Karnataka Times
Trending Stories, Viral News, Gossips & Everything in Kannada

Gruha Lakshmi Scheme: ಗೃಹಲಕ್ಷ್ಮಿ ಯೋಜನೆಯು 6 ನೆಯ ಕಂತಿನ ಹಣ ಯಾವಾಗ ದೊರೆಯುತ್ತದೆ?

advertisement

ಕರ್ನಾಟಕ ಸರ್ಕಾರ (Karnataka Government) ರಾಜ್ಯದ ಮಹಿಳೆಯರ ಸಬಲೀಕರಣ (Women Empowerment) ಕ್ಕಾಗಿ ಜಾರಿಗೆ ತಂದಿರುವ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme). ಈ ಯೋಜನೆಯಡಿ, ಕುಟುಂಬದ ಯಜಮಾನಿಯಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂಪಾಯಿಗಳ ನಗದು ನೆರವು ನೀಡಲಾಗುತ್ತದೆ. ಈ ನೆರವಿನಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಮಾಡುತ್ತಿದೆ. ಈಗಾಗಲೇ 4 ಕಂತುಗಳನ್ನ ಜಮಾ ಮಾಡಿದ್ದು. ಕಳೆದ ಮೂರು ದಿನಗಳಿಂದ ಐದನೇ ಕಂತಿನ ಹಣವು ಸಹಿತ ಮಹಿಳೆಯರ ಖಾತೆಗೆ ಬಂದು ತಲುಪುತ್ತಿದೆ.

6 ನೇ ಕಂತಿನ ಹಣ ಯಾವಾಗ ದೊರೆಯುತ್ತದೆ?

 

 

advertisement

ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯ 5ನೇ ಕಂತಿನ ಹಣ ರಾಜ್ಯದ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಕಳೆದ ಮೂರು ದಿನಗಳಿಂದ ಜಮಾ ಆಗುತ್ತಿದ್ದು. ಇದುವರೆಗೂ ಒಂದು ಕಂತಿನ ಹಣ ಬರದೆ ಇರುವ ಮಹಿಳೆಯರ ಬ್ಯಾಂಕ್ ಖಾತೆಗೆ ಮತ್ತೊಮ್ಮೆ ಆಧಾರ್ ಸೀಡಿಂಗ್ ಮಾಡಿಸಿದ ನಂತರ ಐದನೇ ಕಂತಿನ ಹಣ ಬಂದು ತಲುಪಿದೆ. ಸಾಮಾನ್ಯವಾಗಿ ಪ್ರತಿ ತಿಂಗಳ ಹಣ ಒಂದು ತಿಂಗಳ ತಡವಾಗಿ ತಲುಪುತ್ತದೆ. ಉದಾಹರಣೆಗೆ ಡಿಸೆಂಬರ್ ತಿಂಗಳ ಹಣ ಜನವರಿಯಲ್ಲಿ. ಜನವರಿ ತಿಂಗಳ ಹಣ ಫೆಬ್ರುವರಿ ತಿಂಗಳಲ್ಲಿ. ಹೇಗೆ ಹಾಗಾಗಿ ಈಗಷ್ಟೆ 5 ನೆಯ ತಿಂಗಳ ಹಣ ನೀಡಿರುವ ಕಾರಣದಿಂದ 6 ನೆಯ ತಿಂಗಳ ಹಣ ಫೆಬ್ರವರಿ ತಿಂಗಳಲ್ಲಿ ದೊರೆಯುತ್ತದೆ.

5 ನೆಯ ಕಂತಿನ ಹಣ ದೊರೆತಿಲ್ಲ ಎಂದವರು ಏನು ಮಾಡಬೇಕು?

ಹಾಗಾಗಿ ಇದುವರೆಗೂ ಒಂದು ಕಂತಿನ ಹಣ ಬಂದಿಲ್ಲ ಎಂದು ಹೇಳುತ್ತಿರುವ ಮಹಿಳೆಯರು, ನಿಮ್ಮ ಬ್ಯಾಂಕ್ ಖಾತೆ (Bank Account) ಮತ್ತು ಆಧಾರ್ ಕಾರ್ಡ್ (Aadhaar Card) ಸರಿಯಾಗಿ ಸೀಡ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಹೊಸ ಪೋಸ್ಟ್ ಬ್ಯಾಂಕ್ ಖಾತೆಯನ್ನು ತೆರೆಯಿರಿ.

ಗೃಹಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳು ಪ್ರತಿ ತಿಂಗಳು 2,000 ರೂ ಅನ್ನು ಪಡೆಯುತ್ತಿದ್ದಾರೆ. ಹಾಗೆಯೇ ಅವರು ಪಡೆದ ಅಥವಾ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂದು ಅವರಿಗೆ ತಿಳಿಯುದಿಲ್ಲ. ಇದೀಗ ರಾಜ್ಯ ಸರ್ಕಾರ ಆ ಒಂದು ಸಮಸ್ಯೆಯನ್ನು ಪರಿಹರಿಸಿದೆ. ನಿಮ್ಮ ಮೊಬೈಲ್ ಮೂಲಕವೇ ರೇಷನ್ ಕಾರ್ಡ್ ನಂಬರ್ (Ration Card Number) ಬಳಸಿ ಹಣ ಜಮಾ ಅಥವಾ ಅರ್ಜಿ ಸಲ್ಲಿಸಿದ ವಿವರ ತಿಳಿಯಬಹುದು.

advertisement

Leave A Reply

Your email address will not be published.