Karnataka Times
Trending Stories, Viral News, Gossips & Everything in Kannada

Bajaj Pulsar 150: ಡೀಲರ್ಸ್ ಗಳಿಗೆ ತಲುಪಿದ ಹೊಸ ಹೊಸ ಬಜಾಜ್ ಪಲ್ಸರ್ 150 ! ಬೆಲೆ ಎಷ್ಟು ಗೊತ್ತಾ?

advertisement

2024 Bajaj Pulsar 150 Reaches Dealerships: ಈ ವರ್ಷದಂದು ಹೊಸ ನವೀಕರಿಸಿದ ಬಜಾಜ್ ಪಲ್ಸರ್ 150(updated Pulsar 150) ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗುತ್ತಿದ್ದು, ಟಿವಿಎಸ್ ಅಪಾಚಿ 160 2V, ಯಮಹ FZ ಮತ್ತು ಹೋಂಡಾ ಯೂನಿಕಾರ್ನ್(Honda unicorn) ನಂತಹ ಬೈಕುಗಳೊಂದಿಗೆ ನೇರವಾಗಿ ಸ್ಪರ್ಧಿಸುತ್ತಿದೆ. ಬಜಾಜ್ ಪಲ್ಸರ್ ಭಾರತದ ಅತ್ಯಂತ ಜನಪ್ರಿಯ ಮೋಟರ್ ಸೈಕಲ್ ಬ್ರಾಂಡ್ ನಲ್ಲಿ ಒಂದಾಗಿದ್ದು ಇದರ ಅದ್ಭುತ ವಿನ್ಯಾಸ ಹಾಗೂ ಮೈಲೇಜ್ ಸಾಮರ್ಥ್ಯ ಬೈಕ್ ಸವಾರರ ಹೃದಯವನ್ನು ಗೆದ್ದಿದೆ.

ಬಜಾಜ್ ಕಂಪನಿ(Bajaj company)ಯು ಹೊಸ ನವೀಕರಿಸಿದ ಬಜಾಜ್ ಪಲ್ಸರ್ 150ಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಯಾವೆಲ್ಲ ನೂತನ ವೈಶಿಷ್ಟ್ಯತೆಗಳನ್ನು ಅಳವಡಿಕೆ ಮಾಡಿದ್ದಾರೆ? ಇದರ ಬೆಲೆ ಎಷ್ಟು? ಹಳೆಯ ಬಜಾಜ್ 150ಗೂ ಇದಕ್ಕು ವ್ಯತ್ಯಾಸಗಳೇನು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಅತ್ಯಾಕರ್ಷಕ ವಿನ್ಯಾಸದೊಂದಿಗೆ ಬಜಾಜ್ ಪಲ್ಸರ್ 150 ನವೀಕರಣ

ಬಜಾಜ್ ಕಂಪನಿಯು ಪಲ್ಸರ್ 150ಯನ್ನು ಹೊಸ ನವೀಕರಣದೊಂದಿಗೆ ಮತ್ತೆ ಬಿಡುಗಡೆ ಮಾಡಿದೆ, ಆದರೆ ಬಜಾಜ್ ಪಲ್ಸರ್ನ ಆಂತರಿಕ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ. ಬದಲಿಗೆ ಗಾಡಿಯ ಮೇಲೆ ಸ್ಟಿಕರ್ಗಳ(stickers) ಅಳವಡಿಕೆ ಜೋರಿದೆ ಹಾಗೂ ಕೆಲ ಡಿಜಿಟಲ್ ಉಪಕರಣಗಳನ್ನು ಹಾಕಲಾಗಿದೆ. ಆಟೋಟೆಕ್ ಇನ್ಫೋ ಬಿಡುಗಡೆ ಮಾಡಿರುವಂತಹ ವಿಡಿಯೋದಲ್ಲಿ ತಿಳಿಸಿರುವಂತೆ ಬಜಾಜ್ ಕಂಪನಿಯು ಕಿರಿಯ(ಗ್ರಾಹಕರ) ಆಕರ್ಷಿಸುವ ಸಲುವಾಗಿ ಬೈಕಿನ ಮೇಲೆ ಹೊಚ್ಚ ಹೊಸ ಗ್ರಾಫಿಕ್ಸ್ ಗಳನ್ನು ಅಳವಡಿಕೆ ಮಾಡಿದೆ ಜೊತೆಗೆ ಮಸ್ಕುಲಾರ್ ಶೌಂಡ್(muscular shroud) ಹಾಗೂ ಅಂಡರ್ ಬೆಲ್ಲಿ ಕೌಲ್ (underbelly cowl) ನಂತಹ ಹೊಸ ವಿನ್ಯಾಸದ ಗುಣಲಕ್ಷಣಗಳನ್ನು ಅಳವಡಿಸಿದ್ದಾರೆ.

