Karnataka Times
Trending Stories, Viral News, Gossips & Everything in Kannada

Loan Default: ಬ್ಯಾಂಕ್ ಸಾಲದ ಡೀಫಾಲ್ಟ್‌ಗೆ ಹೊಸ ನಿಯಮ ಜಾರಿಗೆ ತಂದ ಆರ್ ಬಿ ಐ!

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಸಾಲದ ಅವಶ್ಯಕತೆ ಇದ್ದೆ ಇರುತ್ತದೆ. ಯಾಕಂದ್ರೆ ತಾವು ಅಂದುಕೊಂಡ ಕನಸನ್ನು ನನಸು ಮಾಡಬೇಕಾದರೆ ಸಾಲದ ಅವಶ್ಯಕತೆ ಹೆಚ್ಚು. ಸಾಲ ಅಂದಾಗ ಒಂದೊಂದು ಬ್ಯಾಂಕ್ ನಲ್ಲಿ ಒಂದೊಂದು ನಿಯಮ ಇದ್ದೆ ಇರುತ್ತದೆ.ಈ ಬಗ್ಗೆ ಆರ್ ಬಿ ಐ ಕೂಡ ಸುತ್ತೊಲೆಗಳನ್ನು ಪ್ರಕಟಣೆ ಮಾಡುತ್ತಲೆ ಬಂದಿದೆ. ಇದೀಗ ಸಾಲದ ಮೇಲಿನ ಬಡ್ಡಿ ಹೊರತುಪಡಿಸಿ ಬ್ಯಾಂಕ್ ವಿಧಿಸುವ ಪೆನಾಲ್ಟಿ ಇಂಟರೆಸ್ಟ್ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಸೂಚನೆ

ಈ ನಿಯಮದ ಅನ್ವಯ ಬ್ಯಾಂಕ್‌ಗಳು ಮತ್ತು ಸಾಲ ನೀಡುವ ಸಂಸ್ಥೆಗಳು ಬಾಕಿ ಇರುವ ಮೊತ್ತದ ಮೇಲೆ ಪೆನಾಲ್ಟಿ ಇಂಟರೆಸ್ಟ್ ಹಾಕುವಂತಿಲ್ಲ ಎಂದು ಅರ್ ಬಿ ಐ ತಿಳಿದಸಿದೆ. ಅದೇ ರೀತಿ ಸುರಕ್ಷಿತ ವೈಯಕ್ತಿಕ ಸಾಲಗಳ ಬಗ್ಗೆಯು ಎಚ್ಚರಿಕೆಯನ್ನು ನೀಡಿದೆ. ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಸೂಚನೆ ನೀಡಿದೆ. ಈ ಮೂಲಕ ಗ್ರಾಹಕರ ಸಾಲಕ್ಕಾಗಿ ನಿಯಮಗಳನ್ನು ಮತ್ತಷ್ಟು ಕಠಿಣ ಮಾಡಿದೆ.

advertisement

ಈ ನಿಯಮ ಜಾರಿ

ಹೊಸ ರೂಲ್ಸ್ ಪ್ರಕಾರ ಸಾಲದಲ್ಲಿ ಡೀಫಾಲ್ಟ್ (Loan Default) ಆಗಿದ್ದಲ್ಲಿ ಬ್ಯಾಂಕ್‌ಗಳು ಗ್ರಾಹಕರಿಗೆ ಕೇವಲ ಸಮಂಜಸವಾದ ಶುಲ್ಕವನ್ನು ಮಾತ್ರ ಬ್ಯಾಂಕ್ ವಿಧಿಸಬಹುದು ಎಂದಿದೆ.ಅದೇ ರೀತಿ ಆರ್‌ಬಿಐ ಸಾಲದ ಖಾತೆಗಳ ಮೇಲಿನ ದಂಡ ಮತ್ತು ಬಡ್ಡಿದರಗಳ ನಿಯಮಗಳನ್ನು ಬದಲಾಯಿಸಿದೆ. ಬಡ್ಡಿ ದರದಲ್ಲಿ ಯಾವುದೇ ಹೆಚ್ಚುವರಿ ಮೊತ್ತ ನಿಗದಿ ಪಡಿಸಿದಂತೆ ಅರ್ ಬಿ ಐ ನೀಡಿದ ಮಾರ್ಗಸೂಚಿಯನ್ನು ಸರಿಯಾಗಿ ಅನುಷ್ಠಾನ ಮಾಡುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ. ಸಾಲದ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಅನುಸರಣೆಗೆ ಸಮಂಜಸವಾದ ದಂಡ ಶುಲ್ಕವನ್ನು ಅಳವಡಿಸಿಕೊಳ್ಳಬಹುದು ಎಂದಿದೆ.

ಕ್ರೆಡಿಟ್ ಲೈನ್ ಗೂ ಅನ್ವಯ

ಪ್ರಸ್ತುತ, ಬ್ಯಾಂಕ್‌ಗಳು ಠೇವಣಿ ಖಾತೆಗಳು ಮತ್ತು ವ್ಯಾಲೆಟ್‌ಗಳಂತಹ ಪ್ರಿಪೇಯ್ಡ್ ಗಳಿಗೆ UPI ವಹಿವಾಟುಗಳನ್ನು ನಡೆಸುವ ಸೌಕರ್ಯ ಹೊಂದಿದ್ದು ಆದರೆ ಇನ್ನು ಮುಂದೆ UPI ಸೇವೆಗಳು ಬ್ಯಾಂಕ್‌ಗಳ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳಿಗೂ ಅನ್ವಯವಾಗುತ್ತದೆ ಎಂಬ ನಿಯಮವು ಇದೆ.

advertisement

Leave A Reply

Your email address will not be published.