವಿವರಗಳನ್ನು ನೋಡಬಹುದು ನಂತರ, ಅದರ ಮೇಲೆ ಕ್ಲಿಕ್ ಮಾಡಿ. ಈಗ ಪ್ರಧಾನ ಮಂತ್ರಿ ಆವಾಸ್ ಯೋಜನೆಯ MIS ವರದಿಯ ಪುಟವು ಸಿಗುತ್ತದೆ. ಇದರ ನಂತರ ತಾವು ದಾಖಲಿಸಿರುವ ಅರ್ಜಿಯ ವಿವರಗಳನ್ನು ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ನಮೂದಿಸಿ, ಬೆನಿಫಿಶಿಯರಿ ಲಿಸ್ಟ್ ಅನ್ನು ನೋಡಬಹುದು.

ಇನ್ನು ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ನೀಡಬೇಕಾದಂತಹ ದಾಖಲೆಗಳು ಯಾವುದು ಎಂದು ನೋಡುವುದಾದರೆ:

ಆರ್ಥಿಕ ಪರಿಸ್ಥಿತಿಯಿಂದ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದ ದೇಶದ ನಾಗರಿಕರು ಸರ್ಕಾರದಿಂದ ನೆರವು ಪಡೆಯುವ ಮೂಲಕ ಮನೆಯನ್ನು ನಿರ್ಮಿಸಿಕೊಳ್ಳಲು ಮುಂದಾಗಬಹುದು. ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಗೆ ಸೇರಲು ಬಯಸಿದರೆ ಅಥವಾ ನೋಂದಣಿ ಮಾಡಿಕೊಳ್ಳಲು ನೀಡಬೇಕಾದಂತಹ ಕೆಲವು ದಾಖಲೆಗಳು ಯಾವುದೆಂದರೆ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ನಿಮ್ಮ ಜಾತಿ ಪ್ರಮಾಣಪತ್ರ, ನಿಮ್ಮ ಬ್ಯಾಂಕ್ ಖಾತೆ ಪಾಸ್‌ ಬುಕ್, ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ, ಮೊಬೈಲ್ ನಂಬರ್ ಇವುಗಳನ್ನು ಆನ್ ಲೈನ್ ವೆಬ್ ಸೈಟ್ ಮೂಲಕ ದಾಖಲಿಸಿ ನೋಂದಣಿ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.