Karnataka Times
Trending Stories, Viral News, Gossips & Everything in Kannada

Father’s Property: ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲು ಯಾವಾಗ ಸಿಗುವುದಿಲ್ಲ ಗೊತ್ತಾ.?

advertisement

ಸಾಮಾನ್ಯವಾಗಿ ಆಸ್ತಿಯಲ್ಲಿ ಎರಡು ಬಗೆ ಒಂದು ಸ್ವಯಾರ್ಜಿತ ಅಂದರೆ ಹಿಂದಿನವರಿಂದ ಬರದೇ ನಾವೇ ಮಾಡಿದ್ದು. ಕೊಂಡುಕೊಂಡಿರುವ ಆಸ್ತಿ. ಇನ್ನೊಂದು ಪಿತ್ರಾರ್ಜಿತ ಆಸ್ತಿ (Inherited Property). ಇದು ಹಳೆಯ ತಲೆಮಾರಿನಿಂದ ಬಂದಿದ್ದು. 2005ರಲ್ಲಿ ಭಾರತದ ಕಾನೂನಿನಲ್ಲಿ ಆಸ್ತಿ (Property) ವಿಚಾರವಾಗಿ ಒಂದು ತಿದ್ದುಪಡಿ ಆಯಿತು. ಆ ಅಮೆಂಟ್ ಮೆಂಟ್ ಪ್ರಕಾರ ಹೆಣ್ಣು ಮಕ್ಕಳೂ ಕೂಡ ತಂದೆ ಆಸ್ತಿಯಲ್ಲಿ ಸಮಾನ ಹಕ್ಕುದಾರರು ಎಂದು ಆದೇಶ ಹೊರಡಿಸಲಾಯಿತು. ಆದರೆ ಅದರಲ್ಲಿ ಹಲವಾರು ಗೊಂದಲಗಳು ಜನರಿಗೆ ಏರ್ಪಟ್ಟಿತ್ತು. ಸುದ್ದಿ ಮಾಧ್ಯಮದಲ್ಲಿ, ದಿನಪತ್ರಿಕೆಗಳು ಮತ್ತು ಬಾಯಿಂದ ಬಾಯಿಗೆ ಪ್ರಚಾರ ಆಗುತ್ತಿದ್ದ ಹಾಗೆ ಎಲ್ಲರೂ ಕೂಡ ತಮ್ಮ ತಂದೆ ಆಸ್ತಿಯಲ್ಲಿ ಪಾಲು ಕೇಳಲು ಶುರು ಮಾಡಿದರು.

ಹೊಸ ನಿಯಮಗಳೇನು?

 

 

ತಂದೆ ಆಸ್ತಿ (Father’s Property) ಯಲ್ಲಿ ಪಾಲು ಬೇಕು ಎಂದು ನ್ಯಾಯಾಲಯದಲ್ಲಿ ಧಾವೆ ಹೂಡಲು ಶುರು ಮಾಡಿದರು. 2020 ರಲ್ಲಿ ಹೊಸ ತೀರ್ಪು ಬರುವವರೆಗೂ ಕೂಡ ಈ ಪಾರ್ಟಿಶನ್ ವಿಷಯದಲ್ಲಿ ಸಾಕಷ್ಟು ಗೊಂದಲಗಳು ಇತ್ತು, ಒಂದು ವೇಳೆ 2005 ಕ್ಕೆ ಹಿಂದೆ ತಂದೆ ತೀರಿಹೋಗಿದ್ದರೆ ಆಗಲು ಹಕ್ಕು ಇರುತ್ತದೆಯಾ ಮತ್ತು ಇನ್ನಿತರ ವಿಚಾರವಾಗಿ ಇದ್ದ ಎಲ್ಲಾ ಅನುಮಾನಗಳಿಗೂ 2020ರಲ್ಲಿ ಬಂದ ತೀರ್ಪು ಉತ್ತರ ಆಗಿತ್ತು.

ಅದರ ಪ್ರಕಾರ ಹೇಳಿರುವುದು ಏನೆಂದರೆ 2005ರ ಹಿಂದೆ ತಂದೆ ತೀರಿ ಹೋಗಿದ್ದರು ಅಥವಾ 2005 ರಿಂದ ನಂತರ ತಂದೆ ತೀರಿಹೋಗಿದ್ದರೂ ಕೂಡ ಹೆಣ್ಣು ಮಕ್ಕಳು ತಂದೆ ಆಸ್ತಿಯಲ್ಲಿ ಸಮಾನ ಹಕ್ಕುದಾರರೇ. ಆದರೆ ಎಲ್ಲ ಹೆಣ್ಣು ಮಕ್ಕಳು ಕೂಡ ತಂದೆಯ ಆಸ್ತಿಯಲ್ಲಿ ಪಾಲು ಕೇಳಲು ಬರುವುದಿಲ್ಲ. ಯಾವ ಯಾವ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತಂದೆ ಆಸ್ತಿ (Father’s Property) ಯಲ್ಲಿ ಸಮಾನ ಹಕ್ಕು ಅಥವಾ ಹಕ್ಕು ಕೇಳಲು ಬರುವುದಿಲ್ಲ ಎಂದು ನೋಡುವುದಾದರೆ.

