Karnataka Times
Trending Stories, Viral News, Gossips & Everything in Kannada

Samaira Sharma: ರೋಹಿತ್ ಶರ್ಮಾ ಅವರ ಮಗಳ ಮುದ್ದಾದ ವಿಡಿಯೋ ವೈರಲ್!

advertisement

ಮೂರನೇ ಓ ಡಿ ಐ ವಿಶ್ವ ಕಪ್ (ODI World Cup) ಗೆಲ್ಲುವ ನಿರೀಕ್ಷೆ ಸುಳ್ಳಾಯಿತು. ಭಾರತ ಈ ಬಾರಿ ಗೆದ್ದೇ ಗೆಲ್ಲುತ್ತೆ ಅಂತ ಯಾರೆಲ್ಲಾ ಬಹಳ ದೊಡ್ಡ ಆಸೆ ಇಟ್ಟುಕೊಂಡಿದ್ದರು ಎಲ್ಲರಿಗೂ ನಿರಾಸೆಯಾಗಿತ್ತು. ಹತ್ತು ಪಂದ್ಯಗಳಲ್ಲಿ ಒಂದೇ ಒಂದು ಮ್ಯಾಚ್ ಕೂಡ ಸೋಲದ ಟೀಮ್ ಇಂಡಿಯಾ (Team India) ಕೊನೆಯ ಪಂದ್ಯದಲ್ಲಿ ಆರು ವಿಕೆಟ್ ನಷ್ಟಕ್ಕೆ ಆಸ್ಟ್ರೇಲಿಯಾದ (Australia) ಮುಂದೆ ಮಣಿಯಬೇಕಾಯಿತು.

ಟೀಮ್ ಇಂಡಿಯಾ ಈ ಬಾರಿ ವಿಶ್ವಕಪ್ (World Cup) ಗೆಲ್ಲುವ ಎಲ್ಲಾ ನಿರೀಕ್ಷೆಗಳು ಇದ್ವು. ಆದರೆ ರೋಹಿತ್ ಶರ್ಮಾ ಅವರ ನೇತೃತ್ವದ ತಂಡ ವಿಶ್ವಕಪ್ ಫೈನಲ್ ನಲ್ಲಿ ಸೋಲು ಅನುಭವಿಸಿತು. ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರವಲ್ಲದೇ ಕ್ರಿಕೆಟ್ ಆಡಿದ ಆಟಗಾರರಿಗೂ ಕೂಡ ಇದು ಬಹಳ ನೋವನ್ನ ತಂದು ಕೊಟ್ಟಿದೆ ಸೋಲಿನ ನಂತರ ಮೈದಾನದಲ್ಲಿಯೇ ಟೀಂ ಇಂಡಿಯಾದ ಆಟಗಾರರು ಭಾವನೆಗಳನ್ನು ಹೊರಹಾಕಿದ್ರು ರೋಹಿತ್ ಶರ್ಮ (Rohit Sharma) ಹಾಗೂ ಉಳಿದ ಆಟಗಾರರು ಸೋತಿದ್ದಕ್ಕೆ ಬೇಸರದಿಂದ ಕಣ್ಣೀರು ಹೊರಕ್ಕೆ ಹಾಕಿದರು. ಆ ದೃಶ್ಯ ನೋಡೀದರೆ ಮನಸ್ಸು ಭಾರವಾಗುತ್ತದೆ.

ಇನ್ನು ರೋಹಿತ್ ಶರ್ಮಾ ನೇತೃತ್ವದ ತಂಡ ವಿಶ್ವಕಪ್ ಸೋತಿರುವುದಕ್ಕೆ ಬಹಳ ಬೇಸರವಿದೆ ಈ ನಡುವೆ ರೋಹಿತ ಶರ್ಮ ಅವರ ಮಗಳು, ಕ್ಯೂಟ್ ಸಮೈರಾ ಅವರ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Samaira ಸೋಶಿಯಲ್ ಮೀಡಿಯಾದಲ್ಲಿ ಮಿಂಚಿಂಗ್:

