Karnataka Times
Trending Stories, Viral News, Gossips & Everything in Kannada

Aadhaar Card: ಜನ್ಮ ಪ್ರಮಾಣ ಪತ್ರದ ಬಗ್ಗೆ ಹೊಸ ಅಪ್ಡೇಟ್; ಆಧಾರ್ ಮಾನ್ಯವಲ್ಲ ಎಂದ ಸರ್ಕಾರ!

advertisement

ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು, ಇಂದು ನಾವು ಯಾವುದೇ ರೀತಿಯ ಕೆಲಸಕ್ಕೂ ಕೂಡ ಆಧಾರ್ ನ್ನೇ ಪ್ರಮುಖ ಐಡಿ ಕಾರ್ಡ್ ಆಗಿ ಬಳಸುತ್ತೇವೆ. ಶಾಲೆಗೆ ಹೆಸರು ಸೇರಿಸುವುದರಿಂದ ಹಿಡಿದು ವಿಮಾನ ಹತ್ತುವವರೆಗೆ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುವ ಗುರುತಿನ ಕಾರ್ಡ್ ಆಗಿರುತ್ತದೆ. ಇದೀಗ ಆಧಾರ್ ಕಾರ್ಡ್ ವಿಚಾರದಲ್ಲಿ ಹೊಸ ಅಪ್ಡೇಟ್ ಸಿಕ್ಕಿದ್ದು, ಏನು ಎಂಬುದನ್ನು ತಿಳಿದುಕೊಳ್ಳೋಣ.

ಇಂದು ಯಾವುದೇ ಸರ್ಕಾರಿ ಯೋಜನೆಯ ಪ್ರಯೋಜನ ಪಡೆದುಕೊಳ್ಳುವುದಿದ್ದರೆ ಅಥವಾ ಸರ್ಕಾರಿ ಕಚೇರಿಗಳಲ್ಲಿ ನೊಂದಣಿ ಮಾಡಿಸುವುದಿದ್ದರೆ ಹಾಗೆ ಯಾವುದೇ ವೈಯಕ್ತಿಕ ಕೆಲಸಕ್ಕೆ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು. ಇದೀಗ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ EPFO ಸುತ್ತೋಲೆ ಒಂದನ್ನು ಹೊರಡಿಸಿದೆ.

EPFO ಸುತ್ತೋಲೆಯಲ್ಲಿ ಏನಿದೆ?

Employees provident fund organisation ಕಾರ್ಮಿಕ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ, ಸುತ್ತೋಲೆ ಪ್ರಕಾರ ಜನ್ಮ ನೋಂದಣಿಗೆ ಆಧಾರ್ ಕಾರ್ಡ್ (Aadhaar Card) ಮಾನ್ಯವಲ್ಲ ಎಂದು ತಿಳಿಸಲಾಗಿದೆ. ಜನವರಿ 16ರಂದು ಈ ಸುತ್ತೋಲೆ ಹೊರಡಿಸಲಾಗಿದ್ದು, ಯು ಐ ಡಿ ಎ ಐ ಬೆಂಬಲ ಸೂಚಿಸಿದೆ.

advertisement

ಜನ್ಮ ದಾಖಲೆಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ!

ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡುವ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಅಲ್ಲ ಎಂಬುದನ್ನು ಸೂಚಿಸಲಾಗಿದೆ. ಜನ್ಮ ದಿನಾಂಕ ಬದಲಾವಣೆಗೆ ಮಾರ್ಕ್ಸ್ ಶೀಟ್, ಶಾಲೆ ಬಿಡುವ ಅಥವಾ ಬಿಟ್ಟ ಪ್ರಮಾಣ ಪತ್ರ, ಸರ್ಕಾರಿ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪಡೆದ ಶಾಲಾ ವರ್ಗಾವಣೆ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣ ಪತ್ರ, ಪಾಸ್ಪೋರ್ಟ್, ಪ್ಯಾನ್ ಕಾರ್ಡ್, ಪಿಂಚಣಿ ಪ್ರಮಾಣ ಪತ್ರ ಮೊದಲಾದವುಗಳನ್ನು ಬಳಸಬಹುದು.

ಆಧಾರ್ ಕಾರ್ಡನ್ನು ಗುರುತಿನ ಚೀಟಿ ಅಥವಾ ನಿವಾಸ ಪ್ರಮಾಣ ಪತ್ರವಾಗಿ ಬಳಕೆ ಮಾಡಬಹುದು. ಆದರೆ ಜನ್ಮ ಪ್ರಮಾಣ ಪತ್ರದಲ್ಲಿ ಆಧಾರ್ ಕಾರ್ಡ್ ಬಳಕೆ ಮಾಡಲಾಗುವುದಿಲ್ಲ ಎಂದು ಯುಐಡಿಎಐ ಕೂಡ ಸ್ಪಷ್ಟನೆ ನೀಡಿದೆ. ಆಧಾರ್ ಕಾರ್ಡ್ ಗುರುತು ಮತ್ತು ಶಾಶ್ವತ ನಿವಾಸದ ಪುರಾವೆಯಾಗಿ ಬಳಕೆಯಾಗುತ್ತದೆ. ಹಾಗಾಗಿ ಜನ್ಮ ದಿನಾಂಕ ಬದಲಾವಣೆ ಹಾಗೂ ಇತರ ತಿದ್ದುಪಡಿಗೆ ಸಂಬಂಧಪಟ್ಟ ಹಾಗೆ ಆಧಾರ್ ಕಾರ್ಡ್ ಮಾನ್ಯವಲ್ಲ ಎಂದು ತಿಳಿಸಲಾಗಿದೆ.

advertisement

Leave A Reply

Your email address will not be published.