Karnataka Times
Trending Stories, Viral News, Gossips & Everything in Kannada

CNG: ವಾಹನಕ್ಕೆ CNG ತುಂಬಿಸುವಾಗ ಕಡ್ಡಾಯವಾಗಿ ವಾಹನದಿಂದ ಕೆಳಗಿಳಿಯಬೇಕು ಯಾಕೆ ಗೊತ್ತಾ! ಈ 4 ಕಾರಣ

advertisement

ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ ಹಾಗಾಗಿ ಪೆಟ್ರೋಲ್ (Petrol) ಅಥವಾ ಡೀಸೆಲ್ (Diesel) ಇಂಧನಕ್ಕಿಂತ ಎಲೆಕ್ಟ್ರಿಕ್ ವಾಹನ (Electric Vehicle) ಅಥವಾ ಸಿ ಎನ್ ಜಿ (CNG) ಆಧಾರಿತ ವಾಹನವನ್ನು ಹೆಚ್ಚಾಗಿ ಜನ ಬಳಸುತ್ತಿದ್ದಾರೆ ಅದಕ್ಕೆ ಕಂಪನಿಗಳು ಕೂಡ ಅತ್ಯುತ್ತಮ ವಿನ್ಯಾಸದಲ್ಲಿ ಉತ್ತಮ ಕಾರ್ಯ ಕ್ಷಮತೆಯೊಂದಿಗೆ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ.

ಸಿಎನ್‌ಜಿ ವಾಹನ ತುಂಬಿಸುವಾಗ ಎಚ್ಚರ:

ಸಿ ಎನ್ ಜಿ (CNG) ಅನಿಲ ಪರಿಸರಕ್ಕೆ ಅಪಾಯಕಾರಿಯಲ್ಲ ಎನ್ನುವ ಕಾರಣಕ್ಕೆ ಹೆಚ್ಚಾಗಿ ಸರ್ಕಾರವು ಕೂಡ ಸಿ ಎನ್ ಜಿ ಅನಿಲವನ್ನು ವಾಹನದಲ್ಲಿ ತುಂಬಿಸಲು ಶಿಫಾರಸ್ಸು ಮಾಡುತ್ತಿದೆ. ಸಿ ಎನ್ ಜಿ ಯನ್ನು ವಾಹನಕ್ಕೆ ತುಂಬಿಸುವಾಗ ಸಾಕಷ್ಟು ಬಾರಿ ನೀವು ಸಿ ಎನ್ ಜಿ ಬಂಕ್ ಗಳಿಗೆ ಹೋದರೆ ಅಲ್ಲಿನ ಸಿಬ್ಬಂದಿಗಳು ವಾಹನದಲ್ಲಿ ಇರುವ ಎಲ್ಲರನ್ನೂ ಕೆಳಗೆ ಇಳಿಯುವಂತೆ ವಿನಂತಿ ಮಾಡುತ್ತಾರೆ. ಸಿ ಎನ್ ಜಿ ಅನಿಲ ಅಪಾಯಕಾರಿ ಅಲ್ಲದೆ ಇದ್ದರೂ ಕೂಡ ಯಾಕೆ ನಾವು ವಾಹನದಿಂದ ಕೆಳಗಿಳಿಯಬೇಕು ಎನ್ನುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ ಹಾಗಾಗಿ ಇದನ್ನು ತಿಳಿದುಕೊಂಡು ನೀವು ಇನ್ನು ಮುಂದೆ ಸಿ ಎನ್ ಜಿ ಭರ್ತಿ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

ಸಿ ಏನ್ ಜಿ ತುಂಬಿಸುವಾಗ ವಾಹನದಿಂದ ಕೆಳಗೆ ಇಳಿಯುವುದಕ್ಕೆ ಕಾರಣಗಳು:

ಅಪಘಾತ ಆಗಬಹುದು:

ಸಿ ಎನ್ ಜಿ ವಾಹನಗಳಲ್ಲಿ ಅಪಘಾತ ಆಗುವ ಸಾಧ್ಯತೆ ಇರುತ್ತದೆ. ಅಂದರೆ ಅನಿಲ ತುಂಬಿಸುವಾಗ ಸೋರಿಕೆಯಾದರೆ ವಾಹನ ಹೊತ್ತಿಕೊಳ್ಳಬಹುದು. ಬೆಂಕಿ ಅವಗಢ ಸಂಭವಿಸಬಹುದು. ಈ ಕಾರಣಕ್ಕಾಗಿ ಸಿಎನ್ಜಿ ತುಂಬಿಸುವಾಗ ವಾಹನದಿಂದ ಕೆಳಗಿಳಿಯಲು ಸಿಬ್ಬಂದಿಗಳು ತಿಳಿಸುತ್ತಾರೆ.

advertisement

CNG Kit Fitting:

