Public Provident Fund: PPF ನಲ್ಲಿ ಹೂಡಿಕೆ ಮಾಡುವವರಿಗೆ ಭರ್ಜರಿ ಸಿಹಿಸುದ್ದಿ, ಹೊಸ ಬದಲಾವಣೆ
![](https://karnatakatimes.com/wp-content/uploads/2023/11/Good-news-for-PPF-investors.jpg)
advertisement
ಸಾರ್ವಜನಿಕ ಭವಿಷ್ಯ ನಿಧಿ (Public Provident Fund) ಹೂಡಿಕೆ ಭವಿಷ್ಯದ ದೃಷ್ಟಿಯಿಂದ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಅನುಭವಿಸದೆ ಇರಲು ಸಹಾಯ ಮಾಡುವಂತಹ ಒಂದು ಹೂಡಿಕೆ ಯೋಜನೆಯಾಗಿದೆ. ಇಲ್ಲಿ ನೀವು ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲ ತೆರಿಗೆ ಮುಕ್ತ ಹೂಡಿಕೆ ಇದಾಗಿದೆ.
Public Provident Fund:
ಪಿಪಿಎಫ್ (PPF) ನಲ್ಲಿ ಹೂಡಿಕೆ ಮಾಡುವುದಾದರೆ ಇದರ ಮೆಚುರಿಟಿ ಅವಧಿ 15 ವರ್ಷಗಳು. ಈ 15 ವರ್ಷಗಳಲ್ಲಿ ನೀವು ಸಾಕಷ್ಟು ಆದಾಯ ಗಳಿಸುವುದರ ಜೊತೆಗೆ ಇನ್ನೊಂದಿಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಹಾಗಾಗಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡಲು ನೀವು ಬಯಸಿದರೆ ಅದರಿಂದ ಹೆಚ್ಚು ಪ್ರಯೋಜನಗಳು ಯಾವವು ಎಂಬುದನ್ನು ತಿಳಿದುಕೊಳ್ಳಬೇಕು.
ಮುಕ್ತಾಯದ ನಂತರ ಹಣ ಹಿಂಪಡೆಯುವುದು:
ಇದು ಸಾಮಾನ್ಯ ವಿಧಾನವಾಗಿದೆ ನೀವು ಎಲ್ಲೇ ಹೂಡಿಕೆ ಮಾಡಿದರು ಅದರ ಮುಕ್ತಾಯದ ಅವಧಿಯ ನಂತರ ಅದಕ್ಕೆ ಸಿಗುವ ಬಡ್ಡಿ ಹಾಗೂ ನೀವು ಹೂಡಿಕೆ ಮಾಡಿದ ಹಣ ಜೊತೆಗೆ ಬೋನಸ್ (Bonous) ಸೇರಿಸಿ ಒಂದಷ್ಟು ಹಣವನ್ನು ಹಿಂಪಡೆಯಬಹುದು. 15 ವರ್ಷಗಳ ನಂತರ ಬಡ್ಡಿ ಹಾಗೂ ಅಸಲು ಸೇರಿ ಭಾರಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಬಹುದು. ಇಲ್ಲಿ ವಿಶೇಷವೇನೆಂದರೆ ಪಿಪಿಎಫ್ (PPF) ನಲ್ಲಿ ಹೂಡಿಕೆ ಮಾಡಿದರೆ ಬಡ್ಡಿ ಅಥವಾ ಅಸಲು ಯಾವುದಕ್ಕೂ ತೆರಿಗೆ ಪಾವತಿಸುವ ಅಗತ್ಯವಿಲ್ಲ. ನೀವು ಹೂಡಿಕೆ ಮಾಡಿದ ವರ್ಷಕ್ಕೂ ಕೂಡ ಆದಾಯ ತೆರಿಗೆ ಪಾವತಿ ಮಾಡಬೇಕಾಗಿಲ್ಲ.
