Karnataka Times
Trending Stories, Viral News, Gossips & Everything in Kannada

Marriage Certificate: ನವದಂಪತಿಗಳು ಈ ಕೆಲಸ ಮಾಡದೆ ಇದ್ದರೆ ಮದುವೆ ಅಮಾನ್ಯ ಎನಿಸಿಕೊಳ್ಳಬಹುದು! ಹೊಸ ರೂಲ್ಸ್

advertisement

ಒಬ್ಬ ಹುಡುಗ ಹುಡುಗಿ ಮದುವೆಯಾಗುವುದೇ ಸುಖವಾಗಿ ಒಟ್ಟಾಗಿ ಜೀವನ ನಡೆಸಬೇಕು ಎನ್ನುವ ಕಾರಣಕ್ಕೆ. ಆದರೆ ಇದೇ ವಿಚಾರದಲ್ಲಿ ಕೆಲವು ಆತಂಕಕಾರಿ ಘಟನೆಗಳು ಕೂಡ ನಡೆದು ಹೋಗುತ್ತವೆ ಉದಾಹರಣೆಗೆ ನಾವಿಬ್ಬರೂ ಗಂಡ ಹೆಂಡತಿ ಎಂದು ಹೇಳಿಕೊಂಡು ಸಾಕಷ್ಟು ಜನ ಇತರರಿಗೆ ಮೋಸ ಮಾಡಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.

ಗಂಡ ಹೆಂಡತಿ ಎಂದು ಹೇಳಿಕೊಂಡು ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕ್ (Bank) ನಲ್ಲಿ ಅಥವಾ ಫೈನಾನ್ಸ್ (Finance) ಸಂಸ್ಥೆಗಳಲ್ಲಿ ಲೋನ್ (Loan) ತೆಗೆದುಕೊಳ್ಳುವುದು, ಗಂಡ ಹೆಂಡತಿ ಎಂದು ಹೇಳಿಕೊಂಡು ಮನೆ ಬಾಡಿಗೆ (Home Rent) ಪಡೆಯುವುದು, ಕೆಲಸ ಪಡೆದುಕೊಳ್ಳುವುದು, ನಂತರ ವಂಚನೆ ಮಾಡಿ ಓಡಿ ಹೋಗುವುದು ಇಂತಹ ಪ್ರಕರಣಗಳು ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ನವದಂಪತಿಗಳಿಗೆ ಮಹತ್ವದ ನಿಯಮ ಒಂದನ್ನು ಘೋಷಿಸಿದೆ.

Marriage Certificate ಕಡ್ಡಾಯ:

ವಿದೇಶಕ್ಕೆ ಹೋಗುವುದಿದ್ದರೆ ಪಾಸ್ಪೋರ್ಟ್ (Passport), ವೀಸಾ (VISA) ಮಾಡಿಕೊಳ್ಳುವುದಿದ್ದರೆ ಗಂಡ ಹೆಂಡತಿ ಮ್ಯಾರೇಜ್ ಸರ್ಟಿಫಿಕೇಟ್ ಹೊಂದಿರಲೇಬೇಕು. ಅಷ್ಟೇ ಅಲ್ಲದೆ ಬ್ಯಾಂಕ್ ನಲ್ಲಿ ಜಂಟಿ ಖಾತೆ ತೆರೆಯುವುದಿದ್ದರೂ ಅದಕ್ಕೆ ಮದುವೆ ಪ್ರಮಾಣ ಪತ್ರ ಅತ್ಯಗತ್ಯ. ಕಾನೂನಿನ ಪ್ರಕಾರ ಮದುವೆಯ ವಿಚಾರದಲ್ಲಿ ಯಾವುದೇ ಸಮಸ್ಯೆ ಬಂದರೂ ಪರಿಹಾರ ಪಡೆದುಕೊಳ್ಳಬೇಕು ಅಂದರೆ ಅದಕ್ಕೂ ಕೂಡ ಅಧಿಕೃತವಾಗಿ ಗಂಡ ಹೆಂಡತಿ ಎಂದು ತೋರಿಸುವಂತಹ ಮದುವೆ ಪ್ರಮಾಣ ಪತ್ರ ಇರಬೇಕು. ಮದುವೆ ಪ್ರಮಾಣ ಪತ್ರ ಇಲ್ಲದೆ ಇದ್ದಲ್ಲಿ ಕಾನೂನಿನಲ್ಲಿ ಕೆಲವೊಮ್ಮೆ ಕೇಸ್ (ವಿಚ್ಛೇದನ) ನಡೆಯುವುದಿಲ್ಲ ಅಥವಾ ಅಂತಹ ಮದುವೆಯನ್ನು ಅಮಾನ್ಯ ಎಂದು ಪರಿಗಣಿಸಲ್ಪಡಬಹುದು.

