Karnataka Times
Trending Stories, Viral News, Gossips & Everything in Kannada

Indian Railways: ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೆಯಲ್ಲಿ ವಿಶೇಷ ಸೌಲಭ್ಯ, ರೈಲ್ವೆ ಇಲಾಖೆಯ ಘೋಷಣೆ!

advertisement

ಭಾರತದಲ್ಲಿ ಅತಿ ಹೆಚ್ಚು ಜನರ ಪ್ರಯಾಣದ ಸಾಂದ್ರತೆ  ಹಾಗೂ ಜನರಿಗೆ ಹೆಚ್ಚು ಅನುಕೂಲವಾಗುವಂತಹ ಸಾರಿಗೆ ಅಂದರೆ ಅದು ರೈಲ್ವೆ ಸಾರಿಗೆ. ಲಕ್ಷಾಂತರ ಜನ ರೈಲ್ವೆ ಸಾರಿಗೆಯ ಮೂಲಕ ಪ್ರಯಾಣ ಬೆಳೆಸುತ್ತಾರೆ. ಇದು ಬಹಳ ಸುರಕ್ಷಿತ ಹಾಗೂ ಅತ್ಯಂತ ಕಡಿಮೆ ವೆಚ್ಚದ ಸಾರಿಗೆ ಸೌಲಭ್ಯವಾಗಿದೆ ಭಾರತೀಯ ರೈಲ್ವೆ (Indian Railways) ಯನ್ನು ದೇಶದ ಜೀವನಾಡಿ ಎಂದೇ ಪರಿಗಣಿಸಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಪ್ರಯಾಣ ಬೆಳೆಸಲು ಅತ್ಯಂತ ಸುಲಭವಾದ ಮಾರ್ಗ ಇದಾಗಿದೆ.

ಸಾಮಾನ್ಯವಾಗಿ ರೈಲ್ವೆಯಲ್ಲಿ ಪ್ರಯಾಣ ಮಾಡುವವರಿಗೆ ಟಿಕೆಟ್ ಖರೀದಿ ಮಾಡುವುದರ ಹೊರತಾಗಿ ರೈಲ್ವೆ ಇಲಾಖೆ (Railway Department) ಯಲ್ಲಿ ಇರುವಂತಹ ಎಲ್ಲಾ ಸೌಲಭ್ಯಗಳ ಬಗ್ಗೆ ಅರಿವು ಇರುವುದಿಲ್ಲ ವಿಶೇಷವಾಗಿ ಹಿರಿಯ ನಾಗರಿಕರು ರೈಲಿನ ಮೂಲಕ ಪ್ರಯಾಣ ಬೆಳೆಸುವುದಾದರೆ ಅವರಿಗೆ ಹಲವಾರು ಬೇರೆ ರೀತಿಯ ಸೌಲಭ್ಯಗಳನ್ನು ಕೂಡ ರೈಲ್ವೆ ಇಲಾಖೆ ಕಲ್ಪಿಸಿಕೊಟ್ಟಿದೆ. ಹಾಗಾಗಿ ಇದರ ಬಗ್ಗೆ ತಿಳಿದುಕೊಂಡರೆ ಮುಂದಿನ ಪ್ರಯಾಣಕ್ಕೆ ನಿಮಗೆ ಅನುಕೂಲವಾಗಬಹುದು.

ಹಿರಿಯ ನಾಗರಿಕರಿಗೆ ವಿಶೇಷ ಸೇವೆ:

ಭಾರತೀಯ ರೈಲ್ವೆ ನಿಯಮದ (Indian Railways Rules) ಪ್ರಕಾರ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಿಗೆ ಹಾಗೂ 58 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತವೆ. ಮೊದಲನೇದಾಗಿ ಪುರುಷ ಹಿರಿಯ ನಾಗರಿಕರಿಗೆ ಶೇಕಡ 40% ನಷ್ಟು ಟಿಕೆಟ್ ರಿಯಾಯಿತಿ ಹಾಗೂ ಮಹಿಳಾ ಹಿರಿಯ ನಾಗರಿಕರಿಗೆ ಶೇಕಡ 50% ನಷ್ಟು ಟಿಕೆಟ್ ರಿಯಾಯಿತಿ ನೀಡಲಾಗುತ್ತದೆ. ಮೇಲ್ ಎಕ್ಸ್ಪ್ರೆಸ್, ರಾಜಧಾನಿ, ಶತಾಬ್ದಿ ಮೊದಲಾದ ರೈಲುಗಳಲ್ಲಿ ಈ ರಿಯಾಯಿತಿಯನ್ನು ಘೋಷಣೆ ಮಾಡಲಾಗಿದೆ.

