Karnataka Times
Trending Stories, Viral News, Gossips & Everything in Kannada

Guarantee Schemes: ಬೆಳ್ಳಂಬೆಳಗ್ಗೆ 9 ಗ್ಯಾರಂಟಿ ಯೋಜನೆ ಗಳನ್ನು ಘೋಷಣೆ ಮಾಡಿದ ಕಾಂಗ್ರೆಸ್! ಯಾರಿಗೆಲ್ಲ ಸಿಗುತ್ತೆ ಗೊತ್ತಾ?

advertisement

ಈಗಾಗಲೇ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಲವೊಂದು ಪ್ರಣಾಳಿಕೆ ಯನ್ನು ಇಡುವ ಮೂಲಕ ಕಾಂಗ್ರೆಸ್ ಸರಕಾರ ಮತದಾರರ ಗಮನ ಸೆಳೆದಿತ್ತು. ಗ್ಯಾರಂಟಿ ಯೋಜನೆಗಳನ್ನು (Guarantee Schemes) ಜನತೆಗೆ ನೀಡುವುದಾಗಿ ಭರವಸೆಯ ಮಾತುಗಳನ್ನು ಹೇಳಿತ್ತು. ಇದರಲ್ಲಿ ಗೃಹಲಕ್ಷ್ಮಿ(Gruha Lakshmi), ಗೃಹಜ್ಯೋತಿ (Gruha Jyothi), ಅನ್ನಭಾಗ್ಯ (Anna Bhagya), ಶಕ್ತಿ ಯೋಜನೆ (Shakti Yojane), ಯುವನಿಧಿ (Yuva Nidhi) ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಚುನಾವಣೆ ಗೆದ್ದ ಬಳಿಕ ತನ್ನ ಪ್ರಣಾಳಿಕೆ ಯಂತೆ ಕಾಂಗ್ರೆಸ್ ಸರಕಾರ ಜನತೆಗೆ ಮಾತು ಉಳಿಸಿ ಕೊಟ್ಟಿದೆ. ಅದೇ ರೀತಿ‌ ಇನ್ನೇನು‌ ಲೋಕಸಭೆ ಸಭೆ ಚುನಾವಣೆ ನಡೆಯಲಿದ್ದು ಇಲ್ಲೂ ‌ಕೂಡ‌ ಕೆಲವೊಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.

ಕರ್ನಾಟಕದಲ್ಲಿ 5 Guarantee Schemes ಜಾರಿಗೆ:

ಈಗಾಗಲೇ ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಹೌದು ಮಹಿಳೆಯರ ಅಭಿವೃದ್ಧಿ ಗಾಗಿ ಬಡ ವರ್ಗದ ಮಹಿಳಾ ಕುಟುಂಬಗಳ ಮಹಿಳೆಯರಿಗೆ ಪ್ರತಿ ವರ್ಷ 1 ಲಕ್ಷ ರೂ. ಹಣಕಾಸಿನ ನೆರವು ನೀಡುವ ಭರವಸೆ ನೀಡಿದೆ. ಅದೇ ರೀತಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಅವಕಾಶ ನೀಡಲಾಗುವುದು, ಆಶಾ ಕಾರ್ಯ ಕರ್ತೆಯರು ಹಾಗೂ ಮಧ್ಯಾಹ್ನದ ಬಿಸಿಯೂಟ ಸಿಬಂದಿಗಳ ಗೌರವಧನವ ಹೆಚ್ಚಳ ಮಾಡುವುದು ಮತ್ತು ಪ್ರತಿಯೊಂದು ಪಂಚಾಯ್ತಿ ಮಟ್ಟದಲ್ಲಿ ಕಾನೂನು ಸಹಾಯಕರನ್ನು ನೇಮಕ ಮಾಡುವ ಕುರಿತಾಗಿ ಮತ್ತು ಜಿಲ್ಲಾ ಕೇಂದ್ರಗಳಲ್ಲೂ ಮಹಿಳಾ ಹಾಸ್ಟೆಲ್ ನಿರ್ಮಿಸುವ ಬಗ್ಗೆಯು ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದೆ.

