Karnataka Times
Trending Stories, Viral News, Gossips & Everything in Kannada

Fixed Deposit: ಪೋಸ್ಟ್ ಆಫೀಸ್ FD ಮತ್ತು ಬ್ಯಾಂಕ್ FD, ಯಾವ ಹೂಡಿಕೆಯಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತದೆ?

advertisement

ಸಾಕಷ್ಟು ಜನ ಉದ್ಯೋಗ ಆರಂಭಿಸಿದ ತಕ್ಷಣವೇ ತಮ್ಮ ಭವಿಷ್ಯಕ್ಕಾಗಿ ಆರ್ಥಿಕ ತೊಂದರೆ ಅನುಭವಿಸದೆ ಇರುವ ರೀತಿಯಲ್ಲಿ ಒಂದಲ್ಲಾ ಒಂದು ರೀತಿಯ ಹೂಡಿಕೆ ಆರಂಭಿಸುತ್ತಾರೆ. ವಿವಿಧ ಬ್ಯಾಂಕುಗಳಲ್ಲಿ, ಪೋಸ್ಟ್ ಆಫೀಸ್ ಗಳಲ್ಲಿ, LIC ಗಳಲ್ಲಿ ಹೀಗೆ ಬೇರೆ ಬೇರೆ ರೀತಿಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾರೆ.

Fixed Deposit ಇಡುವುದು:

ಫಿಕ್ಸೆಡ್ ಡಿಪೋಸಿಟ್ (Fixed Deposit) ಯನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ (Post Office) ನಲ್ಲಿ ಇಡಬಹುದು ಇದು ಖಾತರಿಯ ಬಡ್ಡಿಯನ್ನು ನೀಡುವಂತಹ ಸುರಕ್ಷಿತ ಉಳಿತಾಯ ಯೋಜನೆಯಾಗಿದೆ. ಇದೇ ಕಾರಣಕ್ಕೆ ಅಪಾಯ ಮುಕ್ತವಾಗಿರುವ ಎಫ್ ಡಿ ಯೋಜನೆಯಲ್ಲಿ ಸಾಕಷ್ಟು ಜನ ಹೂಡಿಕೆ ಮಾಡುತ್ತಾರೆ. ನೀವು ಪೋಸ್ಟ್ ಆಫೀಸ್ ನಲ್ಲಿ ಎಫ್ ಡಿ ಯೋಜನೆ (FD Scheme) ಪ್ರಾರಂಭಿಸಿದಾಗ ಒಂದು, ಎರಡು, ಮೂರು ಹಾಗೂ ಐದು ವರ್ಷಗಳಿಗೆ ಎಫ್ ಡಿ ಆಯ್ಕೆ ಮಾಡಿಕೊಳ್ಳಬಹುದು. ಇದರ ಬಡ್ಡಿ ದರವು ಕೂಡ ವರ್ಷದಿಂದ ವರ್ಷಕ್ಕೆ ಬದಲಾಗಬಹುದು. ಅದೇ ರೀತಿ ನೀವು ಬ್ಯಾಂಕ್ ನಲ್ಲಿ ಎಫ್ ಡಿ ಇಟ್ಟರೆ ಇಲ್ಲಿ ವಿವಿಧ ಅವಧಿಯ ಎಫ್ ಡಿ ಆಯ್ಕೆ ಪಡೆಯಬಹುದು, ಅವಧಿಯ ಆಯ್ಕೆಗೆ ಅನುಗುಣವಾಗಿ ಬಡ್ಡಿ ಕೂಡ ಬದಲಾಗುತ್ತದೆ.

ಹೆಚ್ಚಿನ ಆದಾಯಕ್ಕೆ ದೀರ್ಘಾವಧಿಯ ಹೂಡಿಕೆ:

ಇನ್ನು ನೀವು ನಿಮ್ಮ ಹೂಡಿಕೆ ಮಾಡಿದ ಮೊತ್ತವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದಿದ್ದರೆ ದೀರ್ಘಕಾಲದ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಬಡ್ಡಿಯ ಆಧಾರದ ಮೇಲೆ ನೀವು ಹೂಡಿಕೆ ಮಾಡಿದ ಹಣ ದುಪ್ಪಟ್ಟಾಗಲು ಎಷ್ಟು ಸಮಯ ಬೇಕು ಎನ್ನುವುದನ್ನು ಅಂದಾಜಿಸಿ ನಂತರ ಹೂಡಿಕೆ ಮಾಡುವುದು ಬೆಸ್ಟ್ ಇದಕ್ಕಾಗಿ ಒಂದು ಸೂತ್ರವನ್ನು ಹೇಳಲಾಗುತ್ತದೆ.

ಬಡ್ಡಿ ದರದ ಲೆಕ್ಕಾಚಾರ:

advertisement

ಇದನ್ನು 72ರ ಸೂತ್ರ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಹಣಕಾಸು ತಜ್ಞರು 72 ಸೂತ್ರದ ಮೂಲಕವೇ ಹೂಡಿಕೆಯ ಮೊತ್ತವನ್ನು ಅಳೆಯುತ್ತಾರೆ ಎನ್ನಬಹುದು. ಇದರಿಂದಲೇ ನಿಮ್ಮ ಹಣ ಎಷ್ಟು ದಿನಗಳಲ್ಲಿ ಅಂದಾಜಿಸಲು ಸಾಧ್ಯ. ಇದಕ್ಕಾಗಿ ನೀವು ಮೊದಲು ಯಾವ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಿ ಹಾಗೂ ಅದರ ವಾರ್ಷಿಕ ಬಡ್ಡಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು ನಂತರ ಆ ವಾರ್ಷಿಕ ಬಡ್ಡಿಯನ್ನು 72 ರಿಂದ ಭಾಗಿಸಬೇಕು. ಇದರಿಂದ ಎಷ್ಟು ಸಮಯದಲ್ಲಿ ನೀವು ಹೂಡಿಕೆ ಮಾಡಿದ ಹಣ ದ್ವಿಗುಣಗೊಳ್ಳುತ್ತದೆ ಎಂಬುದರ ಲೆಕ್ಕ ನಿಮಗೆ ಸಿಗುತ್ತದೆ.

