Karnataka Times
Trending Stories, Viral News, Gossips & Everything in Kannada

Poultry Farming: ಕೋಳಿ ಸಾಕಾಣಿಕೆ ಮಾಡಲು ಸರ್ಕಾರದಿಂದ ಸಿಗುತ್ತೆ ಉಚಿತ 25 ಲಕ್ಷ ಸಬ್ಸಿಡಿ, ಈ ರೀತಿಯಾಗಿ ಅರ್ಜಿ ಸಲ್ಲಿಸಿ!

advertisement

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಕೃಷಿ ಮಾಡಿಯೇ ಜೀವನ ನಡೆಸುವವರು ಹೆಚ್ಚು. ಹಾಗಾಗಿ ಕೃಷಿ ಚಟುವಟಿಕೆ ಪೂರೈಸಲು ಸರಕಾರ ಇಂದು ಹಲವು ರೀತಿಯ ಸೌಲಭ್ಯ ಗಳನ್ನು ನೀಡುತ್ತಿದೆ. ಅದೇ ರೀತಿ ಕೃಷಿ ಜೊತ ಪ್ರತಿಯೊಬ್ಬ ರಿಗೂ ಸ್ವಂತ ಉದ್ಯೋಗ ಮಾಡಬೇಕು ಎಂಬ ಕನಸು ಬಹಳಷ್ಟು ಜನರಿಗೆ ಇದೆ. ಸರ್ಕಾರವು ಹೈನುಗಾರಿಕೆ (Dairy F0arming), ಮೀನುಗಾರಿಕೆ (Fishing), ಕುರಿ, ಮೇಕೆ, ಕೋಳಿ ಸಾಕಣೆ ಅಥವಾ ಕೃಷಿ ಚಟುವಟಿಕೆಗಳಿಗೆ (Agricultural Activities) ಸಬ್ಸಿಡಿ ಹಣವನ್ನು ನೀಡುತ್ತಿದ್ದು ಇದೀಗ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

ಕಡಿಮೆ ವೆಚ್ಚ, ಲಾಭ ಹೆಚ್ಚು:

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ರೈತರು ಕೃಷಿ ಜೊತೆಗೆ ಕೋಳಿ ಸಾಕಾಣಿಕೆಯತ್ತ ಮುಖ ಮಾಡಿದ್ದು, ಲಾಭ ಕೂಡ ಗಳಿಸುತ್ತಿದ್ದಾರೆ.ಕೋಳಿ ಸಾಕಾಣಿಕೆಯಲ್ಲಿ ಹೆಚ್ಚಿನ ನಿರ್ವಹಣೆ ಕೂಡ ಬೇಕಾಗಿಲ್ಲ. ಸರಿಯಾದ ನೈರ್ಮಲ್ಯ ಅನುಸರಿಸುವ ಮೂಲಕ ನೀವು ಕೋಳಿಗಳ ರಕ್ಷಣೆ ಮಾಡಬಹುದು. ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೂಡ ಕೋಳಿ ಸಾಕಣಿಕೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಈಗಿನ ಕಾಲದಲ್ಲಿ ಯುವಕರು ಈ ಹೈನುಗಾರಿಕೆಯಲ್ಲಿ ಹೆಚ್ಚು ಹೆಚ್ಚು ಪ್ರೇರೇಪಿತರಾಗಿದ್ದು ಕೃಷಿ ಜೊತೆಗೆ ನಾನಾ ರೀತಿಯ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ನೀವು ಕೇವಲ 4 ರಿಂದ 5 ಲಕ್ಷ ರೂಪಾಯಿಗಳಲ್ಲಿ ಈ ವ್ಯವಹಾರವನ್ನು ಪ್ರಾರಂಭ ಮಾಡುವ ಮೂಲಕ ಅಧಿಕ ಲಾಭ ಪಡೆಯಬಹುದು.

ಜಾನುವಾರು ಅಭಿಯಾನಯಡಿ ಸೌಲಭ್ಯ:

 

 

advertisement

ಕೋಳಿ ಸಾಕಾಣಿಕೆ (Poultry Farming) ಉದ್ಯಮ ಆರಂಭಿಸುವ ರೈತರಿಗೆ ರಾಷ್ಟ್ರೀಯ ಜಾನುವಾರು ಅಭಿಯಾನದ ಅಡಿಯ ಮೂಲಕ ಸರ್ಕಾರದಿಂದ 50 ಪ್ರತಿಶತದಷ್ಟು ಸೌಲಭ್ಯ ವನ್ನು ನೀಡಲಾಗುತ್ತದೆ. ರೈತರು ಈ ಸೌಲಭ್ಯ ವನ್ನು ಬಳಸಿಕೊಳ್ಳಬಹುದಾಗಿದೆ. ಹೌದು ಕೋಳಿ ಸಾಕಾಣಿಕೆ ಮಾಡಲು ಶೇ.50ರಷ್ಟು ಅನುದಾನ ಮೂಲಕ ಗರಿಷ್ಠ 25 ಲಕ್ಷ ರೂ. ಗಳ ಸೌಲಭ್ಯ ಪಡೆಯಬಹುದಾಗಿದ್ದು ಈ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಸಾಲವೂ ಸಿಗಲಿದೆ:

ಅದೇ ರೀತಿ ಕೋಳಿ ಸಾಕಾಣಿಕೆ ವ್ಯವಹಾರ ಮಾಡಲು ರೈತರಿಗೆ ಕಡಿಮೆ ದರದಲ್ಲಿ ನಬಾರ್ಡ್‌ನಿಂದ ಸಾಲ ಸೌಲಭ್ಯವು ಸಿಗಲಿದ್ದು ಪ್ರತಿ ಹಳ್ಳಿಗಳಲ್ಲಿ ಡೈರಿ ಫಾರಂಗಳಂತೆ ಕೋಳಿ ಫಾರಂಗಳನ್ನು ಸ್ಥಾಪನೆ ಮಾಡಬಹುದು. ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿ:

ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಸಬ್ಸಿಡಿ ಪಡೆಯಲು https://nlm.udyamimitra.in/ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಿ.ಹೆಚ್ಚಿನ ಮಾಹಿತಿಗಾಗಿ ರೈತರು ಜಿಲ್ಲೆಯ ಪಶು ಸಂಗೋಪನಾ ಇಲಾಖೆ ಕಚೇರಿಗೆ ತೆರಳಿ ಕೋಳಿ ಫಾರ್ಮ್ ಅನ್ನು ಪ್ರಾರಂಭ ಮಾಡುವ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

advertisement

Leave A Reply

Your email address will not be published.