Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ‌ಬಿಡುಗಡೆಯಾಗುವ ದಿನಾಂಕ ಪ್ರಕಟ

advertisement

ಮಹಿಳೆಯರನ್ನು ಉತ್ತೇಜನ ಮಾಡಬೇಕು, ಆರ್ಥಿಕ ವಾಗಿ ಅವರನ್ನು ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶ ದಿಂದ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತಂದಿದೆ. ಇನ್ನೇನು ಲೋಕಸಭೆ ಚುನಾವಣೆ ಕೂಡ ನಡೆಯಲಿದ್ದು ಈ ಬಾರಿಯು ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಹಲವು ರೀತಿಯ ಗ್ಯಾರಂಟಿ ಯೋಜನೆಗಳನ್ನು(Guarantee Schemes) ಘೋಷಣೆ ಮಾಡಿದೆ. ಈಗಾಗಲೇ ನೀಡ್ತಾ ಇರುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ತಿಂಗಳಿಗೆ ಎರಡು ಸಾವಿರ‌ರೂಪಾಯಿ ಯನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಏಳು ಕಂತಿನ ವರೆಗೆ ಗೃಹಲಕ್ಷ್ಮಿ ಹಣ ಬಿಡುಗಡೆ ಗೊಂಡಿದ್ದು ಇದೀಗ ಎಂಟನೇ ಕಂತಿನ ಹಣದ ಬಗ್ಗೆ ಅಪ್ಡೇಟ್ ಮಾಹಿತಿ ಯೊಂದು ಲಭ್ಯವಾಗಿದೆ.

Gruha Lakshmi ಹಣ ಜಮೆ:

ಈಗಾಗಲೇ ನೋಂದಣಿ ಮಾಡಿದ ಮಹಿಳೆಯರಿಗೆ ಏಳು ಕಂತಿನ‌ವರೆಗೆ ಹಣ ಬಿಡುಗಡೆಯಾಗಿದ್ದು, ಎಂಟನೇ ಕಂತಿನ ಹಣವನ್ನು ಸರಕಾರ ಬಿಡುಗಡೆ ಮಾಡಲು ಸಿದ್ದತೆ ನಡೆಸಿದೆ. ಹೌದು ಏಪ್ರಿಲ್‌ ಮೊದಲ ಅಥವಾ ಎರಡನೇ ವಾರ 8ನೇ ಕಂತಿನ ಹಣವು ಮಹಿಳೆಯರ ಖಾತೆಗೆ ಜಮೆಯಾಗಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

Image Source: 123RF

advertisement

ಇಂತವರಿಗೆ ಮಾತ್ರ ಜಮೆ

ಪ್ರತಿ ತಿಂಗಳು ಕೂಡ ಸರಕಾರವು ಮಹಿಳೆಯರ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಖಾತೆಗೆ ಹಣ ಜಮೆ ಮಾಡಲಿದೆ. ಈಗಾಗಲೇ ಆಧಾರ್ ಕಾರ್ಡ್ ಆಪ್ಡೆಟ್, ಇ- ಕೆವೈಸಿ, ರೇಷನ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್, ಇತ್ಯಾದಿ ಕೆಲಸ ಆಗಿದ್ದರೆ ಮಾತ್ರ ಗೃಹಲಕ್ಷ್ಮಿ (Gruha Lakshmi)ಯ ಹಣ ಖಾತೆಗೆ ಜಮೆ ಮಾಡಲಿದೆ.

ಒಂದು ಕಂತಿನ ಹಣ ಜಮೆಯಾಗಿಲ್ಲ, ಕಾರಣವೇನು?

ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದ್ರು ಹಣ ಜಮೆಯಾಗಿಲ್ಲ.‌ ಇದಕ್ಕೆ ಕಾರಣ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಆಗಿದೆ. ಹೌದು ಕೆಲವು ಮಹಿಳೆಯರು ಈ ಯೋಜನೆಗೆ ಅನರ್ಹರು ಆಗಿದ್ದರೂ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹಾಗಾಗಿ ಈ ಹಣ ಜಮೆಯಾಗಿಲ್ಲ. ಕೆಲವು ಮಹಿಳೆಯರು ಅಗತ್ಯ ದಾಖಲೆಗಳನ್ನು ನೀಡದ ಕಾರಣ ಮತ್ತು ಮಾಹಿತಿ ಗಳ ಕೊರತೆ ಯಾಗಿರುವುದರಿಂದ ಹಣ ಜಮೆ ಯಾಗಿಲ್ಲ‌. ಆಧಾರ್, ರೇಷನ್ ಮಾಹಿತಿ ‌ಲಿಂಕ್ ಆಗದೇ ಇರೋ ಕಾರಣ, ಬ್ಯಾಂಕ್ ಖಾತೆ ಮ್ಯಾಪಿಂಗ್, ಇತ್ಯಾದಿ ಸಮಸ್ಯೆ ಸೇರಿದಂತೆ ಒಂದು ಕಂತಿನ ಹಣ ಕೂಡ ಮಹಿಳೆಯರ ಖಾತೆಗೆ ಜಮೆಯಾಗಿಲ್ಲ.ಈ ಮಾಹಿತಿ ಸರಿ ಪಡಿಸದಿದ್ದರೆ ಎಂಟನೇ ಕಂತಿನ ಹಣವು ಮಹಿಳೆಯರ ಖಾತೆಗೆ ಜಮೆ ಯಾಗೋದಿಲ್ಲ.

advertisement

Leave A Reply

Your email address will not be published.