2024 Bajaj Pulsar 150 Reaches Dealerships Ahead of Official Launch, What's New?
Image Credit: Bikewale

ಹಳೆಯ ಬಜಾಜ್ 150ಗೂ ಇದಕ್ಕೂ ವ್ಯತ್ಯಾಸಗಳೇನು

advertisement

ಬಜಾಜ್ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಡಿಜಿಟಲ್ ಉಪಕರಣಗಳನ್ನು ಅಳವಡಿಸಿ ಅತ್ಯಾಕರ್ಷಕ ನವೀಕರಣವನ್ನು ಮಾಡಿದ್ದಾರೆ. ಬಹು ದೊಡ್ಡ LCD ಕ್ಲಸ್ಟರ್ ಹಾಗೂ ಅನಲಾಗ್ / ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಬದಲಿಸಿದ್ದಾರೆ. ಜೊತೆಗೆ ನವೀಕರಿಸಿದ ಪಲ್ಸರ್ 150ನಲ್ಲಿ ಗೇರ್ ಸ್ಥಾನ ಸೂಚಕವೂ ಡಿಜಿಟಲ್ ಆಗಿದೆ. ಕ್ಲಸ್ಟರ್ ಬ್ಲೂಟೂತ್ ಸಂಪರ್ಕವನ್ನು ಉಪಯೋಗಿಸಿಕೊಂಡು ಅವರನ್ನು ತಮ ಸ್ಮಾರ್ಟ್ ಫೋನ್ಗೆ ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳಬಹುದು.

ಈ ಹಿಂದೆ ಪಲ್ಸರ್ 150 ಅಲ್ಲಿ ಕಾಣದಂತಹ ಡುಯಲ್ ಚಾನೆಲ್ ABS ಅನ್ನು ಅಳವಡಿಸಿದ್ದಾರೆ. ಹಾಗೂ USB ಚಾರ್ಜರ್ ಪಿನ್, 90/90-17 ಮುಂದಿನ ಹಾಗೂ 120/80-17 ಹಿಂದಿನ ಟೈಯರ್, ಕ್ಲಿಪ್ ಆನ್ ಹ್ಯಾಂಡಲ್ ಬಾರ್(clip on handlebar), ಸ್ಪ್ಲಿಟ್ ಸೀಟ್ ಹಾಗೂ ಡುಯಲ್ ಡಿಸ್ಕ್ ಬ್ರೇಕ್(dual disc brake) ಹೀಗೆ ಮುಂತಾದ ಹೊಸ ಆವಿಷ್ಕಾರಗಳನ್ನು ಪಲ್ಸರ್ 150ಯಲ್ಲಿ ಅಳವಡಿಸಿದ್ದಾರೆ. ಹ್ಯಾಲೊಜನ್ ತಿರುವಿನ ಇಂಡಿಕೇಟರ್ ಹಳೆಯ ಪಲ್ಸರ್ 150ನಲ್ಲಿ ಇದ್ದಂತೆ ಇದೆ.

ಬದಲಾಗದ ಇಂಜನ್ ಘಟಕ

ನವೀಕರಿಸಲಾಗಿರುವ ಪಲ್ಸರ್ 150ಯ ಶಕ್ತಿ ಉತ್ಪಾದನ ಘಟಕದಲ್ಲಿ ಯಾವುದೇ ರೀತಿಯ ಹೆಚ್ಚಿನ ಬದಲಾವಣೆಗಳನ್ನು ಮಾಡಿಲ್ಲ, 149.5cc ಸಿಂಗಲ್ ಸಿಲಿಂಡರ್- ಏರ್ ಕೂಲ್ಡ್ 2V SOHC ಇಂಜಿನ್ ಇದ್ದು, ಇವು 13.8bhp ಶಕ್ತಿ ಮತ್ತು 13.2Nm ಟಾರ್ಕ್ಅನ್ನು ಉತ್ಪಾದಿಸುವ ಸಾಮರ್ಥ್ಯದ ‌ಜೊತೆಗೆ ಐದು ಸ್ಪೀಡ್ ಗೇರ್ ಬಾಕ್ಸ್(5-speed gearbox) ಯಥಾ ಪ್ರಕಾರ ಹಾಗೆಯೇ ಇದೆ.

2024 Bajaj Pulsar 150 Reaches Dealerships Ahead of Official Launch, What's New?
Image Credit: Bikewale

ಹೊಸ ನವೀಕರಿಸಿದ ಬಜಾಜ್ ಪಲ್ಸರ್ 150ಯ ಬೆಲೆ

ಸಾಕಷ್ಟು ಹೊಸ ವಿನ್ಯಾಸದೊಂದಿಗೆ ನವೀಕರಿಸಲಾಗಿರುವ 2024 ಬಜಾಜ್ ಪಲ್ಸರ್ 150ಯನ್ನು ಉತ್ತರ ಪ್ರದೇಶದಲ್ಲಿ ₹1,38,928ದ ಆನ್ ರೋಡ್ ಬೆಲೆಯಲ್ಲಿ ಲಭ್ಯವಿದೆ. ಆದರೆ ಕಂಪನಿ ಇಂದಿಗೂ ಕೂಡ ತನ್ನ ಎಕ್ಸ್ ಶೋರೂಮ್ ಬೆಲೆಯನ್ನು ಎಲ್ಲಿಯೂ ರಿವೀಲ್ ಮಾಡಿಲ್ಲ.

advertisement

Leave A Reply

Your email address will not be published.