advertisement

ರೋಹಿತ್ ಶರ್ಮಾ ಅವರ ಪುಟ್ಟ ಮಗಳು ಸಮೈರಾ (Samaira Sharma) ಮಾತನಾಡಲು ಚೂಟಿ. ಆಕೆ ಮಾತನಾಡುವುದನ್ನು ಕೇಳಿದರೆ ಯಾರಿಗಾದರೂ ಖುಷಿಯಾಗುತ್ತೆ. ಇತ್ತೀಚಿಗೆ ಸಮೈರಾ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ ಇದರಲ್ಲಿ ಆಚೆ ಬರುತ್ತಿರುವ ಸಮೈರಾ ಅವರನ್ನು ಕ್ಯಾಮೆರಾಮೆನ್ ಹಾಗೂ ಪಾಪಾರಾಜಿಗಳು ನಿಲ್ಲಿಸಿ ಅಪ್ಪನ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅಪ್ಪ ಎಲ್ಲಿ ಎಂದು ಕೇಳಿದ್ದಾರೆ ಅದಕ್ಕೆ ಉತ್ತರಿಸಿರುವ ಸಮೈರಾ “ಅಪ್ಪ ರೂಮಿನಲ್ಲಿ ಇದ್ದಾರೆ ಆಲ್ಮೋಸ್ಟ್ ಪಾಸಿಟಿವ್ ಆಗಿದ್ದಾರೆ ಇನ್ನು ಒಂದು ತಿಂಗಳಿನಲ್ಲಿ ಮೊದಲಿನಂತೆಯೇ ನಗುತ್ತಾರೆ” ಎಂದು ಮುದ್ದು ಮುದ್ದಾಗಿ ಹೇಳುತ್ತಾಳೆ. ಒಂದು ವರ್ಷ ಹಳೆಯದಾಗಿರುವ ಸಮೈರಾ ಅವರ ವಿಡಿಯೋ ಈಗ ವೈರಲ್ ಆಗಿದ್ದು ಸಾಕಷ್ಟು ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ.

ಅಷ್ಟೇ ಅಲ್ಲ ಮುದ್ದು ಮಗು ಸಮೈರಾ (Samaira Sharma) ಅವರ ಕಾನ್ಫಿಡೆನ್ಸ್ ಹಾಗೂ ಆಕೆ ಮಾತನಾಡುವ ರೀತಿ ಪ್ರತಿಯೊಬ್ಬರಿಗೂ ಇಷ್ಟವಾಗಿದೆ ರೋಹಿತ್ ಶರ್ಮ ಮಗಳನ್ನು ಎಷ್ಟು ಚೆನ್ನಾಗಿ ಬೆಳೆಸುತ್ತಿದ್ದಾರೆ ಎಂದು ಜನ ಕಮೆಂಟ್ ಮಾಡಿ ಶಹಬ್ಬಾಶ್ ಎಂದಿದ್ದಾರೆ. ರೋಹಿತ್ ಶರ್ಮಾ (Rohit Sharma) ಅವರ ಪೇರೆಂಟಿಂಗ್ ಬಗ್ಗೆ ಗೌರವ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ನಾನು ಪ್ರಪಂಚದಲ್ಲಿ ನೋಡಿದ ಅತ್ಯಂತ ಕ್ಯೂಟ್ ಹುಡುಗಿ ಈಕೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರು ಕೂಡ ಫಿದಾ ಆಗಿದ್ದಾರೆ. ಸುಂದರವಾದ ವಿಡಿಯೋ ನೋಡಿದ್ರೆ ರೋಹಿತ್ ಶರ್ಮ ಮೇಲೆ ಮತ್ತೆ ಲವ್ ಆಗೋದ್ರಲ್ಲಿ ಡೌಟ್ ಇಲ್ಲ ಇನ್ನಷ್ಟು ಪಂದ್ಯಗಳನ್ನು ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಮ್ ಇಂಡಿಯಾ ಆಡಲಿ, ಗೆಲ್ಲಲಿ ಎಂದು ಸಾಕಷ್ಟು ಜನ ಮೀಡಿಯಾದಲ್ಲಿ ಹಾರೈಸಿದ್ದಾರೆ.

advertisement

Leave A Reply

Your email address will not be published.