Karnataka Times
Trending Stories, Viral News, Gossips & Everything in Kannada

Car Discounts: ಈ ಜನಪ್ರಿಯ ಕಾರುಗಳು ಮತ್ತು SUV ಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ!

advertisement

ಖಾಸಗಿ ವಾಹನಗಳಷ್ಟು ಆರಾಮದಾಯಕ ಇನ್ನೊಂದಿಲ್ಲ. ಹೌದು ಈಗೀಗ ಮೊದಲಿನ ಹಾಗಿಲ್ಲ. ಸರ್ಕಾರಿ ಬಸ್ ನಂಬಿ ಪ್ರಯಾಣ ಬೆಳೆಸುವ ಕಾಲ ಮರೆಯಾಗಿದೆ ಅದರ ಬದಲಾಗಿ ಮನೆಯಂಗಳದಲ್ಲಿ ಚಂದದ ಕಾರ್ ಗಳು ಬಂದು ನಿಂತಿದೆ.ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಮತ್ತು MY2023 ಸ್ಟಾಕ್  ಕ್ಲಿಯರ್ ಮಾಡುವ ಉದ್ದೇಶದಿಂದ ಕಾರು ಕಂಪನಿಗಳು ತಮ್ಮ ಕೆಲವು ಮಾದರಿಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿವೆ. ಇವುಗಳಲ್ಲಿ SUVಗಳೂ ಸೇರಿವೆ. ಫೆಬ್ರವರಿ 2024 ರಲ್ಲಿ ಮಹೀಂದ್ರಾ ತನ್ನ XUV300 ಮತ್ತು XUV400 ಮೇಲೆ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

ಇಷ್ಟೇ ಅಲ್ಲ, ಮಾರುತಿ ನೆಕ್ಸಾ ಮತ್ತು ಅರೇನಾ ಕಾರುಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ನೀಡುತ್ತಿದೆ. ದೊಡ್ಡ ಮಟ್ಟದ ರಿಯಾಯಿತಿಗಳನ್ನು ನೀಡುತ್ತಿರುವ ಕೆಲವು ಜನಪ್ರಿಯ ಕಾರುಗಳನ್ನು ಇಲ್ಲಿ ಲಿಸ್ಟ್ ಮಾಡಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಈ ಕಾರುಗಳ ಮೇಲಿನ ಡಿಸ್ಕೌಂಟ್ ಮೊತ್ತದಲ್ಲಿ ಬದಲಾವಣೆಯಾಗುವ ಸಂಭವವಿದೆ. ಆದ್ದರಿಂದ, ಬುಕಿಂಗ್ ಮಾಡುವ ಮೊದಲು ಡೀಲರ್‌ಶಿಪ್‌ನಿಂದ ಇವುಗಳ ಬಗ್ಗೆ ಖಚಿತ ಮಾಹಿತಿ ಪಡೆದುಕೊಳ್ಳಿ.

ಫೆಬ್ರವರಿಯಲ್ಲಿ ಜನಪ್ರಿಯ ಕಾರುಗಳ ಮೇಲೆ ರಿಯಾಯಿತಿ ಕೊಡುಗೆಗಳು:

advertisement

  • 2023 Mahindra Bolero ದಲ್ಲಿ 1 ಲಕ್ಷದವರೆಗೆ  ರಿಯಾಯಿತಿ
  • 2023 Hyundai Verna ದಲ್ಲಿ 55,000 ರೂ.ವರೆಗಿನ ರಿಯಾಯಿತಿ
  • 2023 Hyundai Alcazar ನಲ್ಲಿ 45,000 ರೂ.ವರೆಗಿನ  ರಿಯಾಯಿತಿ
  • 2023 Mahindra XUV300 ನಲ್ಲಿ ರೂ 1.82 ಲಕ್ಷದವರೆಗೆ  ರಿಯಾಯಿತಿ
  • 2023 Mahindra XUV400 ನಲ್ಲಿ ರೂ 4.2 ಲಕ್ಷದವರೆಗೆ  ರಿಯಾಯಿತಿ
  • 2023 Maruti Grand Vitara ದಲ್ಲಿ 75,000 ರೂ.ವರೆಗಿನ  ರಿಯಾಯಿತಿ
  • 2023 Maruti Jimny ಯಲ್ಲಿ ರೂ 1.50 ಲಕ್ಷದವರೆಗೆ ರಿಯಾಯಿತಿ
  • 2023 Maruti Fronx ನಲ್ಲಿ ರೂ 83,000 ವರೆಗಿನ  ರಿಯಾಯಿತಿ
  • Maruti Alto ಕK10 ನಲ್ಲಿ ರೂ 62,000 ವರೆಗೆ   ರಿಯಾಯಿತಿ
  • S-Presso ಮತ್ತು ವ್ಯಾಗನ್ R ನಲ್ಲಿ ರೂ 61,000 ರಿಯಾಯಿತಿ
  • Honda City ಯಲ್ಲಿ ರೂ 1.11 ಲಕ್ಷದವರೆಗೆ  ರಿಯಾಯಿತಿ
  • Honda Amaze ನಲ್ಲಿ ರೂ 92,000  ರಿಯಾಯಿತಿ

ಹ್ಯುಂಡೈ ಕಾರುಗಳ ಮೇಲೆ ನಗದು ರಿಯಾಯಿತಿಗಳು:

ಅಷ್ಟೇ ಅಲ್ಲ, ಹ್ಯುಂಡೈ ತನ್ನ ಹಲವು ಕಾರುಗಳ ಮೇಲೆ ರಿಯಾಯಿತಿ (Car Discounts) ನೀಡುತ್ತಿದೆ. 2023 ವೆರ್ನಾ ಸೆಡಾನ್ ಮೇಲೆ  55,000 ರೂ. ವರೆಗೆ ನಗದು ರಿಯಾಯಿತಿ ಮತ್ತು 2023 ಟಕ್ಸನ್ SUV ಮೇಲೆ 2 ಲಕ್ಷದವರೆಗೆ ನಗದು ರಿಯಾಯಿತಿ ನೀಡುತ್ತಿದೆ. ಅದೇ ರೀತಿ, 2023 ಗ್ರಾಂಡ್ ಐ10 ನಿಯೋಸ್, ಅಲ್ಕಾಜರ್, ಔರಾ, ವೆನ್ಯೂ ಮತ್ತು ಐ20 ಗಳ ಮೇಲೆ ಕ್ರಮವಾಗಿ 48,000 ರೂ., 45,000 ರೂ.33,000 ರೂ., 30,000 ರೂ. ಮತ್ತು 30,000 ರೂ. ವರೆಗೆ ರಿಯಾಯಿತಿ ನೀಡಲಾಗುತ್ತಿದೆ.

advertisement

Leave A Reply

Your email address will not be published.