Karnataka Times
Trending Stories, Viral News, Gossips & Everything in Kannada

Shakti Scheme: ಶಕ್ತಿ ಯೋಜನೆಯಲ್ಲಿ ಮಹತ್ವದ ಬದಲಾವಣೆ, ಮಹಿಳೆಯರಿಗೆ ಸಿಹಿಸುದ್ದಿ

advertisement

ರಾಜ್ಯ ಸರಕಾರದ ಪ್ರಸ್ತುತ ಸರಕಾರದ ಅವಧಿಯಲ್ಲಿ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಪರಿಶ್ರಮ ನೀಡುತ್ತಿದೆ ಎಂದು ಹೇಳಬಹುದು. ಕಾಂಗ್ರೆಸ್ ಸರಕಾರದ ಜನಪ್ರಿಯ ಯೋಜನೆಗಳಾದ ಶಕ್ತಿ ಯೋಜನೆ (Shakti Scheme) ಮತ್ತು ಗೃಹಲಕ್ಷ್ಮೀ ಯೋಜನೆಯ (Gruhalakshmi Scheme) ಮೂಲಕ ಮಹಿಳೆಯರಿಗೆ ಆರ್ಥಿಕ ಪ್ರೋತ್ಸಾಹ ನೀಡುವ ಜೊತೆಗೆ ರಾಜ್ಯಾದ್ಯಂತ ಉಚಿತ ಪ್ರಯಾಣಕ್ಕೂ ಕೂಡ ಸಮ್ಮತಿಸಿದ್ದಾರೆ. ಹಾಗಿದ್ದರೂ ಗೃಹಲಕ್ಷ್ಮೀ ಹಣ ಬಹುತೇಕ ಮಹಿಳೆಯರಿಗೆ ಬರದೇ ಒಂದೆಡೆ ಸಮಸ್ಯೆ ಆಗುತ್ತಿದ್ದು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ.

ವಿನೂತನ ನಿಯಮ

ಶಕ್ತಿ ಯೋಜನೆ ಜಾರಿಯಾದ ಬಳಿಕ ರಾಜ್ಯಾದ್ಯಂತ ಮಹಿಳೆಯರು ಉಚಿತ ಪ್ರಯಾಣ ಬೆಳೆಸುತ್ತಿದ್ದಾರೆ‌. ದೇಗುಲ, ಪ್ರವಾಸ , ಕಚೇರಿ ಕೆಲಸ ಎಲ್ಲಕ್ಕೂ ಸರಕಾರಿ ಬಸ್ ಅನ್ನೇ ಅವಲಂಬನೆ ಮಾಡುತ್ತಿದ್ದಾರೆ. ಈ ನಡುವೆ ಸರಕಾರಿ ಬಸ್ ಕೂಡ ಫುಲ್ ರಶ್ ಆಗುತ್ತಿದ್ದು ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನ ಮಾಡುತ್ತಿದೆ. ಈ ನಡುವೆಯೇ ಸರಕಾರದ ಶಕ್ತಿ ಯೋಜನೆ ಬಗ್ಗೆ ಒಂದು ವಿನೂತನ ನಿಯಮ ಜಾರಿ ತರಲು ಸರಕಾರ ಮುಂದಾಗಿದೆ. ಇದು ಸಾಕಷ್ಟು ಮಹಿಳೆಯರಿಗೆ ನೆರವಾಗಲಿದೆ.

ಯಾವುದು ಈ ನಿಯಮ

ಇಷ್ಟು ದಿನದ ವರೆಗೆ ರಾಜ್ಯ ಸರಕಾರದ ಶಕ್ತಿ ಯೋಜನೆ ಪ್ರಯಾಣ ಮಾಡಲು ಬಯಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ (Aadhar Card) , ಮತದಾರರ ಗುರುತು ಚೀಟಿ ಕಡ್ಡಾಯವಾಗಿದೆ ತೆಗೆದುಕೊಂಡು ಹೋಗಿ ಪ್ರಯಾಣಿಸಬೇಕಿತ್ತು ಆದರೆ ಈಗ ಆ ನಿಯಮ ಕೊಂಚ ಮಟ್ಟಿಗೆ ಬದಲಾವಣೆ ಮಾಡಲು ಸರಕಾರ ಮುಂದಾಗಿದೆ‌. ಹೀಗಾಗಿ ವ್ಯವಸ್ಥೆ ಇನ್ನು ಸರಳವಾಗಿದ್ದು ಸಾಕಷ್ಟು ಮಹಿಳೆಯರಿಗೆ ಈ ವಿಚಾರ ಖುಷಿ ನೀಡಿದೆ ಎನ್ನಬಹುದು.

advertisement

ಇಲಾಖೆಯಿಂದ ಸೂಚನೆ

ಈ ಹಿಂದೆ ಆಧಾರ್ ಕಾರ್ಡ್ ಅಸಲಿಗೆ ಮಾತ್ರ ಅಂದರೆ ವರ್ಜಿನಲ್ ಅನ್ನೇ ಕೊಂಡೊಯ್ಯಬೇಕು ಎಂಬ ನಿಯಮ ಇತ್ತು ಆದರೆ ಈಗ ಆ ನಿಯಮ ಬದಲಿಸಲಾಗಿದೆ‌. ಇನ್ನು ಮುಂದೆ ಜೆರಾಕ್ಸ್ ಪ್ರತಿ ಮತ್ತು ಮೊಬೈಲ್ ನಲ್ಲಿಯೇ ಫೋಟೋ , ಸಾಫ್ಟ್ ಕಾಪಿ ತೋರಿಸಿಯೂ ಪ್ರಯಾಣ ಮಾಡಲು ಮಹಿಳೆಯರಿಗೆ ಅನುಮತಿಸಲಾಗಿದೆ‌. ಈ ಸಾಫ್ಟ್ ಕಾಪಿ ಕಂಡು ಟಿಕೇಟ್ ನೀಡುವಂತೆ ಸಾರಿಗೆ ಇಲಾಖೆ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ಸಾರಿಗೆ ಇಲಾಖೆ ಸರಕಾರದ ನಿರ್ಧಾರದನ್ವಯವೇ ಸೂಚನೆ ನೀಡಿದ್ದಾರೆ.

ಹೀಗಾಗಿ ಇನ್ನು ಮುಂದಿನ ದಿನದಲ್ಲಿ ಶಕ್ತಿ ಯೋಜನೆ ಸರಳವಾಗಿ ಇರುವ ಕಾರಣಕ್ಕೆ ಮಹಿಳೆಯರಿಗೆ ಇನ್ನಷ್ಟು ಸ್ವಾಮಿಪ್ಯವಾಗಲಿದೆ. ಇಷ್ಟು ದಿನ ಅಸಲಿ ಕಾರ್ಡ್ ಕಳೆದು ಹೋದರೆ ಎಂಬ ಭಯ ಮತ್ತು ಕಾರ್ಡ್ ತರಲು ನೆನಪು ಹೋಗಿ ಬಸ್ ಹತ್ತಿದ್ದ ಬಳಿಕ ಟಿಕೇಟ್ ಮಾಡಿ ಪ್ರಯಾಣಿಸಿದ್ದು ಇದ್ದು ಈ ರೀತಿ ಸಮಸ್ಯೆಗೆ ಪರಿಹಾರ ದೊರಕಲಿದೆ ಎನ್ನಬಹುದು.

ಒಟ್ಟಾರೆಯಾಗಿ ಈ ಹಿಂದೆ ಇದ್ದ ರೂಲ್ಸ್ ಅನ್ನು ಸ್ವಲ್ಪ ಮಟ್ಟಿಗೆ ಮಾರ್ಪಾಡು ಮಾಡಿದ್ದ ಕಾರಣ ಮಹಿಳಾ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಆಗಿದೆ. ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಪ್ರಯಾಣ ಮಾಡುವ ನೆಲೆಯಲ್ಲಿ ಆಧಾರ್ , ಮತದಾರರ ಕಾರ್ಡ್ ಕಳೆದುಕೊಳ್ಳುವ ಪ್ರಮಾದ ಸಹ ಕಡಿಮೆ ಆಗಲಿದೆ ಎಂದು ಹೇಳಬಹುದು.

advertisement

Leave A Reply

Your email address will not be published.