Karnataka Times
Trending Stories, Viral News, Gossips & Everything in Kannada

Loan: 1 ಲಕ್ಷ ರೂ ಸಾಲದ ಮೇಲೆ ಅತ್ಯಂತ ಕಡಿಮೆ ಬಡ್ಡಿ ನೀಡುವುದಾಗಿ ಘೋಷಿಸಿದ ಈ ಬ್ಯಾಂಕುಗಳು! ಮುಗಿಬಿದ್ದ ಜನ

advertisement

ಇಂದು ಸಾಲದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದ್ದೆ ಇರುತ್ತದೆ. ಮನೆ ನಿರ್ಮಾಣ, ಶಿಕ್ಷಣ, ಮದುವೆ ಇತ್ಯಾದಿ ಕಾರ್ಯಗಳಿಗೆ ಖರ್ಚು ವೆಚ್ಚಗಳು ಹೆಚ್ಚಾಗಿ ಇರುವುದರಿಂದ ಹೆಚ್ಚಿನ ಜನರು ಸಾಲಕ್ಕೆ ಮೊರೆ‌ಹೋಗುತ್ತಾರೆ. ಇಂದಿನ‌ ದಿನದಲ್ಲಿ ಬ್ಯಾಂಕುಗಳು ಕೂಡ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಸಾಲ (Loan) ನೀಡುವುದು ಕೂಡ ಆಗಿದೆ. ಹೆಚ್ಚಿನ ಬ್ಯಾಂಕ್ ಗಳಲ್ಲಿ ಬಡ್ಡಿ ದರವು ಹೆಚ್ಚಾಗಿ ಇರುವುದರಿಂದ ಹೆಚ್ಚಿನ ಅವಧಿಯವರೆಗೆ ಸಾಲ ಸಂದಾಯ ಮಾಡಬೇಕಾಗುತ್ತದೆ. ಅದರಲ್ಲೂ ವೈಯಕ್ತಿಕ ಸಾಲಗಳಿಗೆ ದುಪ್ಪಟ್ಟು ಬಡ್ಡಿ ಇರುತ್ತದೆ. ಇದೀಗ ನಿಮಗೆ ತುರ್ತು ವೈಯಕ್ತಿಕ ಸಾಲ ಪಡೆಯಲು ಕೆಲವೊಂದು ಬ್ಯಾಂಕ್ ಗಳು ಕಡಿಮೆ ಬಡ್ಡಿಯನ್ನು ನಿಗದಿ ಮಾಡಿದ್ದು ಯಾವೆಲ್ಲ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲ (Personal Loan) ಕ್ಕೆ ಬಡ್ಡಿ ಕಡಿಮೆ ಎಂಬ ಮಾಹಿತಿಯನ್ನು ಈ ಲೇಖನ ಮೂಲಕ ತಿಳಿಯಿರಿ.

ವೈಯಕ್ತಿಕ ಸಾಲ (Personal Loan):

 

Image Source: Mint

 

advertisement

ನೀವು ಸಾಲ (Loan) ವನ್ನು ಪಡೆಯುವಾಗ ಎಷ್ಟು ಸರಿಯಾಗಿ ಪಾವತಿ ಮಾಡುತ್ತೀರಿ ಅನ್ನೋದನ್ನು‌ ಕ್ರೆಡಿಟ್ ಸ್ಕೋರ್ (Credit Score) ನಿರ್ಧಾರ ಮಾಡುತ್ತದೆ. ನೀವು ಉತ್ತಮ ಸ್ಕೋರ್ ಪಡೆದಿದ್ದರೆ ನಿಮಗೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗಲಿದೆ. ಅದ್ರೆ ನೀವು ವೈಯಕ್ತಿಕ ಸಾಲ (Personal Loan) ಪಡೆಯುವಾಗ ವಿವಿಧ ಬ್ಯಾಂಕ್‌ ನೀಡುವ ವೈಯಕ್ತಿಕ ಸಾಲದ ಬಡ್ಡಿದರಗಳನ್ನು ಗಮನಿಸಿಕೊಂಡು ಸಾಲ ಮಾಡಬೇಕು. ಅದೇ ರೀತಿ ನಿಮ್ಮ ಆರ್ಥಿಕ ಸ್ಥಿತಿಯನ್ನು ಗಮನಿಸಿ ಸಾಲ ಮರುಪಾವತಿ ಮಾಡುವ ಅವಧಿ ಬಗ್ಗೆಯು ನೀವು ಮೊದಲೇ ಯೋಚನೆ ಮಾಡಬೇಕು.

