Karnataka Times
Trending Stories, Viral News, Gossips & Everything in Kannada

PM Awas Plus: ನಿಮ್ಮ ಕನಸಿನ ಮನೆಯ ನಿರ್ಮಾಣ ಈಗ ಸಾಧ್ಯ, ಈ ಯೋಜನೆಯಡಿ ಈಗಲೇ ಅಪ್ಲೈ ಮಾಡಿ.

advertisement

ಸ್ವಂತ ಮನೆ ಕಟ್ಟಿಕೊಳ್ಳುವುದು ಎಲ್ಲರ ಕನಸು. ಬದುಕಿನಲ್ಲಿ ಏನು ಸಾಧನೆ ಮಾಡಿದ್ದೇವೋ ಇಲ್ಲವೋ ಸ್ವಂತ ಮನೆ ಒಂದು ಕಟ್ಟಿಕೊಂಡರೆ ದೊಡ್ಡ ಸಾಧನೆ ಮಾಡಿದಂತೆ ಎಂದು ಹಲವು ಜನರ ಅಭಿಪ್ರಾಯ. ಸ್ವಂತವಾದ ಮನೆಯಿರುವುದು ಒಂದು ರೀತಿಯ ಮಾನಸಿಕ ಧೈರ್ಯವನ್ನು ಹಾಗೂ ಸುರಕ್ಷತೆಯನ್ನು ಕೂಡ ನೀಡುವುದು ಸುಳ್ಳಲ್ಲ.

ಭಾರತ ಇಂದು ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು. ಭಾರತದ ಎಕಾನಮಿಯತ್ತ ಬೇರೆ ದೇಶಗಳು ಗಮನ ಹರಿಸುತ್ತಿವೆ. ಆದರೆ ಇಂದಿಗೂ ಭಾರತದಲ್ಲಿ ಅದೆಷ್ಟೋ ಜನ ಸ್ವಂತ ಮನೆ ಇಲ್ಲದೆ ಇದ್ದಾರೆ. ಹಲವಾರು ಜನರಿಗೆ ಇದು ಇಂದಿಗೂ ಒಂದು ಕನಸು ಆಗಿದೆ. ಆದರೆ ಈಗ ಅಂತಹ ಕನಸುಗಳನ್ನು ಸಾಕಾರಗೊಳಿಸಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ.

PM Awas Plus:

 

 

ಜನರಿಗೆ ಶಾಶ್ವತ ಮನೆಗಳು ಇರಬೇಕು ತಾತ್ಕಾಲಿಕವಾಗಿ ಕಟ್ಟಿಕೊಂಡ ಮನೆಗಳಲ್ಲಿ ಜನರ ಬದುಕು ಸುಗಮವಾಗಿ ಸಾಗುವುದಿಲ್ಲ. ಒಂದು ರೀತಿಯ ಭದ್ರತೆ ದೊರೆಯಬೇಕು ಎಂದಾದಲ್ಲಿ ಗಟ್ಟಿಯಾದ ಮನೆಗಳು ಬೇಕು ಎನ್ನುವ ಯೋಜನೆಯೊಂದಿಗೆ ಸರ್ಕಾರವು ಪ್ರಧಾನ ಮಂತ್ರಿ ಆವಾಜ್ ಪ್ಲಸ್ ಯೋಜನೆ (PM Awas Plus Yojana) ಯನ್ನು ಆರಂಭಿಸಿದೆ. ಈ ಮನೆ ನಿಮ್ಮ ಕನಸಿನ ಮನೆ ಆಗುವುದರಲ್ಲಿ ಅನುಮಾನವಿಲ್ಲ.

