Karnataka Times
Trending Stories, Viral News, Gossips & Everything in Kannada

Weight Loss: ಯೋಗ ಮಾಡುವುದರಿಂದ ದೇಹದ ತೂಕ ಇಳಿಕೆ ಆಗುತ್ತದೆಯೇ? ಇಲ್ಲಿದೆ ಉತ್ತರ.

advertisement

ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಯೋಗದ ಮಹತ್ವ ಅರಿವಿದೆ. ಯೋಗವು ನಿಮ್ಮ ದೇಹದ ಸಂಪೂರ್ಣ ಶುದ್ಧೀಕರಣವನ್ನು ಗುರಿಪಡಿಸುವ ಸಮಗ್ರ ಪ್ಯಾಕೇಜ್ ಆಗಿದೆ. ಮಾನಸಿಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ. ನಾವು ಯೋಗದೊಂದಿಗೆ ನಮ್ಮ ದಿನವನ್ನು ಪ್ರಾರಂಭಿಸಿದರೆ ನಾವು ಎಷ್ಟು ಸದೃಢ ದೇಹ ಹೊಂದಿದ್ದೇವೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡಿದ್ದೇವೆ ಅರಿವಾಗುತ್ತದೆ. ತೂಕ ನಷ್ಟಕ್ಕೆ (Weight Loss) ಕೆಲವು ಯೋಗ ಆಸನಗಳು ತುಂಬಾ ಪರಿಣಾಮಕಾರಿ ಎಂದರೆ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇನ್ನು ತಜ್ಞರ ಪ್ರಕಾರ ಕೆಲವು ಯೋಗ ಆಸನಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದು ಕೊಳ್ಳೋಣ.

ಯೋಗ ಕ್ಯಾಲೋರಿ ಬರ್ನ್ ಮಾಡುತ್ತದೆಯೇ ?

ಯೋಗದ ಭಂಗಿ ದೇಹ ಮತ್ತು ಮನಸ್ಸಿಗೆ ಬಹಳ ಉತ್ತಮವಾದ ಪ್ರಯೋಜನಗಳನ್ನು ನೀಡುತ್ತವೆ. ಪ್ರತಿನಿತ್ಯ ೩೦ ನಿಮಿಷಗಳ ಕಾಲ ಯೋಗ ಮಾಡುವುದರಿಂದ ಒತ್ತಡ, ಖಿನ್ನತೆಗೆ ಚಿಕಿತ್ಸೆ ದೊರೆಯುವುದಲ್ಲದೆ, ದೇಹದಲ್ಲಿರುವ ಅನಾವಶ್ಯಕ ಕೊಬ್ಬನ್ನು ಕೂಡ ಕಡಿಮೆ ಮಾಡುತ್ತದೆ.

ಕಠಿಣವಾದ ವ್ಯಾಯಾಮಗಳು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುವುದಕ್ಕೆ ಹೆಸರುವಾಸಿಯಾಗಿದೆ, ಯೋಗ ಸೇರಿದಂತೆ ಇತರ ವ್ಯಾಯಾಮಗಳು ಸೂಕ್ಷ್ಮವಾದ ಪಾತ್ರವನ್ನು ವಹಿಸುತ್ತವೆ. ಯೋಗವು ಹೆಚ್ಚಿನ ತೀವ್ರತೆಯ ತಾಲೀಮುಗಳಂತೆಯೇ ಅದೇ ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಬರ್ನ್ ಮಾಡದಿದ್ದರೂ, ತೂಕ ನಷ್ಟಕ್ಕೆ ಕೊಡುಗೆ ನೀಡುತ್ತದೆ. ಅನೇಕ ಯೋಗ ಶೈಲಿಗಳು ಡೈನಾಮಿಕ್ ಭಂಗಿಗಳನ್ನು ಒಳಗೊಂಡಿರುತ್ತವೆ, ಕ್ರಮೇಣ ಕ್ಯಾಲೋರಿ ಬರ್ನ್‌ಗೆ ಕಾರಣವಾಗುತ್ತದೆ.

ಯೋಗದಿಂದ ಮಾಂಸ ಖಂಡಗಳು ಗಟ್ಟಿ ಆಗುತ್ತದೆಯೇ?

