Karnataka Times
Trending Stories, Viral News, Gossips & Everything in Kannada

Tata Punch EV: 421 Km ರೇಂಜ್ ಕೊಡುವ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಅನಾವರಣ, ಆರಂಭಿಕ ಬೆಲೆ ಕೇವಲ 10.99 ಲಕ್ಷ!

advertisement

ಎಲೆಕ್ಟ್ರಿಕ್ ಕಾರುಗಳ ತಯಾರಿಯಲ್ಲಿ ಭಾರತದಲ್ಲಿ ಟಾಟಾ ಮೋಟಾರ್ಸ್ ಅಗ್ರ ಸ್ಥಾನದಲ್ಲಿದೆ. ಟಾಟಾದ ಪ್ರಮುಖ ಇವಿಗಳು ಭಾರತದ ರಸ್ತೆಯಲ್ಲಿ ತಮ್ಮ ರಾಜ್ಯಭಾರ ಮಾಡುತ್ತಿವೆ. ಇದೀಗ ತನ್ನ ಇವಿ ಫೋರ್ಟ್‌ಪೋಲಿಯೋವನ್ನು ಇನ್ನಷ್ಟು ವಿಸ್ತರಿಸುವತ್ತ ಹೆಜ್ಜೆ ಇಟ್ಟಿರುವ ಟಾಟಾ ಸಂಸ್ಥೆ ಬಹುನಿರೀಕ್ಷಿತ ಪಂಚ್ ಇವಿಯನ್ನು ಬಿಡುಗಡೆ ಮಾಡಿದೆ.

ಟಾಟಾ ಪಂಚ್ ಇವಿ : ಎಕ್ಸ್‌ಶೋರೂಮ್ ಬೆಲೆ

ಭಾರತದ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಟಾಟಾ ಪಂಚ್ ಇವಿ (Tata Punch EV) ಯ ಎಕ್ಸ್‌ಶೋರೂಮ್ ಬೆಲೆ 10.99 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಹಾಗೂ ಇದರ ಟಾಪ್ ಸ್ಪೆಸಿಫಿಕೇಷನ್‌ ರೂಪಾಂತರದ ಎಕ್ಸ್‌ಶೋರೂಮ್ ಬೆಲೆ 14.49 ಲಕ್ಷ ರೂಪಾಯಿ ತನಕ ಇದೆ. ಇನ್ನು ಜನವರಿ 22 ರಿಂದ ಈ ಎಲೆಕ್ಟ್ರಿಕ್ ಎಸ್‌ಯುವಿಯ ಡೆಲಿವರಿ ಆರಂಭವಾಗಲಿದೆ. ಈಗಾಗಲೇ ಈ ಎಸ್‌ಯುವಿ ದೇಶಾದ್ಯಂತ ಇರುವ ಶೋರೂಮ್‌ಗಳಿಗೆ ರವಾನೆಯಾಗುತ್ತಿದೆ.

Image source: Carwale

ಟಾಟಾ ಪಂಚ್ ಇವಿ : ರೇಂಜ್

ಇನ್ನು ಹೊಸ ಪಂಚ್ ಇವಿಯ ರೇಂಜ್ ಬಗ್ಗೆ ನೋಡುವುದಾದರೆ, ಸ್ಟ್ಯಾಂಡರ್ಡ್‌ ಪಂಚ್ ಇವಿ, 25 kWh ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಇದು 315 ಕಿಲೋಮೀಟರ್‌ನಷ್ಟು ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಇನ್ನೊಂದು 35 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಪಂಚ್ ಇವಿ ಲಾಂಗ್ ರೇಂಜ್ ರೂಪಾಂತರವು 421 ಕಿಲೋ ಮೀಟರ್‌ನಷ್ಟು ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಪಂಚ್ ಇವಿ ಟಾಟಾ ಮೋಟಾರ್ಸ್‌ನ ನಾಲ್ಕನೇ ಎಲೆಕ್ಟ್ರಿಕ್ ವಾಹನವಾಗಿದೆ.

ಟಾಟಾ ಪಂಚ್ ಇವಿ : ಕಾರ್ಯಕ್ಷಮತೆ

advertisement

ಇನ್ನು ಪಂಚ್ ಇವಿಯ ಕಾರ್ಯಕ್ಷಮತೆಯ ಬಗ್ಗೆ ನೋಡುವುದಾದರೆ, ಮಧ್ಯಮ ಶ್ರೇಣಿಯ ಆವೃತ್ತಿಯು 80 ಬಿಎಚ್‌ಪಿ ಶಕ್ತಿ ಹಾಗೂ 114 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದ್ದರೆ, ಲಾಂಗ್ ರೇಂಜ್ ಆವೃತ್ತಿಯು 120 ಬಿಎಚ್‌ಪಿ ಶಕ್ತಿ ಹಾಗೂ 190 ಎನ್‌ಎಂ ಟಾರ್ಕ್‌ನ ಉತ್ಪಾದಿಸುತ್ತದೆ. ಪಂಚ್ ಇವಿಯನ್ನು 7.2 kW ಫಾಸ್ಟ್ ಹೋಮ್ ಚಾರ್ಜರ್ ಸೇರಿದಂತೆ ಎರಡು ಚಾರ್ಜಿಂಗ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 50 kW DC ಫಾಸ್ಟ್ ಚಾರ್ಜರ್‌ಗಳನ್ನು ಬಳಸುವಾಗ ಪಂಚ್ ಇವಿ ಒಂದು ಗಂಟೆಯೊಳಗೆ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು ಎಂದು ಟಾಟಾ ಮೋಟಾರ್ಸ್‌ ಹೇಳಿದೆ.

