Karnataka Times
Trending Stories, Viral News, Gossips & Everything in Kannada

SIM Card: ಡಿಸೆಂಬರ್ 1ರಿಂದ ಸಿಮ್ ಕಾರ್ಡ್ ಖರೀದಿಸುವ ನಿಯಮಗಳಲ್ಲಿ ಬದಲಾವಣೆ

advertisement

ಪ್ರತಿ ತಿಂಗಳು ಸರ್ಕಾರ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಸಂಬಂಧಪಟ್ಟ ಹಾಗೆ ಒಂದಲ್ಲಾ ಒಂದು ಬದಲಾವಣೆಗಳನ್ನು ಮಾಡುತ್ತದೆ. ಜೊತೆಗೆ ಕೆಲವು ಪರಿಶೀಲನೆಗಳನ್ನು ನಡೆಸಿ ಅಗತ್ಯವಿದ್ದರೆ ಪರಿಷ್ಕರಣೆಯನ್ನು ಕೂಡ ಮಾಡುತ್ತದೆ ಇದೀಗ ಡಿಸೆಂಬರ್ 1ರಿಂದ ಸಿಮ್ ಕಾರ್ಡ್ ಖರೀದಿಯ ನಿಯಮಗಳು ಬದಲಾಗಲಿದ್ದು ಹೊಸ ಸಿಮ್ ಕಾರ್ಡ್ (SIM Card) ಖರೀದಿ ಮಾಡುವುದಿದ್ದರೆ ಈ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕು.

10 ಲಕ್ಷ SIM Card ಮಾರಾಟಗಾರರಿದ್ದಾರೆ ಎಂದು ವರದಿಯಾಗಿದೆ:

ಸಿಮ್ ಕಾರ್ಡ್ ಖರೀದಿ (SIM Card Purchase) ಹಾಗೂ ಮಾರಾಟದ ನಿಯಮದಲ್ಲಿಯೂ ಕೂಡ ಬದಲಾವಣೆಯನ್ನು ದೂರ ಸಂಪರ್ಕ ಇಲಾಖೆ (DOT) ಹೊರಡಿಸಿದೆ. ಹಾಗಾಗಿ ಸಿಮ್ ಕಾರ್ಡ್ ಖರೀದಿಸುವವರಿಗೆ ಮಾತ್ರವಲ್ಲದೆ ಸಿಮ್ ಕಾರ್ಡ್ ಮಾರಾಟ ಮಾಡುವವರಿಗು ಕೂಡ ದೂರ ಸಂಪರ್ಕ ಇಲಾಖೆ ಹೊರಡಿಸಿದ ಹೊಸ ನಿಯಮಗಳು ಅನ್ವಯವಾಗುತ್ತದೆ. ಒಂದು ವೇಳೆ ಯಾರಾದರೂ ಉಲ್ಲಂಘನೆ ಮಾಡಿದರೆ ಬಾರಿ ಪ್ರಮಾಣದಲ್ಲಿ ದಂಡ ಪಾವತಿಸಬೇಕು ಹಾಗೆಯೆ ಜೈಲು ಶಿಕ್ಷೆಯ ಅನುಭವಿಸ ಬೇಕಾಗಬಹುದು ಎಂಬುದು ನೆನಪಿಟ್ಟುಕೊಳ್ಳಿ.

Fake SIM Card ವಂಚನೆ ತಡೆಗಟ್ಟಲು ಕ್ರಮ:

advertisement

ಇತ್ತೀಚಿನ ದಿನಗಳಲ್ಲಿ ನಕಲಿ ಸಿಮ್ ಕಾರ್ಡ್ (Fake Sim Card) ಬಳಕೆ ಮಾಡಿ ಜನರನ್ನು ಸುಮ್ಮನೆ ವಂಚನೆ ಮಾಡುವವರ ಸಂಖ್ಯೆ ಜಾಸ್ತಿ ಆಗುತ್ತಿದೆ. ಅಕ್ಟೋಬರ್ 1, 2023ರಲ್ಲಿ ಈ ಹೊಸ ನಿಯಮ ಜಾರಿಗೆ ಬರಬೇಕಿತ್ತು ಆದರೆ ಅದು ಡಿಸೆಂಬರ್ ತಿಂಗಳ ವರೆಗೆ ವಿಸ್ತರಣೆಗೊಂಡಿದೆ. ಅಂದರೆ ಈ ಹೊಸ ನಿಯಮ ಡಿಸೆಂಬರ್ 1, 2023ರಿಂದ ಆರಂಭವಾಗಲಿದೆ.