ಯೋಗದ ಇನ್ನಿತರ ಉಪಯೋಗಗಳು ಎಂದರೆ, ಯೋಗ ಮಾಡುವುದರಿಂದ ದೇಹದಲ್ಲಿ ಮಾಂಸ ಖಂಡಗಳ ಸಾಂದ್ರತೆ ಹೆಚ್ಚುವುದರ ಜೊತೆಗೆ ದೇಹಕ್ಕೆ ಒಳ್ಳೆಯ ಆಕಾರ ದೊರಕುತ್ತದೆ, ಉಸಿರಾಟದ ಸಮಸ್ಯೆಗಳು ದೂರವಾಗಿ, ದೇಹಕ್ಕೆ ಶಕ್ತಿ ಮತ್ತು ಹೊಸ ರೀತಿಯ ಹುರುಪು ದೊರೆಯುತ್ತದೆ, ಅತಿಯಾದ ದೇಹದ ತೂಕ ಹತೋಟಿಗೆ ಬರುತ್ತದೆ, ಹೃದಯದ ಆರೋಗ್ಯ ಉತ್ತಮಗೊಂಡು ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ.

advertisement

ಯೋಗ ಮುಖ್ಯವಾಗಿ ನಮ್ಮ ಮನಸ್ಸಿನ ಧ್ಯಾನಕ್ಕೆ ಸಂಬಂಧಪಟ್ಟ ವಿಚಾರ ಆಗಿರುವುದರಿಂದ ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಿ ಯಾವುದೇ ಹೊರಗಿನ ಅಡೆತಡೆಗಳಿಲ್ಲದೆ ವಿವಿಧ ಯೋಗಾಸನ ಭಂಗಿಗಳನ್ನು ಮಾಡಲು ಮುಂದಾಗುವುದರಿಂದ ದೇಹದಲ್ಲಿ ನಕಾರಾತ್ಮಕತೆ ದೂರವಾಗಿ ಸಕಾರಾತ್ಮಕ ಶಕ್ತಿ ಹರಿಯಲು ಪ್ರಾರಂಭವಾಗುತ್ತದೆ. ಪ್ರತಿದಿನ ನಮ್ಮ ಜೀವನದ ಜಂಜಾಟದಲ್ಲಿ ಸಿಲುಕಿ ಒದ್ದಾಡಿ ನಮ್ಮ ಮಾನಸಿಕ ಸ್ಥಿಮಿತವನ್ನು ಅದಾಗಲೇ ಕಳೆದುಕೊಂಡಿರುತ್ತೇವೆ. ದೇಹಕ್ಕೆ ಗಾಯವಾದರೆ ಯಾವುದಾದರೂ ಔಷಧಿ ತೆಗೆದುಕೊಂಡು ವಾಸಿ ಮಾಡಿಕೊಳ್ಳಬಹುದು. ಅದರ ಬದಲು ಮನಸ್ಸಿಗೆ ಪ್ರತಿದಿನ ಆಗುವ ಇಂತಹ ಸಣ್ಣ ಸಣ್ಣ ಗಾಯಗಳು ಮಾನಸಿಕವಾಗಿ ನಮ್ಮನ್ನು ಕುಗ್ಗಿಸುವುದು ಮಾತ್ರವಲ್ಲದೆ ದೈಹಿಕವಾಗಿ ಸಹ ನಮ್ಮನ್ನು ಬೆಂಡಾಗುವಂತೆ ಮಾಡುತ್ತವೆ. ಅವಕ್ಕೆಲ್ಲ ಯೋಗವೇ ಮದ್ದು. ಮಾಂಸ ಖಂಡಗಳ ಬೆಳವಣಿಗೆ ಯಿಂದ ಮನಸಿನ ನೆಮ್ಮದಿಗಾಗಿ ಯೋಗ ಮಾಡುವುದು ಉತ್ತಮವಾಗಿದೆ.