15 ವರ್ಷಗಳ ನಂತರ ಹೂಡಿಕೆ ಮುಂದುವರಿಸುವುದು:
advertisement
PPF ನಲ್ಲಿ ಹೂಡಿಕೆ ಮಾಡಿದರೆ ಈ ಯೋಜನೆ 15 ವರ್ಷಗಳಲ್ಲಿ ಮೆಚೂರ್ ಆಗುತ್ತದೆ ಆದರೆ ನೀವು ಮತ್ತೆ ಐದು- ಐದು ವರ್ಷಗಳಿಗೆ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗಬಹುದು. ಆದರೆ ನೀವು ಪಿಪಿಎಫ್ ಖಾತೆ (PPF Account) ಮುಕ್ತಾಯಕ್ಕೂ ಒಂದು ವರ್ಷ ಮೊದಲೇ ವಿಸ್ತರಣಾ ಅವಧಿಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿಸ್ತರಣೆಯ ಸಮಯದಲ್ಲಿಯೂ ಕೂಡ ನೀವು ನಿಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆಯಬಹುದು ಇದಕ್ಕೆ ಯಾವುದೇ ನಿಯಮಗಳು ಕೂಡ ಅನ್ವಯವಾಗುವುದಿಲ್ಲ.
ಹೂಡಿಕೆ ಇಲ್ಲದೆ ಖಾತೆ ನಿರ್ವಹಣೆ:
ಪಿಪಿಎಫ್ ಖಾತೆ 15 ವರ್ಷಗಳಿಗೆ ಮೆಚ್ಯೂರ್ ಆದರೂ ಕೂಡ ನೀವು ಅದನ್ನು ಮತ್ತೆ ಐದು ವರ್ಷಗಳ ಅವಧಿಗೆ ಮುಂದುವರಿಸಿಕೊಂಡು ಹೋಗಬಹುದು ಒಂದು ವೇಳೆ ನೀವು ಯೋಜನೆ ಮುಗಿದ ನಂತರವೂ ಹಣ ಹಿಂಪಡೆದುಕೊಂಡಿಲ್ಲ. ಹಾಗೆ ವಿಸ್ತರಿಸಲು ಬ್ಯಾಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಿಲ್ಲ ಎಂದಾದರೂ ಕೂಡ ಈ ಖಾತೆ ಕಾರ್ಯನಿರ್ವಹಿಸುತ್ತದೆ ಅಂದರೆ ಮತ್ತೆ ಮುಂದಿನ ಐದು ವರ್ಷಗಳವರೆಗೆ ಈ ಯೋಜನೆ ಮುಂದುವರೆಯುತ್ತದೆ. ಹಾಗಾಗಿ ನೀವು ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಸಾರ್ವಜನಿಕ ಭವಿಷ್ಯ ನಿಧಿ ಖಾತೆ ತೆರೆಯುವುದು ಹೇಗೆ:
ಸರ್ಕಾರಿ ಅಥವಾ ಖಾಸಗಿ ಬ್ಯಾಂಕುಗಳಲ್ಲಿ ನೀವು ಪಿಪಿಎಫ್ ಖಾತೆಯನ್ನು ತೆರೆಯಬಹುದು. ಅಷ್ಟೇ ಅಲ್ಲ ಅಂಚೆ ಕಚೇರಿ (Post Office) ಯಲ್ಲಿಯೂ ಕೂಡ ಖಾತೆ ತೆರೆಯಲು ಅವಕಾಶವಿದೆ. ಅಪ್ರಾಪ್ತ ವಯಸ್ಕ ಬಾಲಕ ಬಾಲಕಿಯರೂ ಕೂಡ ಪಿಪಿಎಫ್ ಖಾತೆ ತೆರೆಯಬಹುದು. ಆದರೆ ಅವರಿಗೆ 18 ವರ್ಷ ಆಗುವವರೆಗೆ ಪೋಷಕರು ಆ ಖಾತೆಯನ್ನು ನಿರ್ವಹಿಸಬೇಕು.
PPF Account ತೆರೆದರೆ ಸಿಗುವ ಹಣ ಎಷ್ಟು:
ಸಾರ್ವಜನಿಕ ಭವಿಷ್ಯ ನೀತಿ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಿದರೆ ವರ್ಷಕ್ಕೆ 7.1% ನಷ್ಟು ಬಡ್ಡಿ ಪಡೆದುಕೊಳ್ಳಬಹುದು. ಇದೇ ಬಡ್ಡಿದರ 15 ರಿಂದ 20 ವರ್ಷಗಳ ಕಾಲ ಖಾತೆ ತೆರೆದರು ಮುಂದುವರೆಯುತ್ತದೆ. ಹಾಗಾಗಿ ನೀವು ಹಣ ಹಿಂಪಡೆಯುವ ಹೊತ್ತಿಗೆ ದೊಡ್ಡ ಮೊತ್ತದ ಹಣವನ್ನು ಪಡೆಯುತ್ತೀರಿ.
advertisement