Karnataka Times
Trending Stories, Viral News, Gossips & Everything in Kannada

Sanju Samson: ಸಂಜು ಸ್ಯಾಮ್ಸನ್​ ಅವರನ್ನು ಟೀಂ ಇಂಡಿಯಾದಿಂದ ಕೈಬಿಡಲು ಕಾರಣವೇನು?

advertisement

ಕ್ರಿಕೇಟ್ ಎಲ್ಲರ ನೆಚ್ಚಿನ ಆಟ, ಯುವಕರಿಗಂತೂ ಕ್ರಿಕೇಟ್ ಮೇಲೆ ಕ್ರೇಜ್ ಹೆಚ್ಚು. ತಮ್ಮ ಇಷ್ಟದ ಆಟಗಾರ ಯಾವ ರೀತಿ ಆಡುತ್ತಾರೆ ಎಂದು ನೋಡಲು ಬಹಳಷ್ಟು ‌ಕಾತುರರಾಗಿರುತ್ತಾರೆ. ಮೊನ್ನೆಯಷ್ಟೆ ವಿಶ್ವಕಪ್ ನಲ್ಲಿ ಭಾರತ ಸೋತರೂ ಮುಂದಿನ ಭಾರೀ ಯಾದರೂ ವಿಶ್ವಕಪ್ ತಮ್ಮದೇ ಆಗಲಿ ಎಂಬ ಕನಸನ್ನು ಇಟ್ಟುಕೊಂಡಿದ್ದಾರೆ. ಕ್ರಿಕೇಟ್ ಆಂದಾಗ ಆಟಗಾರರಿಗೆ ಅವಕಾಶ ‌ಕೂಡ ಅಷ್ಟೆ ಮುಖ್ಯವಾಗುತ್ತದೆ. ಕೆಲವೊಂದು ಕಾರಣದಿಂದ ಕೆಲವು ಆಟಗಾರರನ್ನು ಮ್ಯಾಚ್ ನಲ್ಲಿ ಹೊರಗಿಡಬೇಕಾಗುತ್ತದೆ. ಅದೇ ರೀತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ಮತ್ತು ಆಸ್ಟ್ರೆಲಿಯಾ ತಂಡವನ್ನು ಪ್ರಕಟಿಸಲಾಗಿದ್ದು , ಏಕದಿನ ವಿಶ್ವಕಪ್ ನಲ್ಲಿ ಆಟ ಆಡಿದ ಹಲವು ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿತ್ತು.

ಆಯ್ಕೆ ಮಾಡಿಲ್ಲ

ಸಂಜು ಸ್ಯಾಮ್ಸನ್‌ ಅವರನ್ನು ಏಷ್ಯಾಕಪ್‌ (Asia Cup) ತಂಡದಲ್ಲಿ ಕೂಡ ಸೇರಿಸಲಾಗಿಲ್ಲ, ಅದೇ ರೀತಿ ವಿಶ್ವಕಪ್‌ಗೆ ಮುನ್ನ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳ ಸರಣಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಇದೀಗ ಮತ್ತೆ ಈ ಆಟದಲ್ಲಿಯು ಅವರನ್ನು ಸೇರಿಸಿಕೊಳ್ಳುತ್ತಿಲ್ಲ. ಆಟ ಆಡಲು ಸಾಕಷ್ಟು ಪ್ರತಿಭೆಯಿದ್ದರೂ ಕೆಲವು ಆಟಗಾರರನ್ನು ಬಿಸಿಸಿಐ (BCCI) ಕಡೆಗಣನೆ ಮಾಡಿದೆ. ಹೌದು ವಿಕೆಟ್ ಕೀಪರ್ ಬ್ಯಾಟರ್ ಸ್ಥಾನಕ್ಕೆ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರನ್ನು ಆಯ್ಕೆ ಮಾಡಿಲ್ಲ ಯಾಕೆ ಎಂಬ ಪ್ರಶ್ನೆ ಕೆಲವು ಆಟಗಾರರದ್ದು ಆಗಿದೆ.

