Karnataka Times
Trending Stories, Viral News, Gossips & Everything in Kannada

Eyeballs: ತನ್ನ ಕಣ್ಣು ಗುಡ್ಡೆಗಳನ್ನು 360° ತಿರುಗಿಸಿದ ವ್ಯಕ್ತಿ; ತಪ್ಪಿಯೂ ನೀವು ಟ್ರೈ ಮಾಡಬೇಡಿ!

advertisement

ಈ ಜಗತ್ತಿನಲ್ಲಿ ಅದೆಷ್ಟು ವಿಸ್ಮಯಗಳು ಇವೆಯೋ, ದಿನವೂ ಅದೆಷ್ಟು ವಿಸ್ಮಯಗಳು ನಡೆಯುತ್ತಿರುತ್ತವೆಯೋ ಅದನ್ನು ಸಾಮಾನ್ಯರು ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ ಆದರೆ ಸೋಶಿಯಲ್ ಮೀಡಿಯಾ ಎನ್ನುವ ಒಂದು ಪುಟ ತೆರೆದರೆ ಸಾಕು ಹಲವು ವಿಷಯಗಳು ನಮ್ಮ ಕಣ್ಣನ್ನು ನಾವೇ ನಂಬಲಾರದಂತಹ ಪರಿಸ್ಥಿತಿಗೆ ತಂದುಬಿಡುತ್ತವೆ. ಜಗತ್ತಿನಲ್ಲಿ ಹೀಗೂ ನಡೆಯುತ್ತಾ ಗುರು ಅಂತ ನೀವು ಪ್ರಶ್ನೆ ಮಾಡಬೇಕು ಅಂತ ವಿಚಾರಗಳು ಕಣ್ಣು ಮುಂದೆ ಬರುತ್ತವೆ. ಇಂತಹ ಕಣ್ಣಿಗೆ ಸಂಬಂಧಿಸಿದ ನಂಬಲಾರದಂತಹ ಮ್ಯಾಜಿಕ್ ಮಾಡಿದ ವ್ಯಕ್ತಿ ಒಬ್ಬರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಏನಿದೆ?

@desimojito ಎನ್ನುವ ‘X’ ಬಳಕೆದಾರರೊಬ್ಬರು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನ್ನ ಕಣ್ಣುಗುಡ್ಡೆಗಳನ್ನು (Eyeballs) 360 ಡಿಗ್ರಿ ತಿರುಗಿಸಿದ ದೃಶ್ಯ ಕಂಡು ಬಂದಿದೆ. ಒಬ್ಬ ವ್ಯಕ್ತಿಯ ಸುತ್ತ ಆತನ ಮನೆಯ ಹೆಣ್ಣು ಮಕ್ಕಳು ಕುಳಿತುಕೊಂಡಿದ್ದಾರೆ ನಂತರ ಕ್ಯಾಮರಾ ಆ ವ್ಯಕ್ತಿಯ ಹತ್ತಿರ ಹೋಗುತ್ತದೆ. ಸೋಫಾದಲ್ಲಿ ಕುಳಿತಿರುವ ವ್ಯಕ್ತಿ ಕಣ್ಣಿನ ಮುಂದೆ ತನ್ನ ಕೈ ಬೆರಳನ್ನು ಹಿಡಿದಿದ್ದಾನೆ ಕೈಯ ಬೆರಳನ್ನು ಕೇಂದ್ರೀಕರಿಸಿಕೊಂಡು ಕಣ್ಣಿನ ಗುಡ್ಡೆಗಳನ್ನು (Eyeballs) ಬಲಕ್ಕೆ ಎಡಕ್ಕೆ ತಿರುಗಿಸುತ್ತಾನೆ ನಂತರ ಕೈ ಬೆರಳನ್ನು ಎಡಕ್ಕೆ ತಿರುಗಿಸಿ ಕ್ಷಣಮಾತ್ರದಲ್ಲಿ ಕಣ್ಣುಗುಡ್ಡೆಗಳನ್ನು 360 ಡಿಗ್ರಿ ತಿರುಗಿಸುತ್ತಾನೆ. ಮನೆಯವರೆಲ್ಲರೂ ವಾವ್ ಎಂದು ಉದ್ಘಾರವೆತ್ತಿದ್ದು ವಿಡಿಯೋದಲ್ಲಿ ಕೇಳಿಸಿದೆ.

advertisement

ಮಿಲಿಯನ್ ನಷ್ಟು ವೀಕ್ಷಣೆ ಆಗಿರುವ ಈ ವಿಡಿಯೋ ನೋಡಿ ಸಾಕಷ್ಟು ಜನ ಕಮೆಂಟ್ ಮಾಡಿದ್ದಾರೆ. ಕೆಲವರು ’ಇದು ಅಸಾಧ್ಯವಾದ ಘಟನೆ” ಎಂದು ಹೇಳಿದರೆ ಇನ್ನೂ ಕೆಲವರು ಈತ ”ಮಿಸ್ಟರ್ 360” ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ’ಈತ ಸಾಮಾನ್ಯ ನಲ್ಲ ಏಲಿಯನ್ ಇರಬೇಕ” ಎಂದು ಉದ್ಘಾರವೆತ್ತಿದ್ದಾರೆ. ಕೆಲವರು ”ನೋಡಿದರೆ ಭಯವಾಗುತ್ತದ” ಎಂದು ಕಾಮೆಂಟ್ ಮಾಡಿದ್ದಾರೆ.

ಕಣ್ಣುಗುಡ್ಡೆಗಳನ್ನು ಸುಲಭವಾಗಿ 360 ಡಿಗ್ರಿ ತಿರುಗಿಸಲು ಸಾಮಾನ್ಯವಾಗಿ ಯಾರಿಂದಲೂ ಸಾಧ್ಯವಿಲ್ಲ ಎಡಕ್ಕೆ ಬಲಕ್ಕೆ ಮೇಲೆ ಕೆಳಗೆ ತಿರುಗಿಸಬಹುದು. ಆದರೆ ಒಂದೇ ಸಮಯದಲ್ಲಿ 360 ಡಿಗ್ರಿ ತಿರುಗಿಸಲು ಸಾಧ್ಯವಿಲ್ಲ. ಆದರೆ ಈ ವ್ಯಕ್ತಿ ಈ ರೀತಿ ತನ್ನ ಕಣ್ಣುಗಳ ಜೊತೆಗೆ ಆಟವಾಡಿದ್ದನ್ನು ನೋಡಿ ಹಲವರಿಗೆ ಆಶ್ಚರ್ಯವಾಗಿದೆ ನೀವು ಕೂಡ ಈ ವಿಡಿಯೋವನ್ನು ಇಲ್ಲಿ ವೀಕ್ಷಿಸಬಹುದು.

advertisement

Leave A Reply

Your email address will not be published.