Karnataka Times
Trending Stories, Viral News, Gossips & Everything in Kannada

3 New Govt Schemes: ಮಹಿಳೆಯರಿಗೆ ರಾಜ್ಯ ಸರಕಾರದಿಂದ ಮತ್ತೊಂದು ಗುಡ್ ನ್ಯೂಸ್, ಹೊಸ 3 ಯೋಜನೆಗಳ ಜಾರಿ

advertisement

ಹಿಂದೆಲ್ಲ ಮಹಿಳೆಯರನ್ನು ಸಮಾಜ ನೋಡುತ್ತಿದ್ದ ರೀತಿಯೇ ಬೇರೆ, ಆದರೆ ಇಂದು ಹಾಗಲ್ಲ, ಮಹಿಳೆ ಎಲ್ಲ ವಿಚಾರದಲ್ಲೂ ಶ್ರೇಷ್ಠಳು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಹಿಂದಿನ‌ ಕಾಲದಲ್ಲಿ ಮನೆಯ ಜವಾಬ್ದಾರಿ ಯನ್ನು ಪುರುಷರು ನೋಡುತ್ತಿದ್ದರು, ಮಹಿಳೆ ಅಡುಗೆ ಕೆಲಸಕಷ್ಟೆ ಸೀಮಿತಳು ಎಂಬುಂದಿತ್ತು. ಆದ್ರೆ ಈಗ ಮನೆಯ ಜವಾಬ್ದಾರಿ ಜೊತೆಗೆ ಮನೆಯ ‌ಎಲ್ಲಾ ಕೆಲಸವನ್ನು‌ ನಿಭಾಯಿಸಿಕೊಂಡು ಹೋಗುವಂತಹ ಜವಾಬ್ದಾರಿ ಹೆಣ್ಣಿಗೆ ಇದೆ. ಹಾಗಾಗಿ ಪುರುಷರಷ್ಟೆ ಹೆಣ್ಣು ಮಕ್ಕಳು ಕೂಡ ಸರಿಸಮಾನಳು.‌ಇಂದು ರಾಜ್ಯ ಮತ್ತು ಕೇಂದ್ರ ಸರಕಾರ ಕೂಡ ಮಹಿಳೆಯರ ‌ಪ್ರಗತಿಗಾಗಿ ಬೆಂಬಲ ನೀಡುತ್ತಿದ್ದು ಪ್ರೋತ್ಸಾಹ ನೀಡುತ್ತಿದೆ.

ಮಹಿಳಾ ಸಬಲೀಕರಣಕ್ಕಾಗಿ ಗ್ಯಾರಂಟಿ ಯೋಜನೆ:

ಈಗಾಗಲೇ ರಾಜ್ಯ ಸರಕಾರವು ಮಹಿಳಾ ಅಭಿವೃದ್ಧಿ ಗಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಮತ್ತು ಶಕ್ತಿ ಯೋಜನೆ (Shakti Yojana) ಯನ್ನು ಜಾರಿಗೆ ತಂದಿದೆ‌. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಎರಡು ಸಾವಿರ ಹಣವನ್ನು ಕೂಡ ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಆದೇ ರೀತಿ ಬಸ್ ನಲ್ಲೂ ಉಚಿತ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದು ಇದೀಗ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತಷ್ಟು ರಾಜ್ಯ ಸರಕಾರದಿಂದ ಬಂಪರ್ ಯೋಜನೆಯನ್ನು ಘೋಷಣೆ ಮಾಡಿದೆ.

advertisement

ಯಾವೆಲ್ಲ ಸೌಲಭ್ಯ ಸಿಗಲಿದೆ?

 

Image Source: Oneindia Kannada

 

  • ಇದೀಗ ರಾಜ್ಯ ಸರಕಾರವು ಮಹಿಳೆಯರು ಸ್ವಂತವಾದ ಉದ್ಯೋಗ ಆರಂಭ ಮಾಡಲು, ಉದ್ಯಮದತ್ತ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲು ಹೊಸ ಹೊಸ ಯೋಜನೆಯನ್ನು ರೂಪಿಸಿದೆ. ಬಡ ವರ್ಗದ ಮಹಿಳೆಯರು ಸ್ವಂತ ಉದ್ಯಮವನ್ನು ಆರಂಭ ಮಾಡಲು ರಾಜ್ಯ ಸರ್ಕಾರವು ಬಡ್ಡಿ ಇಲ್ಲದೆ ಸಾಲ ಸೌಲಭ್ಯ ವನ್ನು ನೀಡಲು ಮುಂದಾಗಿದೆ. ಇದರಿಂದ ಮಹಿಳೆಯರು ಶೂನ್ಯ ಬಡ್ಡಿಯ ಮೂಲಕ ಸಾಲ ಪಡೆದು ಸ್ವಂತ ಉದ್ಯಮ ಆರಂಭ ಮಾಡಬಹುದಾಗಿದೆ.
  • ಅದೇ ರೀತಿ ರಾಜ್ಯ ಸರಕಾರವು ಅಂಗನವಾಡಿ ಸಿಬ್ಬಂದಿ ಗಳಿಗೆ ನೇರವಾಗುವಂತೆ ಮತ್ತು ಮಕ್ಕಳನ್ನು ಅಲ್ಲಿಗೆ ಬರಮಾಡಿಕೊಳ್ಳುವಂತೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದೆ. ಅಲ್ಲಿನ ಸಿಬಂದಿ ಗಳಿಗೆ ಕೆಲಸದ ಒತ್ತಡ ಕಡಿಮೆಮಾಡಲು ಸ್ಮಾರ್ಟ್ ಪೋನ್ ಗಳನ್ನು ಕೂಡ ನೀಡುತ್ತಿದೆ. ಇದರಿಂದ ಮಕ್ಕಳ ಡೇಟಾವನ್ನು ಸುಲಭವಾಗಿ ಸೇವ್ ಮಾಡಿ ಇಡಲು ಮತ್ತು ಸರಿಯಾದ ಸಮಯಕ್ಕೆ ಗ್ರಾಮೀಣ ಭಾಗದಲ್ಲಿ ವಾಸಿಸುವ ಬಡ ಗರ್ಭಿಣಿ ಮಹಿಳೆಯರಿಗೆ ಸೌಲಭ್ಯ ದೊರಕಿಸಿಕೊಡಲು ಅನುಕೂಲವಾಗಲಿದೆ‌.
  • ಅದೇ ರೀತಿ ದೇವದಾಸಿಯರ ಅಭಿವೃದ್ಧಿ ಗಾಗಿ ರಾಜ್ಯ ಸರ್ಕಾರವು ತಿಂಗಳಿಗೆ ರೂ 1500 ರೂಪಾಯಿ ಮಾಸಾಶನವನ್ನು ನೀಡುತ್ತಿದ್ದು, 2000 ಮೊತ್ತಕ್ಕೆ ಹೆಚ್ಚಿಸಲು ಸರಕಾರ ತಿರ್ಮಾನ ಮಾಡಿದೆ.

advertisement

Leave A Reply

Your email address will not be published.