Karnataka Times
Trending Stories, Viral News, Gossips & Everything in Kannada

Gas Cylinder: ಭರ್ಜರಿ ಇಳಿಕೆ ಕಂಡ ಗ್ಯಾಸ್ ಸಿಲಿಂಡರ್ ಬೆಲೆ! ಸಿಹಿಸುದ್ದಿ

advertisement

ಗ್ಯಾಸ್ ಸಿಲಿಂಡರ್ (Gas Cylinder) ಬೆಲೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ ಹೀಗಾಗಿ ಅಗತ್ಯ ಆಹಾರದ ಬೆಲೆ ಸಹ ಹೆಚ್ಚಾಗುವ ಸಾಧ್ಯತೆ ಇದೆ. ತೈಲ ಮಾರುಕಟ್ಟೆ ಕಂಪೆನಿಗಳು ಈಗ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಈ ಒಂದು ಬದಲಾವಣೆ ಆದರೆ ಗೃಹ ನಿವಾಸಿಗಳಿಗೆ ಮತ್ತು ದೊಡ್ಡ ಹೊಟೇಲ್ ಉದ್ಯಮ ನಡೆಸುವವರಿಗೆ ತೈಲ ಕಂಪೆನಿಯ ಈ ಒಂದು ಕ್ರಮ ಬಹಳ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಲಿದೆ.

Gas Cylinder ಬೆಲೆ ಇಳಿಕೆ?

ತೈಲ ಮಾರುಕಟ್ಟೆ ಕಂಪೆನಿಗಳು ಬೆಲೆ ಇಳಿಕೆ ಮಾಡುವ ಕ್ರಮಕ್ಕೆ ಮುಂದಾಗಿದೆ 5KG ಫ್ರೀ ಟ್ರೇಡ್ LPGಮತ್ತು 19KG ವಾಣಿಜ್ಯ ಸಿಲಿಂಡರ್ ನ ಬೆಲೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಮಾರ್ಚ್ 31ರವರೆಗೆ ಹಣಕಾಸು ವರ್ಷದ ಮುಕ್ತಾಯ ದಿನ ಮತ್ತು ತಿಂಗಳ ಅಂತ್ಯವಾಗಿದ್ದು ಎಪ್ರಿಲ್ ಒಂದರಿಂದ ಅಂದರೆ ಇಂದಿನಿಂದಲೆ ನೂತನ ಬೆಲೆ ಇಳಿಕೆಯ ಕ್ರಮ ಜಾರಿಗೆ ಬರಲಿದ್ದು ಅನೇಕ ವಾಣಿಜ್ಯ ವ್ಯವಹಾರ ನಡೆಸುವವರಿಗೆ ಈ ಕ್ರಮ ಅನುಕೂಲ ಆಗಲಿದೆ.

Image Source: moneycontrol

Gas Cylinder ಹಳೆ ಬೆಲೆ ಹೇಗಿತ್ತು?

advertisement

ಎಲ್ ಪಿಜಿ ಸಿಲಿಂಡರ್ (LPG Cylinder) ಮೇಲೆ ಮಾರ್ಚ್ ಒಂದರಂದು ಬೆಲೆ ಏರಿಕೆ ಕ್ರಮ ಜರಗಿಸಲಾಗಿತ್ತು. ಹೀಗಾಗಿ ಬಹುತೇಕ ವ್ಯವಸ್ಥೆ ಬದಲಾಗಿದೆ. ದೆಹಲಿ, ಕೊಲ್ಕತ್ತಾ, ಲಕ್ನೋ , ಚೆನ್ನೈ ನಲ್ಲಿ ಆಯಾ ರಾಜ್ಯಕ್ಕೆ ಅನುಗುಣವಾಗಿ ಬೆಲೆ ಏರಿಳಿತವಾಗಿದ್ದು ಭಾರತದ ಬಹುತೇಕ ರಾಜ್ಯದಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಅವಧಿಯಲ್ಲಿ ಬೆಲೆ ಏರಿಕೆಯಾಗಿದೆ. ಎಲ್ಲ ಮೆಟ್ರೋ ನಗರಗಳಲ್ಲಿ ಇಂಡೇನ್ LPG ಸಿಲಿಂಡರ್ ಬೆಲೆ ಏರಿಕೆಯಾಗಿದೆ.

ಎಷ್ಟು ಬೆಲೆ ಇಳಿಕೆಯಾಗಿದೆ?

ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂಪಾಯಿ ಆಗಿದ್ದು 19kg ವಾಣಿಜ್ಯ ಸಿಲಿಂಡರ್ ನ ಮೇಲೆ 30.50 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 5kg FTL ಸಿಲಿಂಡರ್ ಮೇಲೆ‌7.50 ರೂಪಾಯಿ ದರ ಇಳಿಸಲಾಗಿದೆ. ಹಾಗಾಗಿ ಗ್ರಾಹಕರಿಗೆ ಮತ್ತು ವಾಣಿಜ್ಯ ಹೊಟೇಲ್ ಇತರ ಉದ್ಯಮ ಮಾಡುವವರಿಗೆ ಈ ಬೆಲೆ ಇಳಿಕೆಯಿಂದ ಹಣ ಉಳಿತಾಯ ಆಗಲಿದೆ.

Image Source: Mathrubhumi English

ಬೆಲೆ ಇಳಿಕೆಗೆ ಕಾರಣ ಏನು?

ಬೆಲೆ ಏರಿಕೆಯಾಗಲು ಲಭ್ಯ ಇರುವ LPG ಸಿಲಿಂಡರ್ ಪ್ರಮಾಣವು ಬೇಡಿಕೆಗೆ ತಕ್ಕ ಮಟ್ಟಿಗೆ ಪೂರೈಕೆ ಇಲ್ಲದಿರುವುದನ್ನು ಕಾಣಬಹುದು. ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಬದಲಾವಣೆ, ತೆರಿಗೆ ನೀತಿಯಲ್ಲಿ ಬದಲಾವಣೆ, LPG ಸಿಲಿಂಡರ್ ಪೂರೈಕೆ ಬೇಡಿಕೆ ನಡುವೆ ಹೊಂದಾಣಿಕೆಯಾಗಿದ್ದು ಮುಖ್ಯ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ ಬೆಲೆ ಇಳಿಕೆಗೆ ಕಾರಣ ಏನೆಂಬ ಬಗ್ಗೆ ತೈಲ ಕಂಪೆನಿಗಳು ಯಾವುದೆ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಹೇಳಬಹುದು.

advertisement

Leave A Reply

Your email address will not be published.