Karnataka Times
Trending Stories, Viral News, Gossips & Everything in Kannada

Bike Loan: ಈ ಬ್ಯಾಂಕ್ ನಲ್ಲಿ ಈ ಎಲ್ಲ ದಾಖಲಾತಿ ನೀಡಿದರೆ ಶೀಘ್ರ ಬೈಕ್ ಲೋನ್ ಸಿಗಲಿದೆ!

advertisement

ಇತ್ತೀಚಿನ ದಿನದಲ್ಲಿ ಕಾರು ಬೈಕ್ ಕೊಳ್ಳಲು ಗ್ರಾಹಕರು ಅಧಿಕ ಪ್ರಾಶಸ್ತ್ಯ ನೀಡುತ್ತಲೇ ಇದ್ದಾರೆ. ಹಾಗಾಗಿ ತಮಗಿಷ್ಟವಾದ ವಾಹನ ಕೊಳ್ಳುವಾಗ ಯಾವ ಹಣಕಾಸಿನ ಸಂಸ್ಥೆ ಅಥವಾ ಬ್ಯಾಂಕ್ ಎಷ್ಟು ಪ್ರಮಾಣದಲ್ಲಿ ಉಪಯುಕ್ತವಾಗುವ ಬಡ್ಡಿದರದಲ್ಲಿ ಸಾಲ ನೀಡುತ್ತದೆ ಎಂಬ ಆಧಾರದ ಮೇಲೆ ಕೆಲವರು ಸಾಲ (Loan) ಪಡೆಯುತ್ತಾರೆ. ದ್ವಿಚಕ್ರ ವಾಹನ ಕೊಳ್ಳುವವರಿಗೆ ಆ್ಯಕ್ಸಿಸ್ ಬ್ಯಾಂಕಿನ ಲೋನ್ ಸಿಸ್ಟಂ ಹಚ್ಚು ಗ್ರಾಹಕ ಸ್ನೇಹಿಯಾಗಿದ್ದು ಬಹಳ ಅನುಕೂಲ ಆಗಲಿದೆ.

ಆ್ಯಕ್ಸಿಸ್ ಬ್ಯಾಂಕಿನಲ್ಲಿ (Axis Bank) ದ್ವಿಚಕ್ರ ವಾಹನದ ಲೋನ್ (Bike Loan) ಮಾಡುವಾಗ 12 ರಿಂದ 60ತಿಂಗಳ ವರೆಗಿನ ಆಯ್ಕೆ ಅತ್ಯುತ್ತಮವಾಗಿದೆ. ಹಾಗಿದ್ದರೂ ಎಲ್ಲ ಬ್ಯಾಂಕ್ ನಂತೆ ಇಲ್ಲಿಯೂ ಕೂಡ ಕೆಲ ಅಗತ್ಯ ದಾಖಲೆಗಳನ್ನು ಹೆಚ್ಚು ಪರಿಶೀಲನೆ ಮಾಡಲಾಗುತ್ತಿದ್ದು ಸರಿಯಾದ ದಾಖಲಾತಿ ನೀಡಿದರೆ ನಿಮಗೆ ಲೋನ್ ಸಿಗಲಿದೆ.  ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

 

 

ಈ ದಾಖಲೆಗಳು ಅಗತ್ಯ:

