Karnataka Times
Trending Stories, Viral News, Gossips & Everything in Kannada

Rental Income: ಬಾಡಿಗೆಗೆ ಅಂಗಡಿಗಳನ್ನು ಬಿಟ್ಟು ಆದಾಯ ಗಳಿಸುತ್ತಿದ್ದವರಿಗೆ ಸಿಹಿಸುದ್ದಿ!

advertisement

ಆದಾಯ ತೆರಿಗೆ (Income Tax) ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳು ಚಾಲ್ತಿಯಲ್ಲಿದೆ. ನೀವು ತೆರಿಗೆ ಪಾವತಿ ಮಾಡುವುದಕ್ಕಿಂತ ಮೊದಲು ಈ ಎಲ್ಲಾ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು.  ಅಷ್ಟೇ ಅಲ್ಲದೆ ಒಬ್ಬ ವ್ಯಕ್ತಿ ಆಸ್ತಿ ಖರೀದಿ (Property Purchase) ಮಾಡುವಾಗ ಅಥವಾ ತನ್ನ ಆಸ್ತಿ ಮಾರಾಟ ಮಾಡುವಾಗ ಕೂಡ ತೆರಿಗೆ ನಿಯಮಗಳಿಗೆ ಒಳಪಡುತ್ತಾನೆ ಎಂಬುದನ್ನು ಗಮನಿಸಬೇಕು ಇಲ್ಲವಾದರೆ ನಿಮ್ಮ ಸಣ್ಣ ತಪ್ಪುಗಳು ಕೂಡ ದೊಡ್ಡ ಪ್ರಮಾಣದಲ್ಲಿ ಆದಾಯ ತೆರಿಗೆ ಪಾವತಿಸುವಂತೆ ಮಾಡಬಹುದು.

ಬಾಡಿಗೆಯಿಂದ ಬರುವ ಆದಾಯದ ಮೇಲಿನ ತೆರಿಗೆ:

ಉದಾಹರಣೆಗೆ ನೀವು ಬಾಡಿಗೆ ತೆರಿಗೆ ನಿಯಮಗಳನ್ನ (Income Tax Rules) ತಿಳಿದುಕೊಳ್ಳದೆ ಇದ್ದಲ್ಲಿ 10 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ತೆರಿಗೆ ಸಂಬಂಧಪಟ್ಟ ಹಾಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕೆಲವು ಪ್ರಮುಖ ನಿಯಮಗಳನ್ನು ಈ ವರ್ಷದ ಬಜೆಟ್ ನಲ್ಲಿಯೇ ತಿಳಿಸಿದ್ದಾರೆ. ಹೊಸ ತೆರಿಗೆ ನಿಯಮದ ಪ್ರಕಾರ 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯವಿಲ್ಲ, ಆದರೆ 7 ಲಕ್ಷ ಮೀರಿದರೆ ಅಂತಹ ಆದಾಯಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯವಾಗಿದೆ.

advertisement

ಬಾಡಿಗೆ ಆದಾಯದ ಮೇಲಿನ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?

ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ 7.5 ಲಕ್ಷ ವಾಗಿದ್ದರೆ 50,000 ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಪಡೆಯಬಹುದು. ಅದೇ ರೀತಿ 7 ಲಕ್ಷಕ್ಕಿಂತ ಹೆಚ್ಚಿನ ಆದಾಯವಾಗಿದ್ದರೆ, ಮೂರರಿಂದ ಆರು ಲಕ್ಷ ರೂಪಾಯಿಗಳವರೆಗೆ ವಾರ್ಷಿಕ ಆದಾಯದ ಮೇಲೆ 5% ತೆರಿಗೆ ಹಾಗೂ ಆರರಿಂದ ಏಳು ಲಕ್ಷ ವಾರ್ಷಿಕ ಆದಾಯದ ಮೇಲೆ 10% ನಷ್ಟು ತೆರಿಗೆ ಪಾವತಿಸಬೇಕು.

ಈಗ ಬಾಡಿಗೆಯಿಂದ ಬರುತ್ತಿರುವ 10 ಲಕ್ಷ ರೂಪಾಯಿಗಳ ಆದಾಯ ಹೊಂದಿದ್ದರೆ ಅದರಲ್ಲಿ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬುದನ್ನು ನೋಡುವುದಾದರೆ, ನೀವು 7 ಲಕ್ಷ ಆದಾಯ ಹಾಗೂ ಉಳಿದ 3 ಲಕ್ಷವನ್ನು ಆಸ್ತಿ ತೆರಿಗೆ ಮತ್ತು ಗೃಹ ಸಾಲದ ಬಡ್ಡಿದರ ಪಾವತಿಯ ಅಡಿಯಲ್ಲಿ ಕ್ಲೈಮ್ ಮಾಡಬಹುದಾಗಿದೆ. ಅಂದರೆ ನಿವ್ವಳ ವಾರ್ಷಿಕ ಆದಾಯದ ಮೇಲೆ 30 % ನಷ್ಟು ಕಡಿತವನ್ನು ಮನೆಯ ದುರಸ್ತಿ ಹಾಗೂ ನಿರ್ವಹಣೆ ವಿಚಾರಕ್ಕಾಗಿ ಕ್ಲೈಮ್ ಮಾಡಬಹುದು.

ಅಲ್ಲಿಗೆ 10 ಲಕ್ಷ ರೂಪಾಯಿಗಳ ಆದಾಯವಿದ್ದರೂ 3 ಲಕ್ಷ ರೂಪಾಯಿಗಳ ವರೆಗೆ ಡಿಸ್ಕೌಂಟ್ ಮಾಡಿಕೊಳ್ಳಬಹುದು ಹಾಗಾಗಿ ನಿಮ್ಮ ಆದಾಯ 7 ಲಕ್ಷ ರೂಪಾಯಿಗಳು ಎಂದಾಗುತ್ತದೆ ಇದರಿಂದ ನೀವು ಆದಾಯ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಈ ರೀತಿಯಾಗಿ ನಿಮ್ಮ ಬಾಡಿಗೆಯಿಂದ ಬರುವ ಆದಾಯ ಹತ್ತು ಲಕ್ಷ ಆಗಿದ್ದರೂ ಕೂಡ ಅದಕ್ಕೆ ತೆರಿಗೆ ಪಾವತಿ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.