Karnataka Times
Trending Stories, Viral News, Gossips & Everything in Kannada

Coaching Institute Students: ತರಗತಿಯಲ್ಲಿ ಕುಳಿತುಕೊಳ್ಳುವ ಸೀಟ್ ಗಾಗಿ ಇಬ್ಬರು ಯುವಕರ ನಡುವೆ ಹೊಡೆದಾಟ; ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ!

advertisement

ಕೋಚಿಂಗ್ ಇನ್ಸ್ಟಿಟ್ಯೂಟ್ ನ ಇಬ್ಬರು ವಿದ್ಯಾರ್ಥಿಗಳು (Coaching Institute Students) ಹೊಡೆದಾಡಿದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮಿಲಿಯನ್ ಗಟ್ಟಲೆ ವೀವ್ಸ್ (Views) ಪಡೆದುಕೊಂಡಿರುವ ಈ ವಿಡಿಯೋ ಇದೀಗ ಪೊಲೀಸ್ ವಿಚಾರಣೆಯವರೆಗೂ ಹೋಗಿದೆ ಎನ್ನಲಾಗಿದೆ. ಜೊತೆಗೆ ಇಬ್ಬರು ಹೊಡೆದಾಟ ಮಾಡಿಕೊಳ್ಳುತ್ತಿದ್ದಾಗ ಉಳಿದವರು ವಿಡಿಯೋ ಮಾಡುತ್ತಿದ್ದು ಟೀಕೆಗೂ ಕಾರಣವಾಗಿದೆ.

ವಿದ್ಯಾರ್ಥಿಗಳ ಹೊಡೆದಾಟದ ವಿಡಿಯೋ ವೈರಲ್!

ಈಗ ಕೈಯಲ್ಲಿ ಮೊಬೈಲ್ ಇದ್ರೆ ಸಾಕು, ಸ್ಕ್ರೋಲ್ (Scroll) ಮಾಡುತ್ತಾ ಹೋದರೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟು ವಿವಿಧ ಬಗೆಯ ವಿಡಿಯೋಗಳು ನೋಡಲು ಸಿಗುತ್ತವೆ. ಕೆಲವು ಸಿಕ್ಕಾಪಟ್ಟೆ ಕ್ರಿಯೇಟಿವ್ ಆಗಿದೆ ಅಂತ ಅನ್ನಿಸಿದರೆ ಇನ್ನೂ ಕೆಲವು ಸಾಕಷ್ಟು ವೈಲೆಂಟ್ ಕೂಡ ಆಗಿರುತ್ತೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುವ ದೃಶ್ಯಗಳು ಕೂಡ ಸೆರೆಹಿಡಿಯಲಾಗುತ್ತಿದೆ ವಿಶೇಷ ಅಂದರೆ ಇಬ್ಬರು ವಿದ್ಯಾರ್ಥಿಗಳು ಹೊಡೆದಾಡಿಕೊಳ್ಳುತ್ತಿದ್ದಾರೆ ಉಳಿದವರು ಅದನ್ನು ವಿಡಿಯೋ ಮಾಡಿಕೊಂಡು, ತಮಾಷೆ ನೋಡುತ್ತಾರೆಯೇ ಹೊರತು ಆ ಹೊಡೆದಾಟವನ್ನು ತಪ್ಪಿಸಲು ಹೋಗುವುದಿಲ್ಲ ಎನ್ನುವುದು ನಿಜಕ್ಕೂ ಆತಂಕದ ವಿಷಯ ಎನ್ನಬಹುದು.

advertisement

ವೈರಲ್ ಆದ ವಿಡಿಯೋದಲ್ಲಿ ಏನಿದೆ?

ಕ್ಲಾಸ್ ರೂಮಿನಲ್ಲಿ ಕುಳಿತುಕೊಳ್ಳುವ ಜಾಗಕ್ಕಾಗಿ ಇಬ್ಬರು ವಿದ್ಯಾರ್ಥಿಗಳ ನಡುವೆ ಹೊಡೆದಾಟ ಆರಂಭವಾಗಿದೆ. ಈ ವಿಡಿಯೋದಲ್ಲಿ ಹಸಿರು ಬಣ್ಣದ ಟೀ ಶರ್ಟ್ ಧರಿಸಿರುವ ಎನಿಸ್ಟಿಟ್ಯೂಟ್ ಒಂದರ ಇಬ್ಬರು ವಿದ್ಯಾರ್ಥಿಗಳು (Coaching Institute Students) ಕ್ಲಾಸ್ ರೂಮ್ನಲ್ಲಿ ಕಾಲರ್ ಪಟ್ಟಿ ಹಿಡಿದು, ಒಬ್ಬರನ್ನೊಬ್ಬರು ನೂಕಿಕೊಳ್ಳುತ್ತಾ ಹೊಡೆದಾಡುವ ದೃಶ್ಯ ಕಾಣಬಹುದು. ಇದು ಕೋಚಿಂಗ್ ಇನ್ಸ್ಟಿಟ್ಯೂಟ್ ಒಂದರಲ್ಲಿ ನಡೆದ ಘಟನೆ ಎನ್ನಲಾಗಿದೆ. ಇಬ್ಬರು ವಿದ್ಯಾರ್ಥಿಗಳ ನಡುವೆ ಈ ಫೈಟಿಂಗ್ ನಡೆದಿದೆ ಉಳಿದ ವಿದ್ಯಾರ್ಥಿಗಳು ನಗುತ್ತಾ ವಿಡಿಯೋ ಮಾಡುತ್ತಿರುವ ದೃಶ್ಯವು ಕಂಡುಬಂದಿದೆ ಆದರೆ ವಿದ್ಯಾರ್ಥಿಗಳ ನಡುವಿನ ಹೊಡೆದಾಟ ತಪ್ಪಿಸಲು ಮಾತ್ರ ಯಾರು ಹೋಗದೆ ಇರುವುದು ವಿಪರ್ಯಾಸ.

ಇನ್ನು ಈ ವಿಡಿಯೋಕ್ಕೆ ಲಕ್ಷಾಂತರ ವೀಕ್ಷಣೆ ಕೂಡ ಬಂದಿದ್ದು ಸಾಕಷ್ಟು ಜನ ಶೇರ್ ಮಾಡಿದ್ದಾರೆ ಏನೋ ಮಹಿಳಾ ಯೂಸರ್ಗಳು ಸೇರಿದಂತೆ ಹಲವರು ಕಮೆಂಟ್ ಮಾಡಿದ್ದಾರೆ ಸುಮ್ಮನೆ ಹೊಡೆದಾಟ ನೋಡುವ ಬದಲು ತಪ್ಪಿಸಬಹುದಿತ್ತಲ್ಲ ಎಂದು ಕಮೆಂಟ್ ಮಾಡಿದ್ದಾರೆ ಇನ್ನು ಕೆಲವರು WWE ಫೈಟಿಂಗ್ ನೋಡಿದಂತೆ ಆಗುತ್ತೆ ಎಂದು ತಮಾಷೆಯಾಗಿಯೂ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಇದೊಂದು ವಿಡಿಯೋ ವೈರಲ್ ಆಗುತ್ತಿದ್ದು, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

advertisement

Leave A Reply

Your email address will not be published.