Karnataka Times
Trending Stories, Viral News, Gossips & Everything in Kannada

Gold Price: ಚಿನ್ನ ಖರೀದಿ ಮಾಡೋರಿಗೆ ಬ್ಯಾಡ್ ನ್ಯೂಸ್, ಬಂಗಾರದ ಬೆಲೆ ಮತ್ತಷ್ಟು ಹೆಚ್ಚಳ

advertisement

ಚಿನ್ನ (Gold) ಅತೀ ಬೇಡಿಕೆಯ ವಸ್ತು. ಇಂದು ಹೂಡಿಕೆ ಅಂತ ಬಂದಾಗ ಹೆಚ್ಚಾಗಿ ಆದ್ಯತೆ ನೀಡುವುದು ಚಿನ್ನಕ್ಕಾಗಿಯೇ, ಹಾಗಾಗಿ ಬೆಲೆ (Gold Price) ಕಡಿಮೆ ಇದ್ದಾಗ ಚಿನ್ನವನ್ನು ಸಾಲ ಮಾಡಿಯಾದರೂ ಖರೀದಿ ಮಾಡುವ ಜನರು ಇದ್ದಾರೆ. ಹಿಂದಿನ ಕಾಲದಿಂದಲೂ ಮದುವೆ, ಪೂಜೆ ಇತ್ಯಾದಿ ಶುಭ ಸಮಾರಂಭಗಳಿಗೆ ಚಿನ್ನ ಬೇಕು ಎನ್ನುವುದು ಹಿಂದಿನ ಕಾಲದಿಂದಲೂ ಬಂದಂತಹ ಪದ್ದತಿ, ಹಾಗಾಗಿ ಇಂದು ಕೂಡ ಮದುವೆ ಸಮಾರಂಭ ಗಳಿಗೆ ಆಭರಣ ತೊಡುವ ಬಗ್ಗೆ ಇಂದು ಕೂಡ ಈ ಪದ್ದತಿ ಆಚರಣೆಯಲ್ಲಿದೆ. ಇಂದು ದಿನದಿಂದ ದಿನಕ್ಕೆ ಚಿನ್ನದ ಬೇಡಿಕೆ ಹೆಚ್ಚುತ್ತಿದ್ದು ಇಂದು ಬೆಲೆ ಕೂಡ ದುಪ್ಪಟ್ಟು ಆಗಿದೆ.

Gold Price ಎಷ್ಟಾಗಿದೆ?

ಇಂದು ಕೆಲವು ನಗರದಲ್ಲಿ ಚಿನ್ನದ ಬೆಲೆ (Gold Price) 10 ಗ್ರಾಂಗೆ 70,000 ರೂ. ಗಡಿ ದಾಟುವ ಮೂಲಕ ಹೊಸ ದಾಖಲೆಯನ್ನೇ ಸೃಷ್ಟಿ ಮಾಡಿದೆ. ಇನ್ನು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ ಗೆ 2,236 ಯುಎಸ್ ಡಿಗೆ ಏರಿಕೆಯಾಗುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ. ಭಾರತದಲ್ಲಿ ಇಂದು 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆಯು 63,000 ರುಪಾಯಿ ಆಗಿದ್ದು, 24 ಕ್ಯಾರಟ್​ನ ಚಿನ್ನದ ಬೆಲೆ 68,730 ರುಪಾಯಿ ಆಗಿದೆ.

Image Source: Bayut

ಯಾವ ನಗರದಲ್ಲಿ ಎಷ್ಟಿದೆ?

advertisement

ಬೆಂಗಳೂರಿನಲ್ಲಿ 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 63,000 ರೂ ಆಗಿದ್ದು 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ 68,730 ರೂ ಆಗಿದೆ. ಚೆನ್ನೈ ನಲ್ಲಿ 63,900 ರೂಪಾಯಿ ಆಗಿದ್ದು ಮುಂಬೈ ನಲ್ಲಿ 63,000 ರೂಪಾಯಿ ಆಗಿದೆ‌. ಅದೇ ರೀತಿ ಕೋಲ್ಕತ್ತಾದಲ್ಲಿ 63,000 ರೂಪಾಯಿ ಆಗಿದ್ದು ಲಕ್ನೋ ದಲ್ಲಿ 63,150 ರೂಪಾಯಿ ಆಗಿದೆ‌.

ಯಾಕೆ ಬೆಲೆ (Gold Price) ಹೆಚ್ಚಳ?

ಚೀನಾ ಹಾಗೂ ಇತರ ಕೇಂದ್ರೀಯ ಬ್ಯಾಂಕುಗಳ ಚಿನ್ನದ ಖರೀದಿಯಲ್ಲಿ ಏರಿಕೆಯಾದ ನಿಟ್ಟಿನಲ್ಲಿ‌ ಈ ಬೆಲೆಯು ಹೆಚ್ಚಳವಾಗಿದೆ. ಇನ್ನು ಮದುವೆ ಶುಭಾರಂಭಗಳ ಸಂಖ್ಯೆ ಹೆಚ್ಚಳವಾಗಲಿದೆ. ಇನ್ನೇನು ಯುಗಾದಿ ಹಬ್ಬ ಇರುವುದರಿಂದ ಶುಭ ಸಮಾರಂಭಗಳಿಗೆ ಚಿನ್ನಾಭರಣ ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಲಿದ್ದು, ಹೀಗಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಬೆಲೆಯು ಹೆಚ್ಚಳವಾಗಲಿದೆ. ಮುಂದಿನ ದಿನದಲ್ಲಿ ಬೆಲೆ ದುಪ್ಪಟ್ಟು ಆಗಲಿದೆ ಎಂದು ತಜ್ಞರ ಅಭಿಪ್ರಾಯ ವಾಗಿದೆ.

Image Source: iStock

ಬೆಳ್ಳಿ ಬೆಲೆ ಹೇಗಿದೆ?

ಇಂದು ಚಿನ್ನದಂತೆ ಬೆಳ್ಳಿಯು ಕೂಡ ಹೆಚ್ಚಿನ ಮಹತ್ವ ವನ್ನು ಪಡೆದಿದೆ.ಪೂಜೆ ಪುರಸ್ಕಾರ, ಉಡುಗೊರೆ ಇತ್ಯಾದಿಗಳಿಗೆ ಬೆಳ್ಳಿಯ ಬೇಡಿಕೆ ಹೆಚ್ಚು ಇದ್ದು ಇಂದು ಬೆಳ್ಳಿಯ ಬೆಲೆ ಸ್ಥಿರವಾಗಿದ್ದು ಒಂದು ಗ್ರಾಂ ಬೆಳ್ಳಿಗೆ 77 ರೂ. ಇದೆ. 8 ಗ್ರಾಂಗೆ 616 ರೂ ಇದ್ದರೆ, 10 ಗ್ರಾಂಗೆ 770 ರೂ. ಆಗಿದೆ.

advertisement

Leave A Reply

Your email address will not be published.