Karnataka Times
Trending Stories, Viral News, Gossips & Everything in Kannada

Indian Coach: ದ್ರಾವಿಡ್ ಬದಲು ಭಾರತಕ್ಕೆ ಕೋಚ್ ಆಗಿ ಈ ಖ್ಯಾತ ಆಟಗಾರನ ಎಂಟ್ರಿ ಖಚಿತ!

advertisement

ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಟೀಮ್ ಇಂಡಿಯಾದ ವಿಶ್ವಕಪ್ ಸೋಲು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಹಾಗೆಯೇ ಉಳಿದಿರಬಹುದು. ಆಸ್ಟ್ರೇಲಿಯಾದ ವಿರುದ್ಧ ಫೈನಲ್ ಪಂದ್ಯ ಹಾಡಿದ ಟೀಮ್ ಇಂಡಿಯಾ (Team India) ಆರು ವಿಕೆಟ್ ಗಳ ನಷ್ಟಕ್ಕೆ ಸೋಲನ್ನು ಅನುಭವಿಸಿ ವಿಶ್ವಕಪ್ ಅನ್ನು ಕಳೆದುಕೊಳ್ಳಬೇಕಾಯಿತು. ಇದೇ ಸಂದರ್ಭದಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದ್ದು  ಕ್ರಿಕೆಟ ದಂತಕಥೆ ರಾಹುಲ್ ದ್ರಾವಿಡ್ (Rahul Dravid) ತಮ್ಮ ಕೋಚ್ ಪದವಿಯಿಂದ ಕೆಳಗಿಳಿಯಲಿದ್ದಾರೆ.

ಇನ್ನು ಮುಂದೆ ನಾನು ಕೋಚ್ ಆಗಿ ಮುಂದುವರೆಯುವುದಿಲ್ಲ:

ರಾಹುಲ್ ದ್ರಾವಿಡ್ (Rahul Dravid) ಅವರು ವಿಶ್ವಕಪ್ ನ  ಬಳಿಕ ಎರಡು ವರ್ಷಗಳ ಒಪ್ಪಂದವನ್ನು ಕೂಡ ಅಂತ್ಯಗೊಳಿಸಿಕೊಂಡಿದ್ದಾರೆ. ಅಂದರೆ ಅವರ ಒಪ್ಪಂದ ಈಗ ಮುಗಿದಿದ್ದು ಮತ್ತೆ ಕೋಚ್ ಆಗಿ ಮುಂದುವರೆಯಲು ಇಷ್ಟವಿಲ್ಲ ಎಂದು BCCI ಗೆ ತಿಳಿಸಿದ್ದಾರೆ ಎನ್ನುವ ಸುದ್ದಿ ಬಹಿರಂಗಗೊಂಡಿದೆ. ಈ ವರ್ಷದ ವಿಶ್ವಕಪ್ ಬಿಸಿಸಿಐ ನ ಮುಖ್ಯ ತರಬೇತುದಾರರಾಗಿ ರಾಹುಲ್ ದ್ರಾವಿಡ್ (Rahul Dravid) ಅವರ ಕೊನೆಯ ಪಂದ್ಯ ಎನ್ನಬಹುದು.

advertisement

ಅವರ ಬದಲು VVS Laxman:

ಪ್ರಸ್ತುತ ಎರಡನೇ ಸ್ಪ್ರಿಂಗ್ ನ ಮುಖ್ಯ ಕೋಚ್  ಆಗಿರುವ VVS Laxman ಅವರು ದ್ರಾವಿಡ್ ಅವರ ಜಾಗಕ್ಕೆ ಬರುವ ಸಾಧ್ಯತೆ ಇದೆ. ವಿ ವಿ ಎಸ್ ಲಕ್ಷ್ಮಣ್ (VVS Laxman) ಅವರ ತರಬೇತಿಯ ಅಡಿಯಲ್ಲಿ ಟೀಮ್ ಇಂಡಿಯಾ 5 ಮ್ಯಾಚ್ ಪಂದ್ಯಗಳ T20 ಸರಣಿಯಲ್ಲಿ ಆಸ್ಟ್ರೇಲಿಯ ವನ್ನು ಎದುರಿಸಲಿದೆ.

VVS Laxman ಪ್ರಸ್ತುತ ಬೆಂಗಳೂರಿನಲ್ಲಿರುವ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರು ಕೂಡ ಹೌದು. ವಿಶ್ವ ಕಪ್ ಗಿಂತಲೂ ಮೊದಲು ಐರ್ಲೆಂಡ್ T20I ಸರಣಿ ಹಾಗೂ ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ನ್ಯೂಜಿಲ್ಯಾಂಡ್ ವಿರುದ್ಧ ವೈಟ್ ಬಾಲ್ ಸರಣಿಯಲ್ಲಿ ಭಾರತ ತಂಡದ ಹಂಗಾಮಿ ಮುಖ್ಯ ಕೋಚ್ ಕೂಡ ಆಗಿದ್ದರು. ದಕ್ಷಿಣ ಆಫ್ರಿಕಾ (South Africa)ದ ವಿರುದ್ಧ ಡಿಸೆಂಬರ್ 10 ರಂದು ಟಿ20ಐ ಪಂದ್ಯವನ್ನು ಇಂಡಿಯಾ ಆಡಲಿದ್ದು ಡಿಸೆಂಬರ್ 4ರ ಒಳಗೆ ವಿದೇಶ ಪ್ರಯಾಣ ಕೈಗೊಳ್ಳಬಹುದು.

20 ವರ್ಷಗಳ ಕಾಲ ಟೀಮ್ ಇಂಡಿಯಾಕ್ಕೆ ಆಡಿರುವ ದ್ರಾವಿಡ್ (Rahul Dravid) ಇನ್ನು ಮುಂದೆ ಪೂರ್ಣ ಸಮಯದ ಕೋಚ್ ಆಗಿ ಮುಂದುವರೆಯಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಜಂಜಾಟ ಅನುಭವಿಸಿದ ಅವರು ಇನ್ನು ಮುಂದೆ ಎನ್‌ಸಿಎಯಲ್ಲಿ ಮುಖ್ಯಸ್ಥರಾಗಿ ಉಳಿದುಕೊಳ್ಳಲಿದ್ದಾರೆ. ತಮ್ಮ ತವರು ಬೆಂಗಳೂರಿನಲ್ಲಿ ಉಳಿದುಕೊಳ್ಳಲು ಅವರಿಗೆ ಅನುವು ಮಾಡಿಕೊಡಲಾಗುತ್ತದೆ ಅಲ್ಲದೆ ಸಾಂದರ್ಭಿಕ ತರಬೇತಿ ನೀಡುವುದರೊಂದಿಗೆ ಟೀಮ್ ಇಂಡಿಯಾದ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರಲಿದ್ದಾರೆ ಆದರೆ ಪೂರ್ಣ ಪ್ರಮಾಣದ ತರಬೇತುದಾರರಾಗಿ ಉಳಿಯುವುದಿಲ್ಲ ಎಂದು BCCI ಸ್ಪಷ್ಟಪಡಿಸಿದೆ. ಈ ನಡುವೆ ಎರಡು ವರ್ಷದ ಐಪಿಎಲ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯು ಲಭ್ಯವಾಗಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ಬಿಸಿಸಿಐ ಬಹಿರಂಗಪಡಿಸಿಲ್ಲ.

advertisement

Leave A Reply

Your email address will not be published.