ಈ ಬ್ಯಾಂಕ್ ಗಳ ಆಯ್ಕೆ ಉತ್ತಮ:

  • ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ವು ಗ್ರಾಹಕರನ್ನು ಸೆಳೆಯುತ್ತಾ, ಹಲವು ರೀತಿಯ ಆಕರ್ಷಕ ಕೊಡುಗೆಗಳನ್ನು ಬ್ಯಾಂಕ್ ಗ್ರಾಹಕರಿಗೆ ನೀಡುತ್ತಾ ಬಂದಿದೆ. ಅದರಲ್ಲೂ ವೈಯಕ್ತಿಕ ಸಾಲ (Personal Loan) ದ ಮೇಲೆ ಶೇಕಡಾ 11.15 ರಿಂದ ಬಡ್ಡಿದರವನ್ನು ಈ ಬ್ಯಾಂಕ್ ವಿಧಿಸುತ್ತದೆ. ಇಲ್ಲಿ‌ ನಾಲ್ಕು ವರ್ಷಗಳ ಮರುಪಾವತಿ ಅವಧಿಯೊಂದಿಗೆ ರೂ 1-ಲಕ್ಷ ಸಾಲದ ಮೇಲಿನ EMI ಪಾವತಿ 2,592 ರೂ ಆಗಿದೆ.
  • ಬ್ಯಾಂಕ್ ಆಫ್ ಬರೋಡಾವು (Bank of Baroda) ಕೂಡ ವೈಯಕ್ತಿಕ ಸಾಲಗಳಿಗೆ ಬೆಸ್ಟ್ ಆಯ್ಕೆ‌ಎಂದು ಹೇಳಬಹುದು. ಇಲ್ಲಿ ಹೆಚ್ಚಿನ ಸಂಖ್ಯೆಯ ಖಾತೆದಾರರು ಇದ್ದು, ಈ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಶೇಕಡಾ 11.4 ರಿಂದ ಬಡ್ಡಿ ದರವನ್ನು ನೀಡಲಿದೆ.
  • ಅದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಕೂಡ ಹಲವು ರೀತಿಯ ಸಾಲಗಳನ್ನು ಗ್ರಾಹಕರಿಗಾಗಿ ನೀಡುತ್ತ ಬಂದಿದ್ದು ಇದೀಗ ವೈಯಕ್ತಿಕ ಸಾಲಕ್ಕೆ ನಾಲ್ಕು ವರ್ಷಗಳ ಅವಧಿಯೊಂದಿಗೆ ರೂ 1-ಲಕ್ಷ ವೈಯಕ್ತಿಕ ಸಾಲಗಳ ಮೇಲೆ ಶೇಕಡಾ 12.4 ರಿಂದ ಬಡ್ಡಿದರವನ್ನು ನೀಡಲಿದೆ. ಇದರ EMI ಮೊತ್ತವು 2,653 ರೂ.ಆಗಿದೆ
  • ಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank) ಮತ್ತು ಯೆಸ್ ಬ್ಯಾಂಕ್ (Yes Bank) ಕೂಡ ಹಲವು ರೀತಿಯ ಬ್ಯಾಂಕಿಂಗ್ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ವೈಯಕ್ತಿಕ ಸಾಲಗಳ ಮೇಲೆ ಈ ಬ್ಯಾಂಕ್ ಗಳು ಶೇಕಡಾ 10.99 ರಿಂದ ಬಡ್ಡಿ ದರವನ್ನು ನೀಡಲಿದ್ದು ನಾಲ್ಕು ವರ್ಷಗಳ ಮರುಪಾವತಿ ಅವಧಿಯೊಂದಿಗೆ ರೂ 1 ಲಕ್ಷ ಸಾಲದ ಮೇಲಿನ EMI ಮೊತ್ತ 2,584 ಆಗಿದೆ
  • ICICI Bank ಕೂಡ ವೈಯಕ್ತಿಕ ಸಾಲಗಳಿಗೆ ಪ್ರೋತ್ಸಾಹ ‌ನೀಡುತ್ತದೆ.‌ ಈ ಬ್ಯಾಂಕ್ ‌ ಶೇಕಡಾ 10.8 ರಿಂದ ಬಡ್ಡಿ ದರವನ್ನು ನೀಡಲಿದ್ದು ನಾಲ್ಕು ವರ್ಷಗಳ ಮರುಪಾವತಿ ಅವಧಿಯೊಂದಿಗೆ ರೂ 1-ಲಕ್ಷ ಸಾಲದ ಮೇಲಿನ EMI 2,575 ರೂ ಆಗಿದೆ.

advertisement

Leave A Reply

Your email address will not be published.