Karnataka Times
Trending Stories, Viral News, Gossips & Everything in Kannada

Ceiling Fan: ಸೀಲಿಂಗ್ ಫ್ಯಾನ್ ಖರೀದಿಸುವ ಮುನ್ನ ಇದನ್ನು ಗಮನಿಸಿ! ಕೇಂದ್ರ ಸರ್ಕಾರದಿಂದಲೇ ಸೂಚನೆ!

advertisement

ಇತ್ತೀಚಿನ ದಿನಗಳಲ್ಲಿ ಹವಮಾನ ಇವತ್ತು ಹೇಗಿರುತ್ತೆ, ನಾಳೆ ಇನ್ಹೇಗೆ ಇರುತ್ತೆ ಎಂದು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಹಾಗಾಗಿ ಮಳೆಗಾಲದಲ್ಲಿ ಬಿಸಿಲು ಚಳಿಗಾಲದಲ್ಲಿ ಸೆಕೆ ಎಲ್ಲವೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇದೇ ಕಾರಣಕ್ಕೆ ಪ್ರತಿಯೊಬ್ಬರ ಮನೆಯಲ್ಲಿಯೂ ಫ್ಯಾನ್ ಅಥವಾ ಎಸಿ ಅಳವಡಿಸಿಕೊಳ್ಳುವುದು ಸಹಜ. ಸಾಕಷ್ಟು ಮನೆಗಳಲ್ಲಿ ಸೀಲಿಂಗ್ ಫ್ಯಾನ್ (Ceiling Fan) ಅಳವಡಿಸಿರುವುದನ್ನು ನೀವು ಕಾಣಬಹುದು ನಿಮ್ಮ ಮನೆಯಲ್ಲಿಯೂ ಸೀಲಿಂಗ್ ಫ್ಯಾನ್ ಇರಬಹುದು.

ವಿಶೇಷವಂದ್ರೆ ಸೀಲಿಂಗ್ ಫ್ಯಾನ್ ಇರುವವರ ಮನೆಗೆ ನೀವು ಭೇಟಿ ನೀಡಿದರೆ ಚಳಿಗಾಲವಿರಲಿ ಮಳೆಗಾಲವಿರಲಿ ಅಥವಾ ಬೇಸಿಗೆ ಇರಲಿ ದಿನದ 24 ಗಂಟೆಯೂ ಕೂಡ ಸೀಲಿಂಗ್ ಫ್ಯಾನ್ ಚಲಿಸುತ್ತದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೆಲೆಗೆ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವಂತಹ ಸೀಲಿಂಗ್ ಫ್ಯಾನ್ ಗಳು ಲಭ್ಯವಿದೆ ಈ ಹಿನ್ನೆಲೆಯಲ್ಲಿ ಹೆಚ್ಚು ತಂತ್ರಜ್ಞಾನಗಳನ್ನು ಒಳಗೊಂಡಿರುವ ಸೀಲಿಂಗ್ ಫ್ಯಾನ್ ಖರೀದಿ ಮಾಡುವವರ ಸಂಖ್ಯೆ ಕೂಡ ಜಾಸ್ತಿಯಾಗಿದೆ.

ಸೀಲಿಂಗ್ ಫ್ಯಾನ್ ಖರೀದಿಸುವ ಗ್ರಾಹಕರಿಗೆ ಎಚ್ಚರಿಕೆ ನೀಡಿದ ಕೇಂದ್ರ ಸಚಿವ:

ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡುವಾಗ ಸೀಲಿಂಗ್ ಫ್ಯಾನ್ (Ceiling Fan) ಖರೀದಿಸುವ ಗ್ರಾಹಕರಿಗೆ ಪ್ರಮುಖ ವಿಚಾರವನ್ನು ತಿಳಿಸಿದ್ದಾರೆ. ಫೆಬ್ರುವರಿ 2024ರಲ್ಲಿ ಹೊಸ ನಿಯಮ ಬರಲಿದ್ದು ಇನ್ನು ಮುಂದೆ ಫ್ಯಾನ್ ಖರೀದಿಸುವ ಮೊದಲು ಈ ನಿಯಮವನ್ನು ತಿಳಿದುಕೊಳ್ಳಬೇಕು.

