Karnataka Times
Trending Stories, Viral News, Gossips & Everything in Kannada

Drought Relief: ಬರ ಪರಿಹಾರದ ಪಟ್ಟಿಯಲ್ಲಿ ನಿಮ್ಮ‌ ಹೆಸರು ಇದೆಯಾ? ಈ ಬಗ್ಗೆ ಪರಿಶೀಲನೆ ಮಾಡಿಕೊಳ್ಳಿ

advertisement

ಈ ಭಾರಿ ರಾಜ್ಯದ ರೈತರು ನೀರಿನ‌ ಸಮಸ್ಯೆ ಯಿಂದ ಬಹಳಷ್ಟು ತೊಂದರೆಯನ್ನು ಅನುಭವಿಸಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದ್ದು ಬರ ಪರಿಸ್ಥಿತಿ ಉಂಟಾಗಿದೆ. ರೈತರು ಕೃಷಿಯಲ್ಲಿ ಫಸಲು ಕಾಣದೆ ನಷ್ಟ ಅನುಭವಿಸಿದ್ದಾರೆ.‌ ಇದಕ್ಕಾಗಿ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡಿಕೊಂಡಿದ್ದು ಈ ಬಗ್ಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಈಗಾಗಲೇ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಅದರಲ್ಲಿ 48 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ ಎಂದು ತಿಳಿಸಿದೆ.

ಎರಡು ಸಾವಿರ ಜಮೆ

ಈಗಾಗಲೇ ಬರ ಪರಿಹಾರ (Drought Relief) ದಿಂದ ರೈತರಿಗೆ ಸಹಾಯಕವಾಗುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು‌ ಪ್ರತಿ ರೈತನಿಗೆ ಮೊದಲ ಕಂತಿನಲ್ಲಿ 2000 ರೂಪಾಯಿವರೆಗೆ ನೆರವು ನೀಡುವುದಾಗಿ ತಿಳಿಸಿದ್ದು ಈಗಾಗಲೇ ಕೆಲವು ರೈತರ ಖಾತೆಗೆ ಹಣ ಜಮೆಯಾಗಿದೆ. ಈಗಾಗಲೇ ಹೆಚ್ಚಿನ ಬರ ಪರಿಹಾರ ಮೊತ್ತಕ್ಕಾಗಿ ಕೇಂದ್ರ ಸರಕಾರಕ್ಕೂ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Image Source: Freepik

Drought Relief ಪಟ್ಟಿ ಬಿಡುಗಡೆ:

advertisement

ಈಗಾಗಲೇ ಬರ ಪರಿಹಾರ (Drought Relief) ನೀಡುವ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಬರ ಪರಿಹಾರ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಸರಕಾರದಿಂದ ಆದೇಶ ಹೊರಡಿಸಲಾಗಿದೆ. ಈಗಾಗಲೇ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ರೈತರ ಹೆಸರನ್ನು ಬಿಡುಗಡೆ ಮಾಡಿದ್ದು ರೈತರ ಹೆಸರು ಇಲ್ಲದೆ ಇದ್ದಲ್ಲಿ ಅಂತಹ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಳ್ಳಿ.

Drought Relief ಹಣಕ್ಕೆ ಈ‌ ಕೆಲಸ ಕಡ್ಡಾಯ:

ರೈತರಿಗೆ ಈ ಹಣ ಖಾತೆಗೆ ಬರಬೇಕಿದ್ರೆ ರೈತರು ಕಡ್ಡಾಯವಾಗಿ ಈ ಕೆಲಸ ಮಾಡಬೇಕು. ಹೌದು ರೈತರು ಎಫ್.ಐ.ಡಿ (FID) ಸಂಖ್ಯೆ ಯನ್ನು ಹೊಂದುವುದು ಕಡ್ಡಾಯವಾಗಿದೆ. ಎಫ್‌ಐಡಿ ನಂಬರ್‌ ಇದ್ದರೆ ಅಷ್ಟೆ ಜಮೀನಿನ ಮಾಹಿತಿ ಸಿಗಲಿದೆ. ಇಲ್ಲಿ ರೈತರ ಮಾಹಿತಿ, ಜಮೀನಿನ ವಿವರ, ಬೆಳೆದ ಬೆಳೆಗಳ ಮಾಹಿತಿ ಇತ್ಯಾದಿ ಸಿಗಲಿದ್ದು ಸರ್ಕಾರದಿಂದ ಕೃಷಿಗೆ ಬೇಕಾದ ಸೌಲಭ್ಯ ಪಡೆಯಲು ಇಲ್ಲಿ‌ ನೋಂದಾಯಿಸಿಕೊಳ್ಳಬೇಕು. ಇದಕ್ಕಾಗಿ ಸಮೀಪದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗೆ ದಾಖಲೆಗಳೊಂದಿಗೆ ಭೇಟಿ ನೀಡಿ ಈ ದಾಖಲೆ ಮಾಡಿಕೊಳ್ಳಿ. ಈ ನಂಬರ್‌ ಹೊಂದಿರುವವರಿಗೆ ಮಾತ್ರ ಬರ ಪರಿಹಾರದ ಹಣ ಜಮಾ ಅಗಲಿದೆ ಎಂದು ಈ ಮೂಲಕ ತಿಳಿಸಲಾಗಿದೆ.

Image Source: Vartha Bharati

ಚೆಕ್ ಮಾಡಿ

ಮೊದಲಿಗೆ https://parihara.karnataka.gov.in ಈ‌ ಲಿಂಕ್ ನಲ್ಲಿ‌ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ವರ್ಷ, ಸೀಸನ್ ಆಯ್ಕೆ ಮಾಡಿ , ನಂತರದಲ್ಲಿ‌ calamity type Flood ಆಯ್ಕೆ ಮಾಡಿ. ಅದಾದ ಬಳಿಕ Get Report ಮೇಲೆ ಕ್ಲಿಕ್ ಮಾಡಿದ್ರೆ ಯಾವ ರೈತರಿಗೆ ಬರ ಪರಿಹಾರದ ಮೊತ್ತ ಲಭ್ಯವಾಗಲಿದೆ ಎಂಬ ಬಗ್ಗೆ ಮಾಹಿತಿ ಇರಲಿದೆ.

advertisement

Leave A Reply

Your email address will not be published.