Karnataka Times
Trending Stories, Viral News, Gossips & Everything in Kannada

Excercise: ಈ ಎರಡು ಹವ್ಯಾಸದಿಂದ ನಿಮಗೆ ದೀರ್ಘ ಕಾಲದ ಆರೋಗ್ಯ ಪ್ರಯೋಜನ ಸಿಗಲಿದೆ

advertisement

ದೇಹಕ್ಕೆ ಪ್ರತೀ ನಿತ್ಯ ವ್ಯಾಯಾಮ ಇತ್ತೀಚಿನ ಜನಾಂಗಕ್ಕೆ ತುಂಬಾ ಅಗತ್ಯವಾಗಿದೆ‌. ದೈನಿಕ ವ್ಯಾಯಾಮ ಮಾಡುವವರು ಹಬ್ಬ , ಮನೆಯ ಮದುವೆ, ಇನ್ನಿತರ ಕಾರ್ಯಕ್ರಮ ಕಾರಣಕ್ಕೆ ಮಧ್ಯೆದಲ್ಲಿ ಈ ಹವ್ಯಾಸ ನಿಲ್ಲಿಸುವ ಮತ್ತೆ ಅನೇಕ ದಿನದ ಬಳಿಕ ಮುಂದುವರಿಸುವುದು ಸಹ ಇದೆ. ಆದರೆ ಈ ರೀತಿ ಮಾಡುವುದರಿಂದ ದೇಹದ ಆರೋಗ್ಯಕ್ಕಾಗಿ ಮಾಡುವ ವ್ಯಾಯಮ ಪ್ರಯೋಜನ ಸಿಗದಿರುವ ಸಾಧ್ಯತೆ ಕೂಡ ಇದೆ‌.

ವೈರಲ್ ಆಯ್ತು ಈ ಪೋಸ್ಟ್

ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೇಮಸ್ ಸ್ಟಾರ್ಸ್ ವ್ಯಾಯಾಮದ ಬಗ್ಗೆ ಆಗಾಗ ಯೋಗ, ಝಂಬಾ ಎಲ್ಲ ಮಾಡಿ ಹಾಕುತ್ತಿರುತ್ತಾರೆ. ಅದೇ ರೀತಿ ಫಿಟ್ನೇಸ್ ಕೋಚ್ ಆಗಿರುವ ಲುಕೆ ಕೌಟಿನ್ಹೊ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದು ಸದ್ಯ ಆ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅದರಲ್ಲಿ ಅವರು ವ್ಯಾಯಾಮ ನಾವು ದಿನನಿತ್ಯ ಹಲ್ಲು ಹೇಗೆ ಉಜ್ಜುತ್ತೇವೆಯೋ ಅದೇ ರೀತಿ ಒಂದು ಹವ್ಯಾಸವಾಗಿ ಮುಂದುವರಿಸಬೇಕು. ಇದು ಆರಂಭದಲ್ಲಿ ಕಷ್ಟ ವಾದರೂ ಒಮ್ಮೆ ಅಭ್ಯಾಸ ಆದರೆ ಅದೊಂದು ನಿರಂತರ ಚಲನೆ ಆಗಲಿದೆ ಎಂದಿದ್ದಾರೆ.

 

