Karnataka Times
Trending Stories, Viral News, Gossips & Everything in Kannada

ICC: ವಿಶ್ವಕಪ್‌ ಮುಗಿದ ಬೆನ್ನಲ್ಲೇ ಕ್ರಿಕೇಟ್ ನಲ್ಲಿ ಹೊಸ ನಿಯಮ ಜಾರಿಗೆ ತಂದ ಐಸಿಸಿ

advertisement

ಇತ್ತೀಚೆಗೆ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಪರಾಭವಗೊಂಡ ಹಿನ್ನೆಲೆಯಲ್ಲಿ ಕ್ರಿಕೇಟ್ ಪಂದ್ಯಗಳಲ್ಲಿ ನಿಧಾನಗತಿ ಬೌಲಿಂಗ್‌ ತಡೆಯಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (International Cricket Council) ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ .

ಇದೇ ಮೊದಲ ಬಾರಿಗೆ ಏಕದಿನ ಹಾಗೂ ಅಂತರ ರಾಷ್ಟೀಯ ಟಿ20 ಪಂದ್ಯಗಳಲ್ಲಿ ಓವರ್‌ಗಳ ಮಧ್ಯೆ ಕಾಲಮಿತಿಯನ್ನು ಅಳವಡಿಸಲು ಮಂಗಳವಾರದಂದು ನಡೆದ ಐಸಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಐಸಿಸಿಯ ಈ ಹೊಸ ನಿಯಮದ ಕುರಿತಾಗಿ ಕ್ರಿಕೆಟ್‌ ವಲಯದಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನು ಡಿಸೆಂಬರ್‌ 2023ರಿಂದ ಏಪ್ರಿಲ್‌ 2024ರ ವರೆಗೂ ಪ್ರಾಯೋಗಿಕವಾಗಿ ಏಕದಿನ ಹಾಗೂ ಅಂತರ ರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ ಸ್ಟಾಪ್‌ ಕ್ಲಾಕ್‌ (Stopclock) ಬಳಕೆಯಾಗಲಿದೆ. ಅಂದರೆ ಇನ್ನಿಂಗ್ಸ್‌ವೊಂದರಲ್ಲಿ ಪ್ರತಿ ಓವರ್‌ ಮುಕ್ತಾಯಗೊಂಡ 60 ಸೆಕೆಂಡ್‌ಗಳಲ್ಲಿ ಮುಂದಿನ ಓವರ್‌ ಆರಂಭಿಸಲು ಬೌಲರ್‌ ವಿಫಲರಾದರೆ ತಂಡಕ್ಕೆ ದಂಡ ಬೀಳಲಿದೆ. 3 ಬಾರಿ 60 ಸೆಕೆಂಡ್‌ ಕಾಲಮಿತಿ ಮೀರಿದರೆ ತಂಡಕ್ಕೆ 5 ರನ್‌ ಪೆನಾಲ್ಟಿ ಹಾಕಲಾಗುತ್ತದೆ ಎಂದು ಐಸಿಸಿ ಹೇಳಿದೆ.

advertisement

ಇಷ್ಟು ಮಾತ್ರವಲ್ಲ ಒಂದು ವೇಳೆ ತಂಡ ಮೊದಲು ಬೌಲ್‌ ಮಾಡಿದಾಗ ನಿಯಮ ಉಲ್ಲಂಘನೆಯಾದರೆ, ತಂಡಕ್ಕೆ ಸಿಕ್ಕ ಗುರಿಗೆ 5 ರನ್‌ ಹೆಚ್ಚಿಗೆ ಸೇರ್ಪಡೆಗೊಳಿಸಲಾಗುತ್ತದೆ. ಒಂದು ವೇಳೆ ತಂಡ ಗುರಿ ಉಳಿಸಿಕೊಳ್ಳುವಾಗ ನಿಯಮ ಉಲ್ಲಂಘನೆಯಾದರೆ, ಎದುರಾಳಿ ತಂಡಕ್ಕೆ ನೀಡಿರುವ ಗುರಿಯಲ್ಲಿ 5 ರನ್‌ ಕಡಿಮೆಗೊಳಿಸಲಾಗುತ್ತದೆ ಎಂದು ಸೂಚಿಸಲಾಗಿದೆ.ಇನ್ನು ಇತ್ತೀಚೆಗೆ ಐಸಿಸಿ, ನಿರ್ದಿಷ್ಟ ಸಮಯದೊಳಗೆ ಓವರ್‌ ಮುಗಿಸದಿದ್ದರೆ 30 ಯಾರ್ಡ್‌ ವೃತ್ತದೊಳಗೆ ಒಬ್ಬ ಆಟಗಾರ ಹೆಚ್ಚುವರಿಯಾಗಿ ಇರಬೇಕು ಎನ್ನುವ ನಿಯಮವನ್ನು ಜಾರಿ ಮಾಡಿತ್ತು. ಇಷ್ಟಾದರೂ ತಂಡಗಳು ಓವರ್‌-ರೇಟ್‌ನಲ್ಲಿ ಹಿಂದೆ ಬಿದ್ದಿರುವ ಕಾರಣ ಐಸಿಸಿ ರನ್ ಪೆನಾಲ್ಟಿ ಹಾಕಲು ನಿರ್ಧರಿಸಿದೆ.

ಅಷ್ಟಕ್ಕೂ ಅಂತಾರಾಷ್ಟ್ರೀಯ ಪಂದ್ಯಗಳು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಳ್ಳುತ್ತಿಲ್ಲ. ಓವರ್‌ಗಳ ನಡುವೆ ತಂಡಗಳು ಅನಗತ್ಯವಾಗಿ ಸಮಯ ವ್ಯರ್ಥ ಮಾಡುವುದು ಹೆಚ್ಚುತ್ತಿರುವ ಕಾರಣ, ಕಠಿಣ ನಿಯಮವನ್ನು ಜಾರಿ ಮಾಡುವಂತೆ ಅನೇಕರು ಐಸಿಸಿಯನ್ನು ಒತ್ತಾಯಿಸುತ್ತಿದ್ದರು ಹಾಗಾಗಿ ಈ ಹೊಸ ನಿಯಮ ಜಾರಿಗೆ ತರಲು ಐಸಿಸಿ ಮುಂದಾಗಿದೆ.

advertisement

Leave A Reply

Your email address will not be published.