ಎಷ್ಟು ಸಹಾಯಧನ ದೊರೆಯುತ್ತದೆ ?

advertisement

ಯೋಜನೆಯ ಪ್ರಕಾರ ಬಯಲು ಪ್ರದೇಶದಲ್ಲಿ ವಾಸಿಸುವ ಜನರು ಮನೆ ಕಟ್ಟಿಕೊಳ್ಳಬೇಕು ಎಂಬ ಆಸೆಯೊಂದಿಗೆ ಅರ್ಜಿ ಸಲ್ಲಿಸಿದರೆ 1,20,000 ರೂಪಾಯಿಗಳನ್ನು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರು 1,30,000 ರೂಪಾಯಿಗಳನ್ನು ಪಡೆಯಲಿದ್ದಾರೆ. ಈ ಸ್ಕೀಮ್ ನ ಬಗ್ಗೆ ಇರುವ ಇತರ ಮಾಹಿತಿಗಳು ಹಾಗೂ ಹೇಗೆ ಇದಕ್ಕೆ ಅಪ್ಲೈ ಮಾಡಬೇಕು ಎಂಬುದನ್ನು ಈ ಮುಂದೆ ಹೇಳಲಿದ್ದೇವೆ.

ಈಗಾಗಲೇ ಪ್ರಸ್ತುತ ಇರುವ ಸಹಾಯಧನ ಮೊತ್ತವನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಇದ್ದು ಎರಡೂ ವರ್ಗಗಳಿಗೆ ತಲಾ ಒಂದು ಲಕ್ಷ ರೂಪಾಯಿಗಳನ್ನು ಹೆಚ್ಚಿಸಲಾಗುತ್ತಿದೆ ಎಂಬ ಬಗ್ಗೆಯೂ ಬದಂತಿಗಳು ಹರಡುತ್ತಿವೆ. ಈ ಬಗ್ಗೆ ಯಾವ ಸಮಯದಲ್ಲಾದರೂ ಕೇಂದ್ರ ಸರ್ಕಾರ ಅಧಿ ಸೂಚನೆಯನ್ನು ಹೊರಡಿಸಬಹುದು ಎಂದು ಕಾಯಲಾಗುತ್ತಿದೆ.

2018-19ರ ಅವಧಿಯಲ್ಲಿ ಆವಾಜ್ ಪ್ಲಸ್ (PM Awas Plus) ಸಮೀಕ್ಷೆಯನ್ನು ಸರ್ಕಾರ ನಡೆಸಿದ್ದು ಇದರ ಪ್ರಕಾರ 2 ಕೋಟಿ 95 ಲಕ್ಷ ಜನರು ಈ ಯೋಜನೆಯಲ್ಲಿ ಹಕ್ಕನ್ನು ಪಡೆದಿದ್ದರು. ಈ ಎಲ್ಲಾ ಜನರು ಈಗ ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಬಹುದು.

ಎಲ್ಲಿ ಅಪ್ಪ್ಲೈ ಮಾಡಬೇಕು ?

ನಿಮ್ಮ ಸಮೀಪದ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಅಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಾದ ಬಳಿಕೆ ನಿಮ್ಮ ಮನೆಯ ಅಗತ್ಯ ನಿಜವೇ ಎಂದು ಪರಿಶೀಲಿಸಲಾಗುವುದು ಹಾಗೂ ಹೌದು ಎಂದಾದಲ್ಲಿ ನಿಮಗೆ ಈ ಸಹಾಯಧನ ದೊರೆಯಲಿದೆ.

ಇಲ್ಲಿಯವರೆಗೆ ಹಲವಾರು ಅರ್ಜಿಗಳು ಪ್ರಧಾನಮಂತ್ರಿ ಆವಾಜ್ ಪ್ಲಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲು ಬಂದಿವೆ. ಕಳೆದ ಹಣಕಾಸು ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿತ್ತು. ಹಾಗಾದರೆ ನೀವು ಯೋಜನೆಯ ಲಾಭ ಪಡೆಯಬೇಕು ಎಂದಾದರೆ ಕೂಡಲೇ ಅಪ್ಲೈ ಮಾಡಿ.

advertisement

Leave A Reply

Your email address will not be published.