Karnataka Times
Trending Stories, Viral News, Gossips & Everything in Kannada

RBI: ಕೆವೈಸಿ ಮೋಸಕ್ಕೆ ಹೋಗುವ ಬ್ಯಾಂಕಿನ ಗ್ರಾಹಕರಿಗೆ ಎಚ್ಚರಿಕೆಯ ಪ್ರಕಟಣೆ ನೀಡಿದ ಆರ್ ಬಿಐ!

advertisement

ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಕೂಡ ಇದ್ದೇ ಇರುತ್ತಾರೆ. ಇತ್ತೀಚಿನ ದಿನದಲ್ಲಿ ಮೋಸ ಮಾಡುವುದು ಮೋಸ ಹೋಗುವುದು ಹಣಕಾಸಿನ ವಿಚಾರದಲ್ಲಿ ಎಂದರೂ ತಪ್ಪಾಗದು. ಬ್ಯಾಂಕಿನ ಅಗತ್ಯ ಮಾಹಿತಿ ಪಡೆದು ಸೈಬರ್ ಕ್ರೈಂ ಮಾಡುವ ಅದೆಷ್ಟೋ ಪ್ರಕರಣವನ್ನು ನಾವು ದಿನ ನಿತ್ಯ ನೋಡುತ್ತಲೇ ಇರುತ್ತೇವೆ. ಕೆಲಸ ಕೊಡುವುದಾಗಿ, ಪಾರ್ಟ್ ಟೈಂ ಜಾಬ್ ನೀಡುವುದಾಗಿ ತಿಳಿಸಿ ಆನ್ಲೈನ್ ಮೂಲಕ ಹಣ ಪಡೆದು ಮೋಸ ಮಾಡಲಾಗುತ್ತದೆ ಹಾಗಾಗಿ ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳುವುದು ಅತ್ಯವಶ್ಯಕವಾಗಿದೆ.

ಮೋಸದ ಜಾಲ:

 

 

KYC ಯನ್ನು ನವೀಕರಿಸುವ ಬಗ್ಗೆ ಇತ್ತೀಚಿಗೆ ಬ್ಯಾಂಕ್ ನಿಂದ ಅಧೀಕೃತ ಮಾಹಿತಿ ಬರದೇ ಇದ್ದರೂ ಸೈಬರ್ ಕಳ್ಳರು ಬ್ಯಾಂಕಿನಿಂದ ಬಂದ ಮಾಹಿತಿ ಎಂದು ಬಿಂಬಿಸಿ ಗ್ರಾಹಕರ ಬ್ಯಾಂಕಿನ ಮಾಹಿತಿ ಪಡೆದು ಮೋಸಮಾಡುತ್ತಲೇ ಇದ್ದಾರೆ. ಬ್ಯಾಂಕಿನ ಗ್ರಾಹಕರಿಂದ ಕೆವೈಸಿ ಅಪ್ಡೇಟ್ ಹೆಸರಲ್ಲಿ ಸಾಕಷ್ಟು ದೂರು ಬಂದಿದೆ. ಹಾಗಾಗಿ ಕೇಂದ್ರ ಬ್ಯಾಂಕ್ ಆದ RBI ವಿಶೇಷ ಪತ್ರಿಕಾ ಪ್ರಕಟನೆ ಮೂಲಕ ಗ್ರಾಹಕರಿಗೆ ಜಾಗೃತಿ ಸಂದೇಶ ನೀಡಿದೆ.

advertisement

ವಿಶೇಷ ಪತ್ರಿಕಾ ಪ್ರಕಟಣೆ:

ಆರ್ ಬಿಐ (RBI) ನ ಮೂಲಕ ಗ್ರಾಹಕರಿಗೆ ವಿಶೇಷ ಪತ್ರಿಕಾ ಪ್ರಕಟನೆಯಲ್ಲಿ ಬ್ಯಾಂಕ್ ನಿಂದ KYC ಅಪ್ಡೇಟ್ ಹೆಸರಲ್ಲಿ ಮಾಡೋ ವಂಚನೆ ಬಗ್ಗೆ ಎಚ್ಚರಿಕೆ ಅತ್ಯಗತ್ಯವಾಗಿದೆ.  ಗ್ರಾಹಕರಿಗೆ ಬ್ಯಾಂಕ್ ನಿಂದಲೇ ಫೋನ್ , ಮೆಸೇಜ್ ಅಥವಾ ಮೇಲ್ ಬಂದಿದೆ ಎಂಬರ್ಥದಲ್ಲಿ ಬಿಂಬಿಸಲಾಗುತ್ತದೆ. ಬಳಿಕ ಅವರ ಬ್ಯಾಂಕ್ ಖಾತೆ ಸಂಬಂಧಿತ ವೈಯಕ್ತಿಕ ಮಾಹಿತಿ, ಒಟಿಪಿ ಇತರೆ ಕೇಳಲಾಗುತ್ತದೆ. ಅದನ್ನು ಪಡೆಯುವ ಸಲುವಾಗಿ  ಅನಧಿಕೃತ ಲಿಂಕ್ ಇತರ ಪ್ರಯತ್ನವೂ ಪಡಲಾಗುತ್ತದೆ.

ಭಯ ಪಡಬಾರದು:

ನೀವು ಒಟಿಪಿ ಹೇಳಲಾರೆವು ಎಂದು ತಿಳಿಸಿದ್ರೆ ನಿಮ್ಮ ಖಾತೆ ನಿಷ್ಕ್ರಿಯ ಆಗಲಿದೆ, ಹೋಲ್ಡ್ ಮಾಡುತ್ತೇವೆ. ಬ್ಯಾಂಕ್ ವ್ಯವಹಾರ ಸ್ಥಗಿತ ಆಗಲಿದೆ ಎಂಬ ಅನೇಕ ಹೆದರಿಕೆಯ ಅಂಶಗಳನ್ನು ನಿಮಗೆ ತಿಳಿಸುತ್ತಾರೆ. ಆಗ ನೀವು ಭಯಗೊಂಡು ಮಾಹಿತಿ ನೀಡಿದರೆ ಆಗ ಸೈಬರ್ ಕಳ್ಳರು ಲಾಗಿನ್ ಆಗಿ ನಿಮ್ಮ ಬ್ಯಾಂಕ್ ಖಾತೆ ಹ್ಯಾಕ್ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಹೆದರುವ ಅಗತ್ಯವಿಲ್ಲ ನೀವು ಎಚ್ಚೆತ್ತುಕೊಳ್ಳುವ ಮೂಲಕ ಅಪಾಯದಿಂದ ಪಾರಾಗಬಹುದು. ನೀವು ಕೆವೈಸಿ ಅಪ್ಡೇಟ್ ಮಾಡುವಾಗ ನೇರವಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನೇ ಸಂಪರ್ಕಿಸಿ. ಅಧೀಕೃತ ವೆಬ್ಸೈಟ್ ಮೂಲಕವೇ ವ್ಯವಹಾರ ಮಾಡಿ ಇಲ್ಲವಾದರೇ ಅಪಾಯವಾಗುವ ಸಾಧ್ಯತೆ ಇದೆ ಎಂದು ಆರ್ ಬಿ ಐ ತಿಳಿಸಿದೆ.

ನಿಮಗೆ ಯಾವುದೇ ಖಾಸಗಿ ವ್ಯಕ್ತಿ ಈ ವಿಧವಾಗಿ ಮೋಸ ಮಾಡಲು ಪ್ರಯತ್ನ ಪಟ್ಟಿದ್ದು ತಿಳಿದರೂ ನಿಮ್ಮ ಬ್ಯಾಂಕ್ ಅಥವಾ ಹಣ ಕಾಸು ಸಂಸ್ಥೆಗೆ ಮಾಹಿತಿ ನೀಡಿಬೇಕು. ಸೈಬರ್ ಕ್ರೈಂ ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡುವ ಮೂಲಕ www.cybercrime.gov.in ಮೂಲಕ ಇಲ್ಲವೇ ಸಹಾಯಕ್ಕಾಗಿ 1930 ಅನ್ನು ಡಯಲ್ ಮಾಡಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ‌ನೀಡುವಂತೆ ಆರ್ ಬಿಐ ಮೂಲಕ ಗ್ರಾಹಕರಿಗೆ ಮಾರ್ಗಸೂಚಿ ನೀಡಿದೆ.

advertisement

Leave A Reply

Your email address will not be published.