Karnataka Guarantee Schemes
Image Source: Vistara News

advertisement

ಆಂಧ್ರದಲ್ಲಿ 9 Guarantee Schemes ಜಾರಿಗೆ:

ಈಗಾಗಲೇ ಕರ್ನಾಟಕದಲ್ಲಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಆಂಧ್ರದಲ್ಲಿ 9 ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ಇಟ್ಟಿದೆ, ಹೌದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಆಂಧ್ರಪ್ರದೇಶದಲ್ಲಿ ‌ಎಪಿಸಿಸಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ರೆಡ್ಡಿ  (Sharmila Reddy)9 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.

Image Source: Telugustop

ಯಾವ ಯೋಜನೆ?

  • ಆಂಧ್ರ ಪ್ರದೇಶದಲ್ಲಿ ಒಂಬತ್ತು ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದು , ರಾಜ್ಯಕ್ಕೆ 10 ವರ್ಷ ಗಳ ವಿಶೇಷ ಸ್ಥಾನಮಾನ ವನ್ನು ನೀಡುವ ಗ್ಯಾರಂಟಿ ಯನ್ನು ಘೋಷಣೆ ಮಾಡಿದ್ದಾರೆ.
  • ಅದೇ ರೀತಿ‌ ಮಹಿಳೆಯರಿಗಾಗಿ ಮಹಾಲಕ್ಷ್ಮಿ ಯೋಜನೆ ಜಾರಿಗೆ ತರಲಿದ್ದು ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡಲು ಬಡ ವರ್ಗದ ಮಹಿಳೆಯರಿಗೆ ಪ್ರತಿ ತಿಂಗಳು 8333 ರೂ ನಂತರ ವರ್ಷಕ್ಕೆ ಒಂದು ಲಕ್ಷ ನೆರವು ನೀಡುವುದಾಗಿಯು ಪ್ರಣಾಳಿಕೆ ಯಲ್ಲಿ ತಿಳಿಸಿದೆ
  • ಇನ್ನು ರೈತರ ಪ್ರಗತಿಗಾಗಿ, ರೈತರ ಸಾಲದ ಹೊರೆಯನ್ನು ಕಡಿಮೆ ಮಾಡಲು 2 ಲಕ್ಷ ರೂಪಾಯಿವರೆಗಿನ ರೈತರ ಸಾಲಾ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದೆ
  • ಹಾಗೇಯೇ ರೈತರಿಗೆ ಹೂಡಿಕೆ ಮೇಲೆ ಶೇ.50 ರಷ್ಟು ಲಾಭ ಬರುವಂತೆ ಎಂಎಸ್​ಪಿ ಹೆಚ್ಚಳ ಮಾಡುವುದಾಗಿ ತಿಳಿಸಿದೆ.
  • ಕಾರ್ಮಿಕರಿಗೆ ಉತ್ತೇಜನ ನೀಡುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕನಿಷ್ಠ 400 ರೂಪಾಯಿಗೆ ಮೊತ್ತ ಹೆಚ್ಚಳ ಮಾಡುದಾಗಿ ತಿಳಿಸಿದೆ.
  • ಮಕ್ಕಳಿಗೆ ‌ಉಚಿತ ಶಿಕ್ಷಣ ಸೌಲಭ್ಯ ನೀಡುವ ಪ್ರಣಾಳಿಕೆ ಯನ್ನು ಘೋಷಣೆ ಮಾಡಿದೆ.
  • ಅದೇ ರೀತಿ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಗಳ ಭರ್ತಿ ಮಾಡಿ ಉದ್ಯೋಗ ದೊರಕುವಂತೆ ಮಾಡಲಾಗುವುದು ಎನ್ನುವ ಭರವಸೆ ನೀಡಿದೆ.
  • ಇನ್ನು ಮನೆ ಇಲ್ಲದ ಬಡಕುಟುಂಬಕ್ಕೆ 5 ಲಕ್ಷ ರೂ ವೆಚ್ಚದಲ್ಲಿ ಉಚಿತ ಮನೆ ನಿರ್ಮಾಣ ಮಾಡುವುದಾಗಿ ತಿಳಿಸಿದೆ.
  • ವೃದ್ಧಾಪ್ಯ ವೇತನ 4000 ಕ್ಕೆ ಹೆಚ್ಚಳ ಮಾಡುವುದಾಗಿ ಅಂಗವಿಕಲರಿಗೆ 6 ಸಾವಿರ ಪಿಂಚಣಿ ನೀಡುವುದಾಗಿ ಘೋಷಣೆ ಮಾಡಿದೆ.

advertisement

Leave A Reply

Your email address will not be published.