Karnataka Times
Trending Stories, Viral News, Gossips & Everything in Kannada

Personal Loan: ವೈಯಕ್ತಿಕ ಸಾಲದ ಕುರಿತಾಗಿ ಆರ್‌ಬಿಐನಿಂದ ಹೊಸ ನಿಯಮ!

advertisement

ಇಂದು ಸಾಲದ ಅವಶ್ಯಕತೆ ಹೆಚ್ಚಿನ ‌ಜನರಿಗೆ ಇದ್ದೆ ಇರುತ್ತದೆ.ಅದರಲ್ಲೂ ತುರ್ತಾಗಿ ಸಾಲ (Loan) ಬೇಕು ಅಂದಾಗ ವೈಯಕ್ತಿಕ ಸಾಲಕ್ಕೆ ಹೆಚ್ಚು ಬೇಡಿಕೆ ಇಡುತ್ತೇವೆ. ವೈಯಕ್ತಿಕ ಸಾಲ (Personal Loan) ಗಳ ಮೇಲಿನ ಬಡ್ಡಿ ದರವು ಒಂದೇ ರೀತಿ ಇರಿವುದಿಲ್ಲ. ಬ್ಯಾಂಕ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಅದಕ್ಕಾಗಿಯೇ ನೀವು ಬ್ಯಾಂಕ್ ಅನ್ನು ಆಯ್ಕೆ ಮಾಡುವಾಗ ಬಡ್ಡಿದರ, ನಿಯಮ ಇತ್ಯಾದಿಗಳ ಬಗ್ಗೆ ಜಾಗರೂಕರಾಗಿ ಆಯ್ಕೆ ಮಾಡಬೇಕು.ಇಂದು ಅರ್ ಬಿ ಐ (RBI) ಕೂಡ ಬ್ಯಾಂಕ್ ನಿಯಮಗಳನ್ನು ಆಗಾಗ ಬದಲಾವಣೆ ಮಾಡುತ್ತಲೆ‌ ಇರುತ್ತದೆ.

ನಿಯಮ ಬದಲಾವಣೆ:

 

 

ಇದೀಗ ಬ್ಯಾಂಕ್ ಸಾಲದ ವಿಚಾರವಾಗಿಯು ನಿಯಮ ಬದಲಾವಣೆ ಮಾಡಿದೆ.ಇನ್ಮುಂದೆ ವೈಯಕ್ತಿಕ ಸಾಲ (Personal Loan) ವನ್ನು ಪಡೆಯುದು. ದುಬಾರಿಯಾಗಬಹುದು. ಯಾಕಂದ್ರೆ ಆರ್‌ಬಿಐ ಬಡ್ಡಿಯನ್ನು 100 ಪ್ರತಿಶತದಿಂದ 125 ಪ್ರತಿಶತಕ್ಕೆ ಹೆಚ್ಚಿಸಿದೆ. ಅಷ್ಟೆ ಅಲ್ಲದೆ ಅರ್ ಬಿ ಐ ದೇಶದಲ್ಲಿ ಅಸುರಕ್ಷಿತ ಸಾಲಗಳ ಮೇಲಿನ ದೃಷ್ಟಿಯಿಂದ, ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ.

ಹೊಸ ನಿಯಮ ಯಾವುದು?

 

advertisement

 

ಆರ್‌ಬಿಐ ಗ್ರಾಹಕರ ಸಾಲ (Loan) ದಲ್ಲಿ ಬಡ್ಡಿದರವನ್ನು 100 ರಿಂದ 125 ಕ್ಕೆ ಹೆಚ್ಚಿಸಿದೆ. ಇದು ಇಂದು ಬ್ಯಾಂಕ್ ನ ಸಾಲದ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಅದರ ನೇರ ಪರಿಣಾಮವು ಬ್ಯಾಂಕಿನ ಗ್ರಾಹಕರ ಮೇಲೆ ಬೀರುತ್ತದೆ. ಇದರಿಂದಾಗಿ ಸಾಲದ ಮೇಲೆ ಹೆಚ್ಚಿನ ಬಡ್ಡಿಯನ್ನು ಹೆಚ್ಚು ಪಾವತಿಸಬೇಕಾಗುತ್ತದೆ.

ವೈಯಕ್ತಿಕ ಸಾಲದ ಬಡ್ಡಿ ದರಗಳು:

ವೈಯಕ್ತಿಕ ಸಾಲ (Personal Loan) ದ ಬಡ್ಡಿದರಗಳು ಬದಲಾವಣೆ ಆಗುತ್ತಿರುತ್ತದೆ. SBI ನಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ 11.15% – 15.30% ಇರಲಿದ್ದು ಆಕ್ಸಿಸ್ ಬ್ಯಾಂಕ್ (Axis Bank) ನಲ್ಲಿ‌ ವೈಯಕ್ತಿಕ ಸಾಲದ ಬಡ್ಡಿ ದರಗಳು 10.49% ರಿಂದ ಪ್ರಾರಂಭವಾಗುತ್ತವೆ. ಅದೇ ರೀತಿ PNB ವೈಯಕ್ತಿಕ ಸಾಲದ ಬಡ್ಡಿ ದರ 10.40% – 16.95%, ಬಜಾಜ್ ಫೈನಾನ್ಸ್ ಪರ್ಸನಲ್ ಲೋನ್ ಬಡ್ಡಿ ದರಗಳು 11.00% ರಿಂದ ಇರಲಿದೆ.

ಅನ್ವಯ ಇಲ್ಲ:

ಈ ನಿಯಮಗಳು ಗೃಹ ಸಾಲ (Home Loan), ಶಿಕ್ಷಣ ಮತ್ತು ವಾಹನ ಸಾಲಗಳು ಸೇರಿದಂತೆ ಕೆಲವು ಗ್ರಾಹಕ ಸಾಲಗಳಿಗೆ ಅನ್ವಯಿಸುವುದಿಲ್ಲ. ಅಸುರಕ್ಷಿತ ಎಂದು ಪರಿಗಣಿಸಲಾದ ವೈಯಕ್ತಿಕ ಸಾಲಗಳಿಗೆ ರಿಸ್ಕ್‌ ವೇಯ್ಟ್‌ ಜಾಸ್ತಿ ಇರುವುದರಿಂದ ಇಂತಹ ಸಾಲಗಳಿಗೆ ಬ್ಯಾಂಕ್‌ಗಳು ಹೆಚ್ಚಿನ ಮೊತ್ತವನ್ನು ವಿಧಿಸುತ್ತದೆ.

advertisement

Leave A Reply

Your email address will not be published.