ಯುವ ಪ್ರತಿಭೆಗಳಿಗೆ ಅವಕಾಶ

advertisement

ಭಾರತೀಯ ಕ್ರಿಕೆಟ್ ತಂಡ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು 2024ರಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್‌ ನ ಆಟಗಾರರನ್ನು ಪ್ರತಿನಿಧಿಸಲು ಈಗಾಗಲೇ ಸಾಕಷ್ಟು ತಯಾರಿ ಕೂಡ ನಡೆಸುತ್ತಿದೆ. ಹೌದು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಹಲವು ಯುವ ಪ್ರತಿಭೆಗಳಿಗೆ ಈ ಭಾರಿ ಅವಕಾಶ ನೀಡಲಾಗಿದೆ ಎನ್ನಲಾಗಿದೆ.

ಸಂಜು ಸ್ಯಾಮ್ಸನ್​ ಅವರಿಗೆ ಅವಕಾಶ ಯಾಕಿಲ್ಲ

ಕಳೆದ ಎರಡು ಟಿ20 ಆಟದಲ್ಲಿ ಟೀಂ ಇಂಡಿಯಾದ ಪರವಾಗಿ ಸಂಜು ಅವರು ಆಟ ಆಡಿದ್ದರು.ಆದ್ರೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ 5 ಪಂದ್ಯಗಳ ಆಟ ಮತ್ತು ಐರ್ಲೆಂಡ್‌ನಲ್ಲಿ ನಡೆದ ಪಂದ್ಯಗಳ ಟಿ20 ಸರಣಿಯಲ್ಲಿಯೂ ಸಂಜುಗೆ ಅವಕಾಶ ನೀಡಿದ್ದರೂ, ಆದರೆ ಇದರಲ್ಲಿ ಅವರು ಕಳಪೆ ಆಟ ಆಡಿದರು. ಇನ್ನೂ ಸಂಜು  ಬದಲಿಯಾಗಿಯು ತಂಡಕ್ಕೆ ಈಗಾಗಲೇ ಹಲವು ಹೆಸರುಗಳು ಕೂಡ ಕೇಳಿಬಂದಿದ್ದು ಇದರಲ್ಲಿ ತಿಲಕ್ ವರ್ಮಾ (Tilak Verma), ರಿಂಕು ಸಿಂಗ್, ಹೀಗೆ ಹಲವು ಆಟಗಾರರ ಹೆಸರು ಕೂಡ ಕೇಳಿಬಂದಿದೆ. ರಿಂಕು ಸಿಂಗ್ (Rinku Singh) ಈಗಾಗಲೇ ಮ್ಯಾಚ್ ಫಿನಿಶರ್ ಆಗಿ ಹೊರಹೊಮ್ಮುತ್ತಿದ್ದಾರೆ. ಹಾಗಾಗಿ ಸಂಜು ಬದಲಿ ಹಲವು ಆಟಗಾರರು ಉತ್ತಮ‌ ಪ್ರದರ್ಶನ ತೋರಿದ್ದಾರೆ ಎನ್ನಲಾಗುತ್ತಿದೆ.

ನೆಟ್ಟಿಗರ ಕಿಡಿ

ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಫೈನಲ್ ತಲುಪಿದೆ. ಐರ್ಲೆಂಡ್​ನಲ್ಲಿ ನಡೆದ ಆಟದಲ್ಲಿ 26 ಬಾಲ್​ನಲ್ಲಿ 40 ರನ್​ ಗಳಿಸಿ ಉತ್ತಮ‌ ಪ್ರದರ್ಶನ ತೋರಿದ್ದರೂ, ಸಂಜು ಸ್ಯಾಮ್ಸನ್‌ಗೆ ಇದುವರೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚಿನ ಸರಿಯಾದ ಅವಕಾಶ ಸಿಕ್ಕಿಲ್ಲ.13 ಏಕದಿನ ಪಂದ್ಯಗಳಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಆದ್ರೆ ಇವರಿಗೆ ಮಾತ್ರ ಅವಕಾಶ ಸರಿಯಾಗಿ ನೀಡುತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ.

advertisement

Leave A Reply

Your email address will not be published.