advertisement

Marriage Certificate ಮಾಡಿಕೊಳ್ಳಲು ಬೇಕಾಗಿರುವ ದಾಖಲೆಗಳು:

ಮದುವೆ ಸರ್ಟಿಫಿಕೇಟ್ ಪಡೆದುಕೊಳ್ಳುವುದು ಬಹಳ ಅತ್ಯಗತ್ಯವಾಗಿದೆ. ಹಾಗಾಗಿ ಮದುವೆಯಾದ ತಕ್ಷಣ ಗಂಡ ಹೆಂಡತಿ ಮ್ಯಾರೇಜ್ ಸರ್ಟಿಫಿಕೇಟ್ ಗಾಗಿ ಅರ್ಜಿ ಸಲ್ಲಿಸಬೇಕು ಅಥವಾ ನೀವು ರಿಜಿಸ್ಟರ್ಡ್ ಮ್ಯಾರೇಜ್ (Registered Marriage) ಆಗಿದ್ದರು ಕೂಡ ಮ್ಯಾರೇಜ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಸಾಕ್ಷಿಯನ್ನು ಒದಗಿಸಬೇಕು. ಈ ಹಿಂದೆ ಮದುವೆ ನೋಂದಣಿ ಮಾಡಿಕೊಳ್ಳಲು ವಧು-ವರರು ಒಬ್ಬ ಸಾಕ್ಷಿಯನ್ನು ನೀಡಿದರೆ ಸಾಕಿತ್ತು ಆದರೆ ಈಗ ನಿಯಮ ಬದಲಾಗಿದ್ದು ಮದುವೆ ನೋಂದಣಿ ಮಾಡಿಕೊಳ್ಳಲು ಮೂವರು ಸಾಕ್ಷಿದಾರರನ್ನು ನೀಡಬೇಕು ಅಂದರೆ ಮೂರು ಸಾಕ್ಷಿದಾರರ ಸಹಿ ಕೂಡ ಅಷ್ಟೇ ಮುಖ್ಯ.

Biometric ನೋಂದಣಿ:

ಮದುವೆ ಸರ್ಟಿಫಿಕೇಟ್ (Marriage Certificate) ಮಾಡಿಸುವುದರಲ್ಲಿ ಕೂಡ ಡಿಜಿಟಲ್ ಸರ್ಟಿಫಿಕೇಟ್ (Digital Certificate) ಗೆ ಮಾನ್ಯತೆ ನೀಡಲಾಗುತ್ತದೆ. ಅಂದರೆ ನೋಂದಣಿ ಸಮಯದಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಲಾಗುತ್ತದೆ. ವಧು-ವರರ ಜೊತೆಗೆ ಸಾಕ್ಷಿ ಹೇಳಲು ಬಂದಿರುವ ಜನರ ಬೆರಳಚ್ಚು ಕೂಡ ತೆಗೆದುಕೊಳ್ಳಲಾಗುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ತನಗೂ ಈ ಮದುವೆಗೂ ಸಂಬಂಧವಿಲ್ಲ ಎಂದು ಸಾಕ್ಷಿ ಹಾಕಿದ ನಂತರ ವ್ಯಕ್ತಿ ಹೇಳುವಂತಿಲ್ಲ.

ಬಯೋಮೆಟ್ರಿಕ್ ಫಿಂಗರ್ ಪ್ರಿಂಟ್ (Biometric Finger Print) ಸರಿಯಾಗಿ ಮ್ಯಾಚ್ ಆಗದೆ ಇದ್ದರೆ ಮದುವೆ ರಿಜಿಸ್ಟರ್ ಕೂಡ ಆಗುವುದಿಲ್ಲ. ಹಾಗಾಗಿ ಮದುವೆ ಪ್ರಮಾಣ ಪತ್ರ ಪಡೆದುಕೊಳ್ಳಲು ಬಯೋಮೆಟ್ರಿಕ್ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಮದುವೆ ಮಾಡಿಕೊಳ್ಳುವ ಹುಡುಗ ಹುಡುಗಿ ಅಥವಾ ಮದುವೆ ಮಾಡಿಕೊಂಡ ನವದಂಪತಿ ಮುಖ್ಯವಾಗಿ ಮದುವೆ ಸರ್ಟಿಫಿಕೇಟ್ ಮಾಡಿಸಿಕೊಳ್ಳಿ ಜೊತೆಗೆ ಸರಿಯಾದ ಸಾಕ್ಷಾಧಾರರ ಸಹಿಯನ್ನು ಕೂಡ ಹಾಕಿಸಿಕೊಳ್ಳಿ.

advertisement

Leave A Reply

Your email address will not be published.