advertisement

ಒಂದು ವೇಳೆ ತಂದೆ ಆಸ್ತಿ (Father’s Property) ಸ್ವಯಾರ್ಜಿತವಾಗಿದ್ದರೆ ಅವರು ತಮ್ಮ ಸ್ವಂತ ದುಡಿಮೆಯಿಂದ ಆಸ್ತಿಯನ್ನು ಸಂಪಾದಿಸಿದ್ದರೆ ಅವರ ಮಕ್ಕಳಲ್ಲಿ ಯಾವ ಮಕ್ಕಳಿಗಾದರೂ ಆಸ್ತಿಯನ್ನು ಮಾಡಿಕೊಡಬಹುದು. ಅವರು ಕ್ರಯ ಪತ್ರದ ಮೂಲಕ ಅಥವಾ ರಿಜಿಸ್ಟರ್ ಮಾಡುವ ಮೂಲಕ ಅಥವಾ ಇನ್ಯಾವುದರದ ಮೂಲಕ ತಮ್ಮ ಆಸ್ತಿ ಹಕ್ಕನ್ನು ತಮ್ಮ ಇಷ್ಟವಾದ ಮಕ್ಕಳಿಗೆ ಕೊಟ್ಟಿದ್ದರೆ ಅದು ಅವರ ಸ್ವಂತ ಸಂಪಾದನೆ ಆಗಿರುವ ಕಾರಣ ಹೆಣ್ಣು ಮಕ್ಕಳು ಅದರಲ್ಲಿ ಪಾಲು ಕೇಳಲು ಬರುವುದಿಲ್ಲ.

ಇನ್ನು ಪಿತ್ರಾರ್ಜಿತ ಆಸ್ತಿಯ ವಿಷಯವಾಗಿ ಹೇಳುವುದಾದರೆ ಪಿತ್ರಾರ್ಜಿತವಾಗಿ ಬಂದ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಖಂಡಿತವಾಗಿಯೂ ಸಮಾನ ಪಾಲು ಇರುತ್ತದೆ ಆದರೆ ಹೆಣ್ಣುಮಕ್ಕಳ ಮದುವೆ ಖರ್ಚಿಗೆ ಮದುವೆ ನಂತರದ ತವರು ಮನೆಯ ಜವಾಬ್ದಾರಿಗಳಿಗೆ ಎಂದು ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಲಾಗಿರುತ್ತದೆ.

ಹೆಣ್ಣುಮಕ್ಕಳು ತಿಳಿದುಕೊಂಡಿರಬೇಕಾದದ್ದು

ಜೊತೆಗೆ ಆಸ್ತಿ ಭಾಗವಾಗುವ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತಮಗೆ ಆಸ್ತಿ ಬೇಡ ಎಂದು ಆಸ್ತಿ ಬದಲು ಬೇರೆ ಏನಾದರೂ ಉಡುಗೊರೆ ಅಥವಾ ಮತ್ತೆ ಏನಾದರೂ ಪಡೆದು ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಆಸ್ತಿಯ ಮೇಲಿನ ಹಕ್ಕನ್ನು ಬಿಟ್ಟು ಕೊಡುತ್ತಿರುತ್ತಾರೆ. ಆ ಹೆಣ್ಣು ಮಕ್ಕಳಿಗೆ ಏನಾದರೂ 2005ಕ್ಕಿಂತ ಹಿಂದೆ ಅಥವಾ 2005 ರಿಂದ ಈಚೆಗೆ ಈ ರೀತಿ ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ತಂದೆಯ ಮನೆಯ ಆಸ್ತಿ ಹಕ್ಕನ್ನು ಬಿಟ್ಟು ಕೊಟ್ಟಿದ್ದರೆ.

ಅವರು ಸಹ ಈ ಪ್ರಕಾರವಾಗಿ ನ್ಯಾಯಾಲಯದಲ್ಲಿ ಧಾವೆ ಹೂಡಲು ಸಾಧ್ಯವಿಲ್ಲ, ಅವರಿಗೂ ಆಸ್ತಿಯಲ್ಲಿ ಪಾಲು ಬರುವುದಿಲ್ಲ. ಜೊತೆಗೆ ತಂದೆಯ ಮನೆಯ ಆಸ್ತಿ 2005 ರಲ್ಲಿ ಆದ ತಿದ್ದುಪಡಿಗಿಂತ ಹಿಂದೆ ವಿಘಟನೆ ಆಗಿ ಹೋಗಿದ್ದರೆ ಅಂತ ಸಂದರ್ಭದಲ್ಲಿ ಕೂಡ ನೀವು ತಂದೆ ಆಸ್ತಿ (Father’s Property) ಯಲ್ಲಿ ಪಾಲು ಕೇಳಲು ಬರುವುದಿಲ್ಲ. ಇದನ್ನು ತಂದೆಯ ಆಸ್ತಿ ಕೇಳುವ ಎಲ್ಲ ಹೆಣ್ಣುಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು

advertisement

Leave A Reply

Your email address will not be published.