ಇನ್ನು ಎರಡನೆಯ ಕಾರಣವೆಂದರೆ ಸಿ ಏನ್ ಜಿ ಯನ್ನು ನಿಮ್ಮ ವಾಹನದಲ್ಲಿ ಅಳವಡಿಸುವಾಗ ಕೆಲವು ವ್ಯತ್ಯಾಸ ಇರಬಹುದು ಉದಾಹರಣೆಗೆ ಸಾಕಷ್ಟು ಜನ ತಮ್ಮ ಕಾರುಗಳಿಗೆ ಸಿಎನ್‌ಜಿ ಕಿಟ್ಟನ್ನು ಹೊರಗಡೆಯ ಮೆಕಾನಿಕ್ ಅನ್ನು ಕರೆಸಿ ಅವರ ಬಳಿ ಫಿಟ್ ಮಾಡಿಸಿಕೊಳ್ಳುತ್ತಾರೆ ಇದು ನೇರವಾಗಿ ಖರೀದಿ ಮಾಡಿರುವ ವಾಹನ ತಯಾರಿಕಾ ಕಂಪನಿಗೆ ಅಳವಡಿಸಿ ಕೊಟ್ಟಿರುವುದಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಸಿ ಏನ್ ಜಿ ಕಿಟ್ ಫಿಲ್ಲಿಂಗ್ ಬೂಟ್ ಸ್ಪೇಸ್ ಬಳಿ ಅಥವಾ ಮಿಡಲ್ ಸೀಟ್ ಕೆಳಬಾಗದಲ್ಲಿ ಇರಬಹುದು. ಇಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಸಿಎನ್‌ಜಿ ಫಿಟ್ಟಿಂಗನಲ್ಲಿ ವ್ಯತ್ಯಾಸವಾಗಬಾರದು ಎನ್ನುವ ಕಾರಣಕ್ಕೆ ಸಿಎಂಜಿ ಕಿಟ್ ಗೆ ಸಿ ಎನ್ ಜಿ ಇಂಧನ ಅಳವಡಿಸುವಾಗ ಕಾರಿನಿಂದ ಕೆಳಗಿಳಿಯುವಂತೆ ಸೂಚಿಸಲಾಗುತ್ತದೆ.

Meter Monitoring:

ನೀವು ಈ ಹಿಂದೆ ಬಳಸುತ್ತಿದ್ದ ಪೆಟ್ರೋಲ್ (Petrol) ಅಥವಾ ಡೀಸೆಲ್ (Diesel) ಕಾರುಗಳಿಗೆ ಹೋಲಿಸಿದರೆ ಸಿಎನ್ ಜಿಯಲ್ಲಿ ಇರುವಂತಹ ಮೀಟರ್ ನಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಮೀಟರ್ ಮೇಲ್ವಿಚಾರಣೆ ಮಾಡಲು ವಾಹನದಿಂದ ಹೊರಬಂದು ಅದನ್ನು ಸರಿಯಾಗಿ ನೋಡಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.

ವಾಸನೆ ಬರಬಹುದು:

ಇನ್ನು ಸಿ ಏನ್ ಜಿ ವಾಹನದಿಂದ ಸಿ ಎನ್ ಜಿ ತುಂಬಿಸುವಾಗ ಕೆಳಗೆ ಇಳಿಯಬೇಕು ಎಂದು ಹೇಳುವುದಕ್ಕೆ ಮತ್ತೊಂದು ಮುಖ್ಯವಾದ ಕಾರಣ ಅಂದರೆ ಸಿಎನ್ ಜಿ ಅನಿಲ ತುಂಬಿಸುವಾಗ ವಾಹನದಿಂದ ವಾಸನೆ ಬರಬಹುದು ಆದರೆ ಸಿ ಏನ್ ಜಿ ಅಪಾಯಕಾರಿಯಲ್ಲ ಅಥವಾ ವಿಷಕಾರಿ ಅಲ್ಲ. ಆದರೆ ಈ ವಾಸನೆ ಸಾಕಷ್ಟು ಜನರಿಗೆ ಸರಿ ಬರುವುದಿಲ್ಲ ಸಿ ಎನ್ ಜಿ ಸೋರಿಕೆಯಾದಾಗ ತಲೆನೋವು, ವಾಂತಿ, ವಾಕರಿಕೆ, ತಲೆ ತಿರುಗುವಿಕೆ ಯಂತಹ ಸಮಸ್ಯೆ ಕಾಡಬಹುದು. ಎಲ್ಲಾ ಕಾರಣಗಳಿಂದಾಗಿ ಸಿ ಎನ್ ಜಿ ಅನಿಲವನ್ನು ಕಾರಿಗೆ ತುಂಬಿಸುವಾಗ ವಾಹನದಲ್ಲಿ ಇರುವವರು ಕಾರಿನಿಂದ ತಿಳಿದುಕೊಂಡರೆ ಉತ್ತಮ ಎಂದು ಸಲಹೆ ನೀಡಲಾಗುತ್ತದೆ.

advertisement

Leave A Reply

Your email address will not be published.