Karnataka Times
Trending Stories, Viral News, Gossips & Everything in Kannada

Boat: ಇದ್ದಕ್ಕಿದ್ದಂತೆ ಸಮುದ್ರದ ಮಧ್ಯದಲ್ಲಿ 100 ಜನರಿದ್ದ ದೋಣಿ ಮುಳುಗಡೆ! ವೈರಲ್ ಆಯ್ತು ಭಯಾನಕ ದೃಶ್ಯ!

advertisement

ಸಮುದ್ರದಲ್ಲಿ ಹಾಯಾಗಿ ಸಮಯ ಕಳೆಯಲು ಬೋಟ್ (Boat) ಒಂದರಲ್ಲಿ ನೂರಾರು ಜನ ಪ್ರಯಾಣ ಮಾಡುತ್ತಿದ್ದು ಪ್ರಯಾಣದ ನಡುವೆ ಹೃದಯವಿದ್ರಾವಕ ಘಟನೆ ನಡೆದುಹೋಗಿತ್ತು. ಕೇವಲ ಒಂದು ಕ್ಷಣದಲ್ಲಿ ಯಾರು ಜೀವ ಕಳೆದುಕೊಳ್ಳುತ್ತಾರೋ ಎನ್ನುವ ಆತಂಕ ಆರಂಭವಾಗಿತ್ತು. ಸುಮಾರು 100 ಜನರು ಪ್ರಯಾಣ ಬೆಳೆಸುತ್ತಿರುವ ಬೋಟ್ ಮುಳುಗಡೆಯಾಗುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

FOX Weather ಎನ್ನುವ ಟ್ವಿಟ್ಟರ್ ಖಾತೆ (Twitter Account) ಯಲ್ಲಿ ಈ ಭಯಾನಕ ದೃಶ್ಯ ಸರಿಯಾಗಿದೆ. ಬಹಮ್ಮಸ್ ನ ಉತ್ತರದಲ್ಲಿ ಬ್ಲೂ ಲಘುನ್ ದ್ವಿಪ (Blue Lagoon Dwipa) ಇದೆ. ಇದು ಬಹಳ ಜನಪ್ರಿಯ ಪ್ರವಾಸಿ ತಾಣವಾಗಿದೆ ಇಲ್ಲಿ ಸಾವಿರಾರು ಬೋಟ್ ಗಳು ಕೂಡ ಇದ್ದು ಪ್ರತಿದಿನ ಲಕ್ಷಾಂತರ ಪ್ರವಾಸಿಗಳು ಆಗಮಿಸುತ್ತಾರೆ. ಹೀಗೆ ಬೋಟ್ ಒಂದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನ ಇದುವೇ ಸ್ವರ್ಗ ಅಂತ ಬೀಗುತ್ತಾ ಫೋಟೋ ವಿಡಿಯೋ ತೆಗೆದುಕೊಂಡು ಆ ಸಂದರ್ಭ ಎಂಜಾಯ್ ಮಾಡುತ್ತಿರುವವಾಗಲೇ ದೋಣಿ  ಒಂದು ಕಡೆಯಿಂದ ಮುಳುಗಡೆ ಆಗುತ್ತಿರುವ ದೃಶ್ಯ ಕಂಡು ಬಂದಿದೆ ತಕ್ಷಣಕ್ಕೆ ಬೋಟ್ ನಲ್ಲಿ ಇದ್ದ ಪ್ರಯಾಣಿಕರು ಲೈಫ್ ಜಾಕೆಟ್ (Life Jacket) ತೊಟ್ಟು ನೀರಿಗೆ ಧುಮುಕಿದ್ದಾರೆ.

advertisement

ಕೊಲಾರೋಡೋ ದ 75 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಡಬಲ್ ಡೆಕ್ಕರ್ ಬೋಟ್ ಅದಾಗಿದ್ದು ಅರ್ಧ ಗಂಟೆಯ ನಂತರ ಸಂಪೂರ್ಣವಾಗಿ ಮಗುಚಿದೆ ಈ ಭಯಾನಕ ದೃಶ್ಯವನ್ನು ಕ್ಯಾಮೆರಾ ಒಂದರಲ್ಲಿ ಸೆರೆ ಹಿಡಿಯಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಸಿಬ್ಬಂದಿಗಳು ನೀರಿಗೆ ಹಾರಿ ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ. ದುರಾದೃಷ್ಟವಶಾತ್ ಒಬ್ಬ ವೃದ್ಧೆ ಸಾವನಪ್ಪಿದ್ದಾರೆ ಹಾಗೂ ಉಳಿದವರು ಸೇಫ್ ಆಗಿ ದಡ ಸೇರಿದ್ದಾರೆ.

ಪ್ರಯಾಣಿಕರು ಹಾಗೂ ಇವರು ಸಿಬ್ಬಂದಿಗಳನ್ನು ಪತ್ತೆ ಮಾಡಿ ದ್ವೀಪಕ್ಕೆ ಹಿಂತಿರುಗಿಸಲಾಗಿದೆ ಎಂದು ಹೇಳಿಕೆ ನೀಡಿದೆ. ಇಬ್ಬರು ಪ್ರಯಾಣಿಕರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಉಳಿದಂತೆ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ ಸದ್ಯ ಈ ವಿಡಿಯೋ ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೂರಾರು ಕಮೆಂಟ್ಗಳು ಕೂಡ ಬಂದಿದೆ. ಸದ್ಯ ಜೀವ ಉಳಿತಲ್ಲ ಅಂತ ಟ್ವಿಟರ್ ಯೂಸರ್ ಗಳು ದೇವರಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಉಸಿರುಗಟ್ಟಿಸುವ ಈ ವಿಡಿಯೋವನ್ನು ನೀವು ಇಲ್ಲಿ ನೋಡಬಹುದು.

 

advertisement

Leave A Reply

Your email address will not be published.