Post Office ನಲ್ಲಿ FD ಇದ್ದರೆ ಎಷ್ಟು ಸಮಯಕ್ಕೆ ದ್ವಿಗುಣಗೊಳ್ಳುತ್ತೆ?

ಪೋಸ್ಟ್ ಆಫೀಸ್ (Post Office) ನಲ್ಲಿ ಎಫ್ ಡಿ ಇಟ್ಟರೆ ಒಂದು ವರ್ಷದ ಅವಧಿಯ ಎಫ್ ಡಿ ಗೆ 6.9% ನಷ್ಟು ಎರಡು ಮತ್ತು ಮೂರು ವರ್ಷಗಳ ಅವಧಿಯ ಎಫ್ ಡಿ ಗೆ 7% ನಷ್ಟು ಹಾಗೂ ಐದು ವರ್ಷದ ಎಫ್ ಡಿ ಗೆ 7.5% ಬಡ್ಡಿ ಇದೆ ಎಂದು ಭಾವಿಸಿ. ಈಗ ನಿಮ್ಮ ದ್ವಿಗುಣಗೊಳ್ಳುವ ಅವಧಿಯ ಲೆಕ್ಕಾಚಾರ ಹಾಕೋಣ. ದೀರ್ಘಾವಧಿಯ ಎಫ್ ಡಿ ಹೂಡಿಕೆ ಅಂದರೆ ಐದು ವರ್ಷದ ಅವಧಿಯ ಎಫ್ ಡಿ ಹೂಡಿಕೆಗೆ 7.5% ಬಡ್ಡಿದರ ಇರುತ್ತದೆ. ಇದನ್ನು 72/7.5 =9.6 ಅಂದರೆ ನಿಮ್ಮ ಮೊತ್ತ 9 ವರ್ಷ ಆರು ತಿಂಗಳದ ಅವಧಿಯಲ್ಲಿ ದ್ವಿಗುಣವಾಗುತ್ತದೆ. ಹಾಗಾಗಿ ನೀವು ನಿಮ್ಮ ಹಣ ದ್ವಿಗುಣಗೊಳಿಸಲು ಕನಿಷ್ಠ 10 ವರ್ಷಗಳ ಕಾಲ ಎಫ್ಡಿ ಇಡಬೇಕು ಎಂದು ಅರ್ಥ ಮಾಡಿಕೊಳ್ಳಬಹುದು.

SBI ನಲ್ಲಿ FD ಇಟ್ಟರೆ ಯಾವಾಗ ದ್ವಿಗುಣಗೊಳ್ಳುತ್ತದೆ?

ಈಗ SBI ನಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಹಾಗೂ ಮೂರು ವರ್ಷಕ್ಕಿಂತ ಕಡಿಮೆ ಅವಧಿಗೆ ಎಫ್ ಡಿ ಇಟ್ಟರೆ 7% ನಷ್ಟು ಬಡ್ಡಿ ಸಿಗುತ್ತದೆ ಅದೇ ರೀತಿ ಮೂರು ವರ್ಷಕ್ಕಿಂತ ಹೆಚ್ಚಿಗೆ ಕಾಲದ ಸಮಯಕ್ಕೆ ಎಫ್ ಡಿ ಇಟ್ಟರೆ ಶೇಕಡ 6.5% ನಷ್ಟು ಬಡ್ಡಿದರ ಸಿಗುತ್ತದೆ. ಈಗ ದೀರ್ಘಾವಧಿಯ ಲೆಕ್ಕಾಚಾರ ಹಾಕೋಣ ಅಂದರೆ 72/6.5 =11.07. ನೀವು ನಿಮ್ಮ ಮತ ದ್ವಿಗುಣಗೊಳ್ಳಲು SBI Bank ನಲ್ಲಿ ಎಫ್ ಡಿ ಇದ್ದರೆ 11 ವರ್ಷಗಳು ಬೇಕು. ಈ ರೀತಿ ಲೆಕ್ಕಾಚಾರ ಹಾಕುವುದರ ಮೂಲಕ ನೀವು ಬಹಳ ಬೇಗ ಹಣ ದ್ವಿಗುಣವಾಗುವುದಕ್ಕೆ ಎಷ್ಟು ಹಣ ಹೂಡಿಕೆ ಮಾಡಬೇಕು ಹಾಗೂ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಯಾವ ರೀತಿಯ ಬಡ್ಡಿದರ ಇದೆ ಎಂಬುದನ್ನು ತಿಳಿದುಕೊಂಡು ನಂತರ ಹೂಡಿಕೆ ಮಾಡಿದರೆ ನಿಮಗೆ ಹೆಚ್ಚು ಲಾಭ ಸಿಗುತ್ತದೆ ಎನ್ನಬಹುದು.

advertisement

Leave A Reply

Your email address will not be published.