advertisement

ಎರಡು ಹವ್ಯಾಸದಿಂದ ಈ ಪ್ರಯೋಜನ ನಿಮಗೆ ಸಿಗಲಿದೆ

  • ಒಂದು ಬಾರಿ ನಿಮಗೆ ಇದೊಂದು ದೈನಿಕ ಹವ್ಯಸವಾಗಿ ಬಿಟ್ಟರೆ ಉತ್ತಮ ಆರೋಗ್ಯದ ಜೊತೆ ನಿಮ್ಮ ದೇಹ ಕೂಡ ಸದೃಢವಾಗಿ ಇರಲಿದೆ.
  • ಹಲ್ಲು ಉಜ್ಜುವುದು ಮತ್ತು ವ್ಯಾಯಮಕ್ಕೆ ಕೆಲ ಸ್ವಾಮಿಪ್ಯ ಹೋಲಿಕೆ ಇದೆ. ಈ ಎರಡು ಪ್ರಕ್ರಿಯೆಯೂ ನಿಮ್ಮ ಆರೋಗ್ಯ ವೃದ್ಧಿಸಲಿದೆ.
  • ಧೀರ್ಘಾವಧಿ ಆರೋಗ್ಯ ಪ್ರಯೋಜನ ಪಡೆಯಲು ಸಹಕಾರಿ. ಅಂದರೆ ಹಲ್ಲು ಸ್ವಚ್ಛವಾಗಿ ಉಜ್ಜುವುದು ಮತ್ತು ವ್ಯಾಯಾಮ ಮಾಡುವುದು ಎರಡು ಕೂಡ ಧೀರ್ಘಾವಧಿ ವರೆಗೆ ನಿಮಗೆ ಆರೋಗ್ಯ ಪ್ರಯೋಜನ ದೊರಕಿಸಲಿದೆ.
  • ಆರೋಗ್ಯ ಪೂರ್ಣ ಜೀವನ ಶೈಲಿಗೆ ಈ ಎರಡು ಅಂಶಗಳು ಬೆಂಬಲಿತವಾಗಿದೆ.
  • ನಿಮಗೆ ಬರಬಹುದಾದ ಸೋಂಕು, ಖಾಯಿಲೆ, ಧೀರ್ಘಾವಧಿ ಆರೋಗ್ಯ ಸಮಸ್ಯೆ ಮೊದಲೇ ತಡೆಹಿಡಿಯಲಿದೆ. ಇನ್ನು ದಿನನಿತ್ಯ ಹಲ್ಲು ಉಜ್ಜುವುದರಿಂದ ಅನೇಕ ಕ್ಯಾವಿಟಿ ಸಮಸ್ಯೆ ಬರಲಾರದು. ಹಾಗಾಗಿ ಪೂರ್ವ ನಿರ್ಧರಿತವಾಗಿ ಸಮಸ್ಯೆ ಪರಿಹಾರ ಆಗುವ ಕಾರಣ ಈ ಎರಡು ಹವ್ಯಾಸ ಬಹಳ ಮುಖ್ಯವಾಗಿದೆ‌.

ಒಟ್ಟಾರೆಯಾಗಿ ಹಲ್ಲು ಉಜ್ಜುವುದು ಬಾಯಿಗೆ ಆರೋಗ್ಯ ನೀಡುವುದು, ದೈನಿಕ ವ್ಯಾಯಾಮ ಇಡೀ ದೇಹಕ್ಕೆ ಆರೋಗ್ಯ ನೀಡಲಿದೆ ಆ ಕಾರಣಕ್ಕೆ ಈ ಎರಡು ಪ್ರಕ್ರಿಯೆಗಳು ಬಹಳ ಮಹತ್ವಪೂರ್ಣ ಸ್ಥಾನ ಹೊಂದಿದೆ ಎಂದು ಹೇಳಬಹುದು. ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರುವ ಕಾರಣ ಈ ಬಗ್ಗೆ ನಿರ್ಲಕ್ಷ ವಹಿಸದೇ ಆರೋಗ್ಯ ಪ್ರಯೋಜನ ಪಡೆಯಲು ಈ ಹವ್ಯಾಸ ನೀವು ನಿತ್ಯ ಅನುಸರಿಸಿದರೆ ದೀರ್ಘ ಕಾಲಕ್ಕೆ ಬರಬಹುದಾದ ಸಮಸ್ಯೆಗೆ ಪರಿಹಾರ ಸಿಗಲಿದೆ.ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.

advertisement

Leave A Reply

Your email address will not be published.