advertisement

ಕೇಂದ್ರ ಸಚಿವ ಪಿಯೂಷ್ ಗೋಯಲ್ (Piyush Goyal) ಅವರು ಹೇಳಿರುವಂತೆ ಮುಂದಿನ ವರ್ಷದಿಂದ ಸೀಲಿಂಗ್ ಫ್ಯಾನ್ ಖರೀದಿಸುವ ಗ್ರಾಹಕರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಗ್ರಾಹಕ ಸಚಿವಾಲಯ ಸುರಕ್ಷಿತ ನಿಯಮಗಳನ್ನು ಬಲಪಡಿಸಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವರು ಹೇಳಿದ್ದೇನು?

ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫ್ಯಾನ್ ಖರೀದಿಯ ಬಗ್ಗೆ ನಿಯಮ ಬದಲಾವಣೆ ಆಗುವುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆ. 2024 ಫೆಬ್ರುವರಿಯಲ್ಲಿ ಬ್ಯೂರೋ ಆಫ್ ಇಂಡಿಯಾ ಸ್ಟ್ಯಾಂಡರ್ಡ್ (Bureau of Indian Standards) ಲಾಂಛನ ಅಥವಾ ಗುರುತು ಪ್ರತಿ ಸೀಲಿಂಗ್ ಫ್ಯಾನ್ ನಲ್ಲಿ ಇರುವುದು ಕಡ್ಡಾಯ. ಈ ಗುರುತು ಇಲ್ಲದೇ ಪ್ಯಾನ್ (Fan) ಮಾರಾಟ ಮಾಡುವಂತಿಲ್ಲ ಹಾಗೆಯೇ ನೀವು ಖರೀದಿ ಮಾಡುವ ಹಾಗಿಲ್ಲ. ಸರ್ಕಾರವು ಕೂಡ ಬಿಐಎಸ್(BIS) ಗುರುತು ಇಲ್ಲದೆ ಇರುವಂತಹ ಫ್ಯಾನ್ ಆಮದು ಮಾಡಿಕೊಳ್ಳಲು ಅನುಮತಿ ನೀಡುವುದಿಲ್ಲ.

ಒಂದು ವೇಳೆ ಫ್ಯಾನ್ ಮಾರಾಟ ಮಾಡುವವರು ಸರ್ಕಾರ ಹೊರಡಿಸಿರುವ ಈ ಅಧಿಸೂಚನೆಯನ್ನು ಪರಿಗಣಿಸಿ ಅದರಲ್ಲಿ ಇರುವ ಸೂಚನೆಗಳನ್ನು ಅನುಸರಿಸದೇ ಇದ್ದಲ್ಲಿ ಅಂತಹ ಮಾರಾಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ ಎರಡು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡ ವಿಧಿಸಬಹುದು. ಎರಡನೇ ಬಾರಿ ಮತ್ತೆ ನಿಯಮ ಉಲ್ಲಂಘನೆ ಆದರೆ 5 ಲಕ್ಷ ರೂಪಾಯಿ ದಂಡ ಅಥವಾ ಉತ್ಪನ್ನದ ಬೆಲೆಯ 10 ಪಟ್ಟು ಹೆಚ್ಚು ಹಣವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಬಹುದು.

ಬಿ ಐ ಎಸ್ ಗುರುತನ್ನು ಕಡ್ಡಾಯ ಮಾಡಿರುವುದರಿಂದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿಯಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇದರಿಂದ ಉತ್ಪಾದನೆ ಹೆಚ್ಚಾಗಲಿದೆ. ಹಾಗಾಗಿ ಇನ್ನು ಮುಂದೆ ಸೀಲಿಂಗ್ ಫ್ಯಾನ್ ಖರೀದಿ ಮಾಡುವವರು ಬಿ ಐ ಎಸ್ ಗುರುತನ್ನು ಪರಿಶೀಲಿಸಿ.

advertisement

Leave A Reply

Your email address will not be published.