ಯೋಗ ತುಂಬಾ ಪರಿಣಾಮಕಾರಿ

ಯೋಗಾಸನದಲ್ಲಿ ನಾವು ಯಾವುದೇ ಇತರ ಉಪಕರಣಗಳನ್ನು ಉಪಯೋಗಿಸುವುದಿಲ್ಲ. ಇಲ್ಲಿ ನಮ್ಮ ದೇಹದ ಅಂಗಾಂಗಗಳೇ ಒಂದೊಂದು ಉಪಕರಣಗಳು. ಅವುಗಳನ್ನು ಸರಿಯಾದ ರೀತಿಯಲ್ಲಿ ಯೋಗದ ಆಸನಕ್ಕೆ ಅನುಸಾರವಾಗಿ ಬಾಗಿಸಲು ಪ್ರಯತ್ನಪಡುತ್ತೇವೆ. ಹೀಗಾಗಿ ನಮ್ಮ ದೇಹದ ಯಾವ ಅಂಗ ಪ್ರಸ್ತುತ ಯಾವ ಸ್ಥಿತಿಯಲ್ಲಿದೆ ಎಂಬುದು ನಮಗೆ ಸುಲಭವಾಗಿ ತಿಳಿಯುತ್ತದೆ. ಇದರಿಂದ ಮಾನಸಿಕವಾಗಿ ಸಹ ನಾವು ಅಭಿವೃದ್ಧಿಯಾಗುತ್ತೇವೆ. ಆದರೆ ವ್ಯಾಯಾಮದಲ್ಲಿ ಹಾಗಲ್ಲ. ನಮ್ಮ ಗಮನ ಏನಿದ್ದರೂ ನಾವು ಬಳಸುವ ಉಪಕರಣಗಳ ಮೇಲೆಯೇ ಇರುತ್ತದೆ. ಇದರಿಂದ ಮಾನಸಿಕವಾಗಿ ನಮಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ವ್ಯಾಯಮ ಕೇವಲ ದೇಹಕ್ಕೆ ಸಂಬಂಧಪಟ್ಟ ವಿಚಾರ ಆಗಿರುತ್ತದೆ. ಆದರೆ ಯೋಗಾಭ್ಯಾಸ ನಮ್ಮ ದೇಹ ಮತ್ತು ನಮ್ಮ ಮನಸ್ಸು ಎರಡನ್ನೂ ಏಕಕಾಲದಲ್ಲಿ ಸಮತೋಲನಗೊಳಿಸುವ ತಂತ್ರ ಹೊಂದಿದೆ.

ಇದು ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಸಲುವಾಗಿಯೇ ಇರುತ್ತದೆ. ಆದರೆ ವ್ಯಾಯಾಮದಲ್ಲಿ ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವಂತಹ ಯಾವುದೇ ಭಂಗಿ ಇಲ್ಲ. ಇತ್ತೀಚಿನ ವ್ಯಾಯಮ ಶಾಲೆಯಲ್ಲಿ ನಾವು ಗಮನಿಸಿರುವ ಹಾಗೆ ಜೋರು ಸಂಗೀತ ಮತ್ತು ಗಾಢವಾದ ಬೆಳಕು ಇರುವುದರಿಂದ ಮಾನಸಿಕವಾಗಿ ಇದರಿಂದ ಯಾವುದೇ ಲಾಭಗಳು ಉಂಟಾಗುವುದಿಲ್ಲ.

ನಾವು ಯೋಗಿಗಳನ್ನು ಹಾಗೂ ಸಾಧುಸಂತರನ್ನು ಬಹಳ ವಿರಳವಾಗಿ ನಮ್ಮ ಸಮಾಜದಲ್ಲಿ ಕಾಣುತ್ತೇವೆ. ಅಂದರೆ ಎಲ್ಲೋ ಕೆಲವರು ಮಾತ್ರ ಯೋಗಿ ಎಂಬ ಪಟ್ಟ ಪಡೆದಿರುತ್ತಾರೆ. ಹಲವಾರು ವರ್ಷಗಳ ಧ್ಯಾನ ಮತ್ತು ಯೋಗಾಭ್ಯಾಸದ ಫಲವಾಗಿ ಯೋಗಿಗಳು ನಮ್ಮೆಲ್ಲರಿಗಿಂತ ಮೇರು ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಸದಾ ಹಸನ್ಮುಖಿಯಾಗಿ ಜೀವನದಲ್ಲಿ ಹೆಚ್ಚು ಸುಖ-ಸಂತೋಷವನ್ನು ಪಡೆದಿರುತ್ತಾರೆ.

advertisement

Leave A Reply

Your email address will not be published.