Karnataka Times
Trending Stories, Viral News, Gossips & Everything in Kannada

Samsung Galaxy: ನಿಜವಾದ DSLR ಕ್ಯಾಮರಾ ಕ್ಲಾರಿಟಿ ಇರುವ ಫೋನ್ ಕಡಿಮೆ ಬೆಲೆಗೆ!

advertisement

ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಕಂಪನಿ ಅತ್ಯುತ್ತಮ ಫೋನ್ ಗಳನ್ನು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ. ಸ್ಯಾಮ್ಸಂಗ್ (Samsung) ನ ಎಲ್ಲಾ ಎಂಡ್ರಾಯ್ಡ್ ಫೋನ್ (Android) ನಲ್ಲಿಯೂ ಅತ್ಯುತ್ತಮ ಫೀಚರ್ ಗಳನ್ನು ನೀಡಲಾಗುತ್ತಿದೆ. ಇದೀಗ ಬಿಡುಗಡೆ ಆಗಿರುವ ಫೋನ್, ಪಕ್ಕಾ DSLR ಕ್ಯಾಮರಾದಂತಹ ಕ್ಲಾರಿಟಿ ಕೊಡುತ್ತೆ, ಐಫೋನ್ (iPhone) ನಂತಹ ಲುಕ್ ಹೊಂದಿದೆ.

Samsung Galaxy M34 5G:

ಸ್ಯಾಮ್ಸಂಗ್ ಗ್ಯಾಲಕ್ಸಿ M34 5G (Samsung Galaxy M34 5G) ಸದ್ಯ ಮಾರುಕಟ್ಟೆಯಲ್ಲಿ ತನ್ನದೇ ಆಗಿರುವ ಕಮಾಲ್ ಮಾಡುತ್ತಿದೆ. ಇದರ ವಿನ್ಯಾಸ, ಫೀಚರ್ ಗಳು (Features) ಹಾಗೂ ವಿಶಿಷ್ಟ ತಂತ್ರಜ್ಞಾನ ಜನರಿಗೆ ಹೆಚ್ಚು ಇಷ್ಟವಾಗುತ್ತಿದೆ. ಹೊಸ ಫೋನಿನ ಕ್ಯಾಮೆರಾ ಕ್ಲಾರಿಟಿ ಅದ್ಭುತವಾಗಿದೆ.

Samsung Galaxy M34 5G Features:

ಮಿಡ್ ನೈಟ್ ಬ್ಲೂ (Midnight Blue), ವಾಟರ್ ಫಾಲ್ ಬ್ಲೂ (Water Fall Blue), ಪ್ರಿಸ್ಮ ಸಿಲ್ವರ್ (Prisma Silver) ಈ ಮೂರು ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಫೋನ್ ಹೆಚ್ ಡಿ ಪ್ಲಸ್ ರೆಸಲ್ಯೂಷನ್ ಹೊಂದಿದ್ದು , 6.5 ಇಂಚಿನ ಎಮೋಲೆಡ್ ಡಿಸ್ಪ್ಲೇ (AMOLED Display) ಹೊಂದಿದೆ. ಫೋನಿನ ಸುರಕ್ಷತೆಗಾಗಿ ಗೋರಿಲ್ಲ ಗ್ಲಾಸ್ ಕೂಡ ಅಳವಡಿಸಲಾಗಿದೆ.

Samsung Galaxy M34 5G Camera:

advertisement

ಸ್ಯಾಮ್ಸಂಗ್ ಗ್ಯಾಲಕ್ಸಿ M34 5G, ಡಿಎಸ್ಎಲ್ಆರ್ ನಂತಹ ಕ್ಯಾಮರಾ ಕ್ಲಾರಿಟಿ ಹೊಂದಿದೆ. OIS (Optimal Image Stabilization) ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ (Primary Camera) 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ (Ultra Wide) ಕ್ಯಾಮೆರಾ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹಾಗೂ ಮೈಕ್ರೋ ಸೆನ್ಸರ್ ಹೊಂದಿರುವ ಲೆನ್ಸ್ ಕೂಡ ಅಳವಡಿಸಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳ ಕ್ಲಾರಿಟಿ ಗಾಗಿ 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ (Front Camera) ನೀಡಲಾಗಿದೆ. ಈ ಫೋನಿನಲ್ಲಿ ಅಳವಡಿಸಲಾಗಿರುವ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯಿಂದ ಉತ್ತಮ ಗುಣಮಟ್ಟದ ಚಿತ್ರ ತೆಗೆಯಲು ಹಾಗೂ ವಿಡಿಯೋ ಮಾಡಲು ಸಹಾಯಕವಾಗುತ್ತದೆ. ಮೈಕ್ರೋ ಸಂವೇದಕದಿಂದಾಗಿ ಕ್ಲೋಸ್ ಅಪ್ ಶಾರ್ಟ್ ಗಳು ಕೂಡ ಬಹಳ ಕ್ಲಾರಿಟಿ ಹೊಂದಿರುತ್ತವೆ.

Samsung Galaxy M34 5G Battery:

ಈ ಫೋನ್ Exynos 1280 ಪ್ರೊಸೆಸರ್ ನಿಂದ ಚಾಲಿತವಾಗಿದ್ದು 6,000 mah ಬ್ಯಾಟರಿ ಹೊಂದಿದೆ. ಇದು 25 W ವೇಗದ ಚಾರ್ಜಿಂಗ್ ಬೆಂಬಲಿಸುವುದರಿಂದ ಕೆಲವೇ ನಿಮಿಷಗಳಲ್ಲಿ ಫೋನ್ ಸಂಪೂರ್ಣ ಚಾರ್ಜ್ ಮಾಡಬಹುದು.

Samsung Galaxy M34 5G Price:

ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಫೋನಿನ ಆರಂಭಿಕ ಬೆಲೆ 16,999 ರೂಪಾಯಿಗಳು. ಜುಲೈ ತಿಂಗಳಿನಿಂದಲೇ ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿದ್ದು ಅಮೆಜಾನ್ ಹಾಗೂ ಸ್ಯಾಮ್ ಸಾಂಗ್ ಶಾಪ್ ಗಳಲ್ಲಿ ಅಥವಾ ಸ್ಯಾಮ್ಸಂಗ್ ಆನ್ಲೈನ್ ಪೋರ್ಟಲ್ ಮೂಲಕ ಖರೀದಿ ಮಾಡಬಹುದಾಗಿದೆ. ಒಟ್ಟಿನಲ್ಲಿ ಅತ್ಯುತ್ತಮ ಕ್ಲಾರಿಟಿ ಇರುವ ಕ್ಯಾಮರಾ ಫೋನ್ ಅನ್ನು ನೀವು ಹುಡುಕುತ್ತಿದ್ದರೆ, ಸ್ಯಾಮ್ಸಂಗ್ ಗ್ಯಾಲಕ್ಸಿ M34 5G ಅತ್ಯುತ್ತಮ ಆಯ್ಕೆಯಾಗಲಿದೆ.

Buy From Here: 👉 Samsung Galaxy M34 5G

advertisement

Leave A Reply

Your email address will not be published.