advertisement

  • ನೀವು ಕಂಪೆನಿ ಕೆಲಸ ದಾರರಾಗಿದ್ದಾಗ ಲೋನ್ ಪಡೆಯುವ ಪ್ರಕ್ರಿಯೆಗೆ ಕೆಲ ಅಗತ್ಯ ದಾಖಲೆನೋಡುತ್ತಾರೆ. ಅದರಲ್ಲಿ ವಿಳಾಸ ಪುರಾವೆ, ಕೆವೈಸಿ ದಾಖಲೆಗಳು, ಉದ್ಯೋಗ ಪುರಾವೆ ಸೇರಿದೆ.ಉದ್ಯೋಗದ ಆಧಾರದ ಮೇಲೆ ನಿಮ್ಮ ಪುರಾವೆ ಬದಲಾದರೆ ಅಂತಹ ದಾಖಲಾತಿ ಕೂಡ ನೀಡಬೇಕು.
  • ನೀವು ಉದ್ಯೋಗಸ್ಥರಾಗಿದ್ದು ವೇತನ ಪಡೆಯುವವರಾಗಿದ್ದರೆ PAN Card, Aadhaar Card, DL, ಮತದಾರರ ಗುರುತು ಚೀಟಿ ಇತ್ಯಾದಿ ಅಗತ್ಯ ದಾಖಲಾತಿ ನೀಡಬೇಕು.
  • ವಿಳಾಸದ ಪುರಾವೆ ಯಾವುದೆಲ್ಲ ಎಂದು ನೀವು ಗಮನಿಸುವುದಾದರೆ ಡಿಎಲ್, Passport, ಆಧಾರ್ ಕಾರ್ಡ್, ಮತದಾರರ ಗುರುತುಚೀಟಿ ಇತ್ಯಾದಿ ಪರಿಗಣಿಸಲಾಗುತ್ತದೆ. ಅದರ ಜೊತೆಗೆ ಕಚೇರಿ ಕೆಲಸ ಮಾಡುವವರು ಕಚೇರಿಯ ವಿಳಾಸದ ಪುರಾವೆ ನೀಡಲೇ ಬೇಕು.
  • ಇಲ್ಲಿ ವಯಸ್ಸಿನ ಮಿತಿ ಪರಿಗಣಿಸುವುದಾದರೆ 21 ರಿಂದ 58ವರ್ಷ ವಯಸ್ಸಿನವರಿಗೆ ಸಾಲ ದೊರೆಯಲಿದೆ. ಕನಿಷ್ಟ ಒಂದು ವರ್ಷದ ಕೆಲಸದ ಅನುಭವವಾದರೂ ಇರಬೇಕು.

ಸ್ವ ಉದ್ಯೋಗಿಯಾದರೆ:

EMI ಕಂತಿನ ಪ್ರಕಾರ ದ್ವಿಚಕ್ರ ವಾಹನದ ಲೋನ್ (Bike Loan) ಪಡೆಯುವ ಸ್ವ ಉದ್ಯೋಗಿಗಳಿಗೂ ಕೆಲ ದಾಖಲೆಗಳನ್ನು ಸಲ್ಲಿಸಲೇ ಬೇಕು. PAN Card, Aadhaar Card, DL, ಮತದಾರರ ಗುರುತು ಚೀಟಿ ಇತ್ಯಾದಿ ಅಗತ್ಯ ದಾಖಲಾತಿ ನೀಡಬೇಕು. ಅದೇ ರೀತಿ ಇಲ್ಲಿ ಕೂಡ ಭಾರತೀಯ ವಾಸ್ತವ್ಯ ಪುರಾವೆ ಹೇಳ ಸಿಗುವ ದಾಖಲೆಗಳನ್ನು ನೀಡಲೇ ಬೇಕು. 21 ವರ್ಷದಿಂದ 65 ವರ್ಷದ ವರೆಗೆ ವಯೋಮಿತಿ ಯವರು ಕನಿಷ್ಠ ಒಂದು ವರ್ಷದ ವ್ಯಾಪಾರ ಅನುಭವ ಹೊಂದಿರಬೇಕು.

ಒಟ್ಟಾರೆಯಾಗಿ ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ನಿಮಗೆ ತ್ವರಿತ ಗತಿಯಲ್ಲಿ ಸಾಲ ಸಿಗಲಿದ್ದರೂ ಸಾಲದ ಮೇಲೆ ವಿಧಿಸಲಾಗುವ ಬಡ್ಡಿದರ ಎಲ್ಲ ಪರಿಶೀಲನೆ ಮಾಡಿಕೊಳ್ಳುವುದು ಅತ್ಯಗತ್ಯ. ವಾಹನ ಖರೀದಿ ಮಾಡುವಾಗ ನೀವು ಯಾವುದೇ ಹಣ ಕಾಸು ಸಂಸ್ಥೆ ಮೊರೆ ಹೋಗುವ ಮುನ್ನ ರಕ್ಷಣಾತ್ಮಕ ವಿಚಾರವಾಗಿ ಹಾಗೂ ಬಡ್ಡಿದರದ ಪ್ರಮಾಣ ಇತ್ಯಾದಿ ಪರಿಶೀಲನೆ ಮಾಡಿಕೊಂಡ ಬಳಿಕ ಸಾಲ ಪಡೆಯುವುದು ಒಂದು ರೀತಿ ಅತ್ಯುತ್ತಮ ಮಾರ್ಗವಾಗಿದೆ.

advertisement

Leave A Reply

Your email address will not be published.