Image Source: CarTrade

ಟಾಟಾ ಪಂಚ್ ಇವಿ : ವಿನ್ಯಾಸ

ಇನ್ನು ಪಂಚ್ ಇವಿ ವಿನ್ಯಾಸದ ಬಗ್ಗೆ ನೋಡುವುದಾದರೆ ಇದು ನವೀಕರಿಸಿದ ಮುಂಭಾಗದ ಫೇಶಿಯಾವನ್ನು ಹೊಂದಿದೆ. ಇದು ಪಂಚ್‌ ಇವಿಯ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ. ಇದಲ್ಲದೆ, ನೆಕ್ಸಾನ್ ಪ್ರೇರಿತ ಎಲ್‌ಇಡಿ ಲೈಟ್ ಬಾರ್ ಬಾನೆಟ್‌ನ ಉದ್ದಕ್ಕೂ ಸಾಗುತ್ತದೆ. ಪ್ರಮುಖ ವೈಶಿಷ್ಟ್ಯಗಳಲ್ಲಿ ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು ಹಾಗೂ ಸಿಲ್ವರ್ ಫಾಕ್ಸ್ ಸ್ಕಿಡ್ ಪ್ಲೇಟ್ ಸೇರಿವೆ. ಜೊತೆಗೆ ಪಂಚ್ ಇವಿ ಬ್ರಾಂಡ್‌ನ ಲೋಗೋ ಅಡಿಯಲ್ಲಿ ಮುಂಭಾಗದಲ್ಲಿ ಚಾರ್ಜರ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಚಾರ್ಜರ್ ಇರುವ ವಿನ್ಯಾಸದಲ್ಲಿ ಬರುವ ಟಾಟಾದ ಮೊದಲ ಎಲೆಕ್ಟ್ರಿಕ್ ಕಾರ್ ಇದಾಗಿದೆ. ಹಿಂಭಾಗದಲ್ಲಿ ಐಸಿಇ ಆವೃತ್ತಿಯಂತೆ ಕಾಣುವ ಟೈಲ್ ಲೈಟ್‌ಗಳನ್ನು, ವೈ ಆಕಾರದ ಬ್ರೇಕ್ ಲೈಟ್‌ಗಳನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಹೊಸ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್‌ಗಳನ್ನು ಹಾಗೂ ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಟಾಟಾ ಪಂಚ್ ಇವಿ : ಬುಕ್ಕಿಂಗ್ ಮತ್ತು ಪ್ರತಿಸ್ಪರ್ಧಿಗಳು

ಕಂಪನಿಯ Gen-2 EV ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ ಮೊದಲ ವಾಹನ ಇದಾಗಿದ್ದು, ಈ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಬುಕ್ಕಿಂಗ್‌ಗಳು ಈಗಾಗಲೇ ಆರಂಭಗೊಂಡಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಕಂಪನಿ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 21,000 ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಪಂಚ್ ಇವಿ ಎಸ್‌ಯುವಿ ಭಾರತದಲ್ಲಿ ಪ್ರಮುಖವಾಗಿ ಸಿಟ್ರೊಯೆನ್ eC3 (Citroen eC3) ಗೆ ನೇರ ಸ್ಪರ್ಧೆಯೊಡ್ಡಲಿದೆ. ಇದರೊಂದಿಗೆ ಎಂಜಿ ಕಾಮೆಟ್ (MG Comet EV) ಇವಿಗೂ ಇದು ಪೈಪೋಟಿ ನೀಡಲಿದೆ.

ಹೊಸ ಟಾಟಾ ಪಂಚ್ EV ಯ ವೇರಿಯಂಟ್-ವಾರು ಎಕ್ಸ್ ಶೋ ರೂಂ ಬೆಲೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

Tata Punch EV Smart – ರೂ. 10.99 ಲಕ್ಷ
Tata Punch EV Smart + – ರೂ. 11.49 ಲಕ್ಷ
Tata Punch EV Adventure  – ರೂ. 11.99 ಲಕ್ಷ
Tata Punch EV Adventure LR – ರೂ. 12.99 ಲಕ್ಷ
Tata Punch EV Empowered – ರೂ. 12.79 ಲಕ್ಷ
Tata Punch EV Empowered LR – ರೂ. 13.99 ಲಕ್ಷ
Tata Punch EV Empowered+ – ರೂ. 13.29 ಲಕ್ಷ
Tata Punch EV Empowered+ LR – ರೂ. 14.49 ಲಕ್ಷ

advertisement

Leave A Reply

Your email address will not be published.