Lower Berth ಸೌಲಭ್ಯ:

advertisement

ಹಿರಿಯ ನಾಗರಿಕರಿಗೆ ಲೋವರ್ ಬರ್ತ್ (Lower Berth) ಸೌಲಭ್ಯವನ್ನು ಕೂಡ ಒದಗಿಸಿ ಕೊಡಲಾಗುವುದು. ಒಂದು ವೇಳೆ ಹಿರಿಯ ನಾಗರಿಕರಿಗೆ ಟಿಕೆಟ್ ಬುಕ್ ಮಾಡುವಾಗ ಲೋವರ್ ಸಿಗದೇ ಇದ್ದರೂ ಕೂಡ ಪ್ರಯಾಣದ ವೇಳೆ ಅವರಿಗೆ ಲೋವರ್ ಬರ್ತ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ.

ಸ್ಲೀಪರ್ ವಿಭಾಗದಲ್ಲಿ ಮಹಿಳಾ ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿಯರಿಗೆ 6 ಲೋವರ್ ಬರ್ತ್ ಅನ್ನು ಕಾಯ್ದಿರಿಸಲಾಗಿದೆ. ಅದೇ ರೀತಿ 3ಎಸಿ ಕೋಚ್ ನಲ್ಲಿ ನಾಲ್ಕರಿಂದ ಐದು ಸೀಟುಗಳನ್ನು ಕಾಯ್ದಿರಿಸಲಾಗಿದೆ. 2ಎಸಿ ಕೋಚ್ (2 AC Coach) ನಲ್ಲಿ 3 ರಿಂದ 4 ಲೋವರ್ ಬರ್ತ್ ಹಿರಿಯ ನಾಗರಿಕರಿಗಾಗಿಯೇ ಮೀಸಲಿಡಲಾಗಿದೆ.

ಹಿರಿಯ ನಾಗರಿಕರಿಗಾಗಿ Wheel Chairs:

ಇನ್ನು ಬಹುತೇಕ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿಯೂ ಹಿರಿಯ ನಾಗರಿಕರಿಗಾಗಿಯೇ  ವೀಲ್ ಚೇರ್ (Wheel Chair) ಗಳನ್ನು ಇಡಲಾಗಿದೆ. ಸ್ಟೇಷನ್ ಮಾಸ್ಟರ್ (Station Master) ಅಥವಾ ಸ್ಟೇಷನ್ ಮ್ಯಾನೇಜರ್ (Station Manager) ಬಳಿ ವೀಲ್ ಚೇರ್ ಪಡೆದುಕೊಳ್ಳಲು ಮನವಿ ಸಲ್ಲಿಸಬೇಕು ನಿಮ್ಮ ಕೋರಿಕೆಯ ಮೇರೆಗೆ ಹಿರಿಯ ನಾಗರಿಕರಿಗಾಗಿ ವೀಲ್ ಚೇರ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇದನ್ನ ಪಡೆದುಕೊಳ್ಳಲು ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ  ಬುಕಿಂಗ್ (Online Booking) ಮಾಡಬೇಕು.

ಇನ್ನು ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಗರಿಕರು ಟಿಕೆಟ್ ಬುಕಿಂಗ್  ಮಾಡುವ ಸಮಯದಲ್ಲಿ ಅಂತವರಿಗೆ ಉಳಿದವರಿಗಿಂತಲೂ ಬೇಗ ಹಾಗೂ ಬೇಕಾಗಿರುವ ಸೀಟ್ ಕಾಯ್ದಿರಿಸಲಾಗುತ್ತದೆ. ಭಾರತೀಯ ರೈಲ್ವೆಯಲ್ಲಿ ಹಿರಿಯ ನಾಗರಿಕರಿಗಾಗಿ ಇಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದ್ದು ಇನ್ನು ಮುಂದೆ ಹಿರಿಯ ನಾಗರಿಕರನ್ನು ಕರೆದುಕೊಂಡು ಪ್ರಯಾಣಿಸುವಾಗ ಇವುಗಳ ಪ್ರಯೋಜನವನ್ನು ಪಡೆದುಕೊಳ್ಳಿ.

advertisement

Leave A Reply

Your email address will not be published.