ಖರೀದಿಸಲು ಬೇಕಾಗಿರುವ ದಾಖಲೆಗಳು:

ಹೊಸ ನಿಯಮದ ಪ್ರಕಾರ ಸಿಮ್ ಕಾರ್ಡ್ ಖರೀದಿ ಮಾಡುವುದಕ್ಕೆ ಗುರುತು ಮತ್ತು ವಿಳಾಸದ ಸರಿಯಾದ ಪುರಾವೆಯನ್ನು ಒದಗಿಸಬೇಕು. ಆಧಾರ್ ಕಾರ್ಡ್ ಮಾತ್ರವಲ್ಲದೇ ಪ್ಯಾನ್ ಕಾರ್ಡ್ (PAN Card) ಮತದಾರರ ಗುರುತಿನ ಚೀಟಿ (Voter ID Card) ಅಥವಾ ಪಾಸ್ಪೋರ್ಟ್ (Passport) ನಂತಹ ದಾಖಲೆಯನ್ನು ಕೊಟ್ಟು ಸಿಮ್ ಕಾರ್ಡ್ ಖರೀದಿ ಮಾಡಬಹುದು. ಒಂದು ಐಡಿ ಸೀಮಿತ ಸಂಖ್ಯೆಯ ಸಿಮ್ ಕಾರ್ಡ್ ಖರೀದಿಸಬಹುದು ಅದಕ್ಕಿಂತ ಹೆಚ್ಚಿಗೆ ಖರೀದಿ ಮಾಡುವಂತಿಲ್ಲ. ಅದೇ ರೀತಿ ಸಿಮ್ ಕಾರ್ಡ್ ಖರೀದಿಸುವಾಗ ಡೀಲರ್ ಗಳು ಗ್ರಾಹಕರ ಗುರುತು ಮತ್ತು ವಿಳಾಸದ ಆಧಾರಗಳನ್ನು ಸರಿಯಾಗಿ ಪರಿಶೀಲಿಸಬೇಕು.

ಇನ್ನು ಯಾವುದೇ ಮಾರಾಟಗಾರ ಪಾಯಿಂಟ್ ಆಫ್ ಸೇಲ್ (Point of Sale) ಅಡಿಯಲ್ಲಿ ನವೆಂಬರ್ 30ರ ಒಳಗೆ ನೋಂದಾಯಿಸಿಕೊಂಡಿರಬೇಕು. ಒಂದು ವೇಳೆ ನೋಂದಾಯಿಸಿಕೊಂಡಿರದೆ ಇರುವ ಡೀಲರ್ಗಳು ಸಿಮ್ ಕಾರ್ಡ್ ಮಾರಾಟ ಮಾಡಿದರೆ ಅಂತವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಹೊಸ ಸಿಮ್ ಖರೀದಿಸುವ ಖರೀದಿದಾರರಾಗಿರಲಿ ಅಥವಾ ಸಿಮ್ ಕಾರ್ಡ್ ಮಾರಾಟ ಮಾಡುವವರಾಗಿರಲಿ ಸಿಮ್ ಕಾರ್ಡ್ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು.

ಇತ್ತೀಚಿನ ದಿನಗಳಲ್ಲಿ ಸಿಮ್ ಕಾರ್ಡ್ ಮೂಲಕ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟುವ ಸಲುವಾಗಿ ಈ ಹೊಸ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದೂರ ಸಂಪರ್ಕ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಹಾಗಾಗಿ ಇನ್ನು ಮುಂದೆ ಹೊಸ ಹೊಸ ಸಿಮ್ ಕಾರ್ಡ್ ಖರೀದಿ ಮಾಡುತ್ತ ಅದರಲ್ಲಿ ವಂಚನೆ ಮಾಡುವುದು ಅಷ್ಟು ಸುಲಭವಲ್ಲ

advertisement

